ತಿರುವನಂತಪುರ: ರಾಜ್ಯದಲ್ಲಿ ಇಂದು 4 ಹೊಸ ಹಾಟ್‍ಸ್ಪಾಟ್‍ಗಳನ್ನು ಗುರುತಿಸಲಾಗಿದೆ. ಈ ಹಿಂದಿನ 7 ಹಾಟ್‍ಸ್ಪಾಟ್ ಪ್ರದೇಶಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 722 ಹಾಟ್ ಸ್ಪಾಟ್‍ಗಳಿವೆ. ಏತನ್ಮಧ್ಯೆ, ಕೋವಿಡ್ ಇಂದು ರಾಜ್ಯದಲ್ಲಿ 5042 ಮಂದಿಗಳಲ್ಲಿ ದೃಢಪಡಿಸಲಾಗಿದೆ. 23 ಕೋವಿಡ್ ಮರಣಗಳು ಉಂಟಾಗಿವೆ. ಸಂಪರ್ಕದ ಮೂಲಕ 4338 ಜನರಿಗೆ ಸೋಂಕು ತಗುಲಿದೆ. 110 ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದೆ. 4640 ಪರೀಕ್ಷಾ ಫಲಿತಾಂಶ ಋಣಾತ್ಮಕವಾಗಿದೆ.
ಕೋವಿಡ್ ಪಾಸಿಟಿವ್ ಆದವರ ವಿವರಗಳು:
ಎರ್ನಾಕುಳಂ 705, ತಿರುವನಂತಪುರ 700, ಕೋಝಿಕ್ಕೋಡ್ 641, ಮಲಪ್ಪುರಂ 606, ಕೊಲ್ಲಂ 458, ತೃಶೂರ್ 425, ಕೋಟ್ಟಯಂ 354, ಕಣ್ಣೂರು 339, ಪಾಲಕ್ಕಾಡ್ 281, ಕಾಸರಗೋಡು 207, ಆಲಪ್ಪುಳ 199, ಇಡಿಕ್ಕಿ 71, ವಯನಾಡ್ 31, ಪತ್ತನಂತಿಟ್ಟು 25 ಎಂಬಂತೆ ಸೋಂಕು ದೃಢಪಟ್ಟಿದೆ. ನಿನ್ನೆ ಭಾನುವಾರವಾದ ಕಾರಣ ಪರೀಕ್ಷೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರಲಿಲ್ಲ ಎಂದು ತಿಳಿದುಬಂದಿದೆ.
ಕೋವಿಡ್ ಹಾಟ್‍ಸ್ಪಾಟ್‍ಗಳು:
ಇಂದು 4 ಹೊಸ ಹಾಟ್‍ಸ್ಪಾಟ್‍ಗಳನ್ನು ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯ ವರ್ಕಾಡಿ (ಕಂಟೋಂನ್ಮೆಂಟ್ ವಲಯ ವಾರ್ಡ್‍ಗಳು 2, 5, 13), ಪಾಲಕ್ಕಾಡ್ ಜಿಲ್ಲೆಯ ಆನಕ್ಕರ (15), ಮಧೂರು(2) ಮತ್ತು ಮಲಪ್ಪುರಂ ಕರುವಕುರ್ಂಡ್ (2, 8, 12).ಹಾಟ್‍ಸ್ಪಾಟ್ ಗಳಾಗಿವೆ. 7 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ ಒಟ್ಟು 722 ಹಾಟ್‍ಸ್ಪಾಟ್‍ಗಳಿವೆ.
ಸಂಪರ್ಕದಿಂದ ಸೋಂಕು:
ಸಂಪರ್ಕದ ಮೂಲಕ ಇಂದು 4338 ಜನರಿಗೆ ಸೋಂಕು ತಗುಲಿತು. 450 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 587, ತಿರುವನಂತಪುರ 532, ಕೋಝಿಕ್ಕೋಡ್ 609, ಮಲಪ್ಪುರಂ 545, ಕೊಲ್ಲಂ 451, ತ್ರಿಶೂರ್ 413, ಕೊಟ್ಟಾಯಂ 348, ಕಣ್ಣೂರು 212, ಪಾಲಕ್ಕಾಡ್ 188, ಕಾಸರಗೋಡು 187, ಆಲಪ್ಪುಳ 194, ಇಡುಕ್ಕಿ 36, ವಯನಾಡ್ 14, ಪತ್ತನಂತಿಟ್ಟು 12 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದವರಾಗಿದ್ದಾರೆ. ಇಂದು ರೋಗನಿರ್ಣಯ ಮಾಡಿದವರಲ್ಲಿ 29 ಮಂದಿ ವಿದೇಶಗಳಿಂದ ಮತ್ತು 102 ಇತರ ರಾಜ್ಯಗಳಿಂದ ಬಂದವರು.
ಪರೀಕ್ಷಿಸಿದ ಮಾದರಿಗಳು:
ಕಳೆದ 24 ಗಂಟೆಗಳಲ್ಲಿ 38,696 ಮಾದರಿಗಳನ್ನು ಪರೀಕ್ಷಿಸಲಾಗಿದೆ. ವಾಡಿಕೆಯ ಮಾದರಿಗಳು, ವಿಮಾನ ನಿಲ್ದಾಣ ಕ್ವಾರಂಟೈನ್ , ಪೂಲ್ಡ್ ಸೆಂಟಿನೆಲ್, ಸಿಬಿನಾಟ್, ಟ್ರುನಾಟ್, ಸಿಎಲ್‍ಐಎ ಮತ್ತು ಆಂಟಿಜೆನ್ ಅಸ್ಸೇ ಸೇರಿದಂತೆ ಒಟ್ಟು 31,98,423 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೆಂಟಿನೆಲ್ ಕ್ವಾರಂಟೈನ್ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಹೆಚ್ಚಿನ ಸಾಮಾಜಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸೇರಿದಂತೆ ಆದ್ಯತೆಯ ಗುಂಪುಗಳಿಂದ 2,08,481 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ದೊಡ್ಡ ಸಂಖ್ಯೆಯ ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ಇಂದು ರಾಜ್ಯಾದ್ಯಂತ 110 ಆರೋಗ್ಯ ಕಾರ್ಯಕರ್ತರಿಗೆ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು. ಕಣ್ಣೂರು 35, ಎರ್ನಾಕುಳಂ 19, ತಿರುವನಂತಪುರ 18, ಕೋಝಿಕ್ಕೋಡ್ 10, ತ್ರಿಶೂರ್ 6, ಕೊಲ್ಲಂ, ಮಲಪ್ಪುರಂ ತಲಾ 5, ಪತ್ತನಂತಿಟ್ಟು , ಪಾಲಕ್ಕಾಡ್ ತಲಾ 3, ವಯನಾಡ್, ಕಾಸರಗೋಡು ತಲಾ 2, ಆಲಪ್ಪುಳ ಮತ್ತು ಕೊಟ್ಟಾಯಂ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.