HEALTH TIPS

5 ವರ್ಷಗಳಲ್ಲಿ 5800 ಕ್ಕೂ ಹೆಚ್ಚು ಸಾವಿನ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡು ವಿಶಿಷ್ಟರೆನಿಸಿದ ತಮರತ್ ಹಮ್ಸು- ಸಾವಿನದೊಂದೇ ಮಾಹಿತಿಗಿದೆ 50 ವಾಟ್ಸಾಪ್ ಗುಂಪುಗಳು!

  

        ಮಲಪ್ಪುರಂ: ಸಂತೋಷವನ್ನು ಹಂಚಿಕೊಳ್ಳಲು ಮತ್ತು ಚಿತ್ರಗಳನ್ನು ಪೆÇೀಸ್ಟ್ ಮಾಡಲು ಕೆಲವರು ಮುಖ್ಯವಾಗಿ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸುವುದು ಸಾಮಾನ್ಯ. ಪೆರಿಂತಲ್ಮಣ್ಣದ ತಮರತ್ ಹಮ್ಸು ಈ ಎಲ್ಲಕ್ಕಿಂತ ಭಿನ್ನವಾದ ಹವ್ಯಾಸ ಬೆಳೆಸಿದವರು. ಸಹಕಾರಿ ಬ್ಯಾಂಕಿನಿಂದ ನಿವೃತ್ತರಾದ 65 ವರ್ಷದ ಇವರು ಕಳೆದ ಐದು ವರ್ಷಗಳಿಂದ ಸಾವಿನ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವೈತ್ಯಸ್ಥರಾಗಿ ಗಮನ ಸೆಳೆಯುತ್ತಾರೆ. 

        ಸಾವು ಬಹಳ ಭಾವನಾತ್ಮಕ ವಿಷಯ. ಯಾವುದೇ ಅಪಾರ್ಥ, ಗೊಂದಲಗಳಿಗೆ ಎಡೆಯಾಗದಂತೆ ಜನರಿಗೆ ಮಾಹಿತಿಯನ್ನು ತಲಪಿಸಲು ತಾನು ಈ ಸಾಮಾಜಿಕ ಸೇವೆಯನ್ನು ಪ್ರಾರಂಭಿಸಿರುವುದಾಗಿ ಹಂಸ ಅವರು ಹೇಳುತ್ತಾರೆ.

       ತಮರತ್ ಹಮ್ಸು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವ ಮಾಹಿತಿಯು ಇತರ ಸಾವಿನ ಸುದ್ದಿಗಳಿಗಿಂತ ಭಿನ್ನವಾಗಿರುತ್ತದೆ. ಸಾವಿನ ಸುದ್ದಿಯನ್ನು ವಿವರವಾಗಿ ನೀಡುವುದು ಇವರ ಮಾಹಿತಿಯ ಪ್ರಮುಖ ಅಂಶ. ಹಂಚುವ ಮಾಹಿತಿ ನಿಖರವಾಗಿದ್ದು, ಯಾವುದೇ ತಪ್ಪುಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕುಟುಂಬದಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ಈ ಪ್ರದೇಶದ ಅನೇಕ ಜನರು ತಮರತ್ ಹಮ್ಸು ಅವರ ಮೂಲಕ ಸಾವಿನ ಸುದ್ದಿಯನ್ನು ಬಿತ್ತರಿಸಲು ಅವರನ್ನು ಸಂಪರ್ಕಿಸುತ್ತಾರೆ. ತಮರತ್ ಹಮ್ಸು ಪ್ರಕಾರ ಪ್ರತಿದಿನ ಸರಾಸರಿ ಮೂರರಿಂದ ಐದು ಸಾವುಗಳು ಸಂಭವಿಸುತ್ತವೆ.

       2015 ರ ನವೆಂಬರ್‍ನಲ್ಲಿ ಇವರ ಮೊತ್ತಮೊದಲ ಮೃತಪಟ್ಟಿದ್ದಾರೆ ಎಂದು ವರದಿ ಆರಂಭಗೊಂಡಿತು. ಕಳೆದ ಐದು ವರ್ಷಗಳಲ್ಲಿ, 5,800 ಸಾವುಗಳು ಸಾಮಾಜಿಕ ಮಾಧ್ಯಮದಲ್ಲಿ ವರದಿಯಾಗಿವೆ. ಇನ್ನೊಂದು ವೈಶಿಷ್ಟ್ಯವೆಂದರೆ ಅವರು ಈವರೆಗೆ ಸೋಷಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್ ಮೂಲಕ ಬೇರೆ ಏನನ್ನೂ ಹಂಚಿಕೊಂಡಿಲ್ಲ.

        ಅವರ ಫೇಸ್‍ಬುಕ್ ಪುಟದ ಜೊತೆಗೆ, ಅವರು 50 ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ಸಹ ನಿರ್ವಹಿಸುತ್ತಾರೆ. ಪ್ರತಿಯೊಂದು ಗುಂಪಲ್ಲೂ 257 ಸದಸ್ಯರಿದ್ದಾರೆ. ಗುಂಪುಗಳಿಗೆ  ಡೆತ್ ನ್ಯೂಸ್ ಎಂದು ಗ್ರೂಪ್ ನೇಮ್ ಇರಿಸಲಾಗಿದೆ. ಅವರು ಸದಸ್ಯರಾಗಿರುವ ಇತರ 50 ವಾಟ್ಸಾಪ್ ಗುಂಪುಗಳೊಂದಿಗೆ ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇದಲ್ಲದೆ, ಟೆಲಿಗ್ರಾಮ್ ಗ್ರೂಪ್ ಮೂಲಕ ಸುದ್ದಿ ರವಾನೆಯಾಗುತ್ತದೆ.

     ಹೀಗೆ ವಿಶಿಷ್ಟ ಹವ್ಯಾಸಗಳ ಮೂಲಕ ಕೆಲವರು ಸಮಾಜದಲ್ಲಿ ವಿಭಿನ್ನರಾಗಿ ಗುರುತಿಸಲ್ಪಡುತ್ತಿದ್ದು ಇಂತಹ ಯೋಗದಾನಿಗಳು ಸಮಾಜದ ಕಣ್ಣುಗಳೆಂದರೂ ತಪ್ಪಲ್ಲ. ನಿಮ್ಮ ಅರಿಗೆ ಇಂತಹ ವ್ಯಕ್ತಿತ್ವದವರು ಕಂಡುಬಂದಲ್ಲಿ ಸಮಸರದೊಂದಿಗೆ ಹಂಚುವ ಮೂಲಕ ಸಹಕರಿಸಬಹುದಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries