ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 476 ಮಂದಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 158 ಮಂದಿ ಗುಣಮುಖರಾಗಿದ್ದಾರೆ. 451 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ.
ಜಿಲ್ಲೆಯಲ್ಲಿ 4486 ಜನರು ನಿರೀಕ್ಷಣೆಯಲ್ಲಿ:
ಜಿಲ್ಲೆಯಲ್ಲಿ ಒಟ್ಟು ಈಗ 4486 ಮಂದಿ ಕ್ವಾರಂಟೈನ್ ನಲ್ಲಿರುವರು. ಮನೆಗಳಲ್ಲಿ 3300 ಮತ್ತು ಸಂಸ್ಥೆಗಳಲ್ಲಿ 1186 ಮಂದಿ ಇದ್ದಾರೆ. ಹೊಸದಾಗಿ ಸೇರಿಸಲಾದ 263 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 1816 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 412 ಜನರ ಪರೀಕ್ಷಾ ಫಲಿತಾಂಶಗಳನ್ನು ಇನ್ನೂ ಪಡೆಯಬೇಕಾಗಿದೆ. 208 ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 475 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 317 ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯ 11734 ಜನರಲ್ಲಿ ದೃಢಪಡಿಸಲಾಗಿದೆ. ಈ ಪೈಕಿ 745 ಮಂದಿ ವಿದೇಶದಿಂದ ಬಂದವರು, 582 ಇತರ ರಾಜ್ಯಗಳಿಂದ ಬಂದವರು. ಮತ್ತು 10407 ಮಂದಿ ಸಂಪರ್ಕದ ಮೂಲಕ ಸೋಂಕಿಗೊಳಗಾಗಿದ್ದಾರೆ. ಇಲ್ಲಿಯವರೆಗೆ 8415 ಜನರು ಕೋವಿಡ್ ಋಣಾತ್ಮಕ ಎಂದು ಕಂಡುಬಂದಿದೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 94 ಕ್ಕೆ ಏರಿದೆ. ಪ್ರಸ್ತುತ, 3225 ಜನರು ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಪೈಕಿ 1751 ಮಂದಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಸೋಂಕು ಬಾಧಿತರ ಪಂಚಾಯತಿವಾರು ವಿವರ:
ಕಾಞಂಗಾಡು -47, ನಿಲೇಶ್ವರ -17, ಪಿಲಿಕೋಡ್- 4, ಈಸ್ಟ್ ಎಳೇರಿ -1, ಮಡಿಕೈ -19, ಬೇಡಡ್ಕ -3, ಮೊಗ್ರಾಲ್ ಪುತ್ತೂರ್ -4, ಕಾಸರಗೋಡು -16, ಮಧೂರು-11
ಉದುಮ -8, ಚೆಂಗಳ -21, ಪುಲ್ಲೂರು ಪೆರಿಯ-11, ಚೆರ್ವತ್ತೂರು-25, ಪಳ್ಳಿಕ್ಕೆರೆ -34, ಅಜನೂರ್ -21, ಮಂಗಲ್ಪಾಡಿ- 38, ಕೋಡೋಂ ಬೆಳ್ಳೂರು-10, ಚೆಮ್ನಾಡ್ -24
ಕೈಯ್ಯೂರು-ಚೀಮೆನಿ -12, ಪೈವಳಿಕೆ -5, ಕಿನನೂರ್ ಕರಿಂದಳ-3, ಕಳ್ಳಾರ್ -11, ಕುತ್ತಿಕೋಲ್-11, ತ್ರಿಕ್ಕರಿಪುರ -24, ವಲಿಯಪರಂಬ -1, ವರ್ಕಾಡಿ -1, ಬಳಾಲ್ -6, ಎಣ್ಮಕಜೆ -15, ಮುಳಿಯಾರ್ -13, ಕುಂಬಳೆ -4, ಪುತ್ತಿಗೆ -2, ದೇಲಂಪಾಡಿ -11, ಪನತ್ತಡಿ -5, ಮಂಜೇಶ್ವರ -2, ಕಾರಡ್ಕ -1, ಮೀಂಜ -1, ವೆಸ್ಟ್ ಎಳೇರಿ -1, ಎಂಬಂತೆ ಇಂದು ಸೋಂಕು ಬಾಧಿಸಿದೆ. ಕಣ್ಣೂರು ಜಿಲ್ಲೆಯ ಕರಿವೆಳ್ಳೂರ್ -1, ಎಡವಾಕ -1, ಕುಂಞï ಮಂಗಲಂ -1, ಪಯ್ಯನ್ನೂರು -1, ತ್ತಿಕ್ಕೋವಿಲ್ ವಟ್ಟಂ -1 ಎಂಬಂತೆ ಸೋಂಕು ಬಾಧಿಸಿದೆ.
ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆ ಕಠಿಣ ನಿಲುವು ತಳೆದಿದ್ದು ಸೆಕ್ಷನ್ 144 ಜಾರಿಗೊಳಿಸಿದೆ. ಇದರಂತೆ 5 ಮಂದಿಗಿಂತ ಹೆಚ್ಚು ಸಾರ್ವಜನಿಕವಾಗಿ ಒಟ್ಟು ಸೇರುವಂತಿಲ್ಲ. ವಿವಾಹ ಸಮಾರಂಭದಲ್ಲಿ 50 ಮಂದಿ ಹಾಗೂ ಮರಣ ಕಾರ್ಯಕ್ರಮದಲ್ಲಿ 20 ಮಂದಿಗಳಿಗಿಂತ ಹೆಚ್ಚು ಜೊತೆ ಸೇರುವಂತಿಲ್ಲ. ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಂಸ್ಥಿಕ ಲಾಕ್ ಡೌನ್ ಏರ್ಪಡಿಸಲಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ನಿಯಂತ್ರಣಗಳಿರಲಿವೆ.