ನವದೆಹಲಿ: ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳ 4 ದಿನಗಳ ದ್ವೈವಾರ್ಷಿಕ ಸಮಾವೇಶ ಇಂದು ಆರಂಭಗೊಂಡಿದ್ದು, ಪೂರ್ವ ಲಡಾಕ್‌ನಲ್ಲಿ ಸೇನೆಯ ಯುದ್ಧ ಸನ್ನದ್ಧತೆ ಮತ್ತು ಚೀನಾದೊಂದಿಗಿನ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿನ ಇತರ ಸೂಕ್ಷ್ಮ ಪ್ರದೇಶಗಳ ಒಟ್ಟಾರೆ ಮೌಲ್ಯಮಾಪನ ನಡೆಸುವ ಸಾಧ್ಯತೆ ಇದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಅ 27 ರಂದು ಕಮಾಂಡರ್ ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
‘ಈ ಸಮಾವೇಶದಲ್ಲಿ ಸೇನಾ ಮುಖ್ಯಸ್ಥರು, ಸೇನೆಯ ಹಿರಿಯ ಅಧಿಕಾರಿಗಳು, ಎಲ್ಲಾ ಸೇನಾ ಕಮಾಂಡರ್‌ಗಳುಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.’ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.