ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಆರ್ಥಿಕ ಮಂದಗತಿಯ ಬೆಳವಣಿಗೆಯಿಂದ ತೊಂದರೆಯಲ್ಲಿರುವ ಎಂಎಸ್‌ಎಂಇ ವಲಯಕ್ಕೆ 3 ಲಕ್ಷ ಕೋಟಿ ರೂ.ಗಳ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಬ್ಯಾಂಕುಗಳು ಸುಮಾರು 1,87,579 ಕೋಟಿ ರೂ. ಸಾಲವನ್ನು 50.7 ಲಕ್ಷ ವ್ಯಾಪಾರ ಘಟಕಗಳಿಗೆ ಮಂಜೂರು ಮಾಡಿವೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
ಇದರಲ್ಲಿ ಅಕ್ಟೋಬರ್ 5ರವರೆಗೆ ಸುಮಾರು 27 ಲಕ್ಷ ಎಂಎಸ್‌ಎಂಇ ಘಟಕಗಳು ಒಟ್ಟು 1,36,140 ಕೋಟಿ ರೂ. ಗಳನ್ನು ಸ್ವೀಕರಿಸಿದೆ.ಕೋವಿಡ್ -19 ಕಾರಣದಿಂದಾಗಿ ಲಾಕ್‌ಡೌನ್‌ನಿಂದ ಉಂಟಾದ ತಿಂದರೆಯ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಈ ನೆರವನ್ನು ನೀಡಿದೆ.
ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ವರದಿಯಂತೆ ಇಸಿಎಲ್‌ಜಿಎಸ್‌ನ ಇತ್ತೀಚಿನ ಅಂಕಿ ಸಂಖ್ಯೆಗಳು ಎಲ್ಲಾ 12 ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ), 24 ಖಾಸಗಿ ವಲಯದ ಬ್ಯಾಂಕುಗಳು ಮತ್ತು 31 ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ವಿತರಣೆಯನ್ನು ಒಳಗೊಂಡಿದೆ.
"5 ಅಕ್ಟೋಬರ್ 2020 ರ ಹೊತ್ತಿಗೆ ಪಿಎಸ್‌ಬಿಗಳು, ಖಾಸಗಿ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳುಎಂಎಸ್‌ಎಂಇಗಳು ಮತ್ತು ವ್ಯಕ್ತಿಗಳಿಗೆ 100% ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತವು 1,87,579 ಕೋಟಿ ರೂ., ಅದರಲ್ಲಿ 1,36,140 ಕೋಟಿ ರೂ. ವಿತರಣೆಯಾಗಿದೆ, "ಎಂದು ಹಣಕಾಸು ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಪಿಎಸ್‌ಬಿಗಳು ಮಂಜೂರು ಮಾಡಿದ ಸಾಲದ ಮೊತ್ತವನ್ನು 81,648.82 ಕೋಟಿ ರೂ.ಗೆ ಹೆಚ್ಚಿಸಲಾಗಿದ್ದು, ಅದರಲ್ಲಿ ಅಕ್ಟೋಬರ್ 5 ರವರೆಗೆ 68,814.43 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದ ಅದೇ ಸಮಯದಲ್ಲಿ, ಖಾಸಗಿ ವಲಯದ ಬ್ಯಾಂಕುಗಳು 86,576 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿವೆ ಮತ್ತು 59,740 ಕೋಟಿ ರೂ.ಗಳನ್ನು ವಿತರಿಸಿದ್ದರೆ, ಎನ್‌ಬಿಎಫ್‌ಸಿಗಳು 3,032 ಕೋಟಿ ರೂ. ಮಂಜೂರು ಮಾಡಿದ್ದು ಅದರಲ್ಲಿ 2,227 ಕೋಟಿ ರೂ. ವಿತರಿಸಿವೆ.
2020 ರ ಅಕ್ಟೋಬರ್ 05 ರ ಹೊತ್ತಿಗೆ, ವ್ಯಕ್ತಿಗಳಿಗೆ 17,460 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ 5,939 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಮತ್ತೊಂದು ಟ್ವೀಟ್‌ನಲ್ಲಿ, 4,197 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಸಿಲುಕಿರುವ 33 ವಸತಿ ಯೋಜನೆಗಳಿಗೆ SWAMIH ಯೋಜನೆಯಡಿ ಅಂತಿಮ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು. "ಕೈಗೆಟುಕುವ ಮತ್ತು ಮಧ್ಯಮ ಆದಾಯದ ವಸತಿ ನಿಧಿಯ ವಿಶೇಷ ವಿಂಡೋ (SWAMIH) ಮನೆಮಾಲೀಕರಿಗೆ ಪರಿಹಾರ ಒದಗಿಸಲು ವೇಗವಾಗಿ ಕೆಲಸ ಮಾಡುತ್ತಿದೆ. 05.10.2020ರ ಅಂಕಿ ಅಂಶದಂತೆ 4,197 ಕೋಟಿ ರೂ.ಗಳ ಹೂಡಿಕೆಯೊಂದಿಗೆ 33 ಯೋಜನೆಗಳು ಅಂತಿಮ ಅನುಮೋದನೆಯನ್ನು ಪಡೆದಿದೆ. 25,048 ಹೋಮ್ ಯುನಿಟ್ ಗಳು ಪೂರ್ಣಗೊಳಿಸಲು ಕಾರಣವಾಗಿದೆ"ಎಂದು ಹಣಕಾಸು ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ, 33 ಯೋಜನೆಗಳಿಗೆ ಅಂತಿಮ ಅನುಮೋದನೆ ಸೇರಿದಂತೆ 123 ಯೋಜನೆಗಳಿಗೆ ಈಗ ಅನುಮತಿ ನೀಡಲಾಗಿದ್ದು, 12,079 ಕೋಟಿ ರೂ.ಗಳ ಹೂಡಿಕೆಯೊಂದಿಗೆ 81,308 ಮನೆಮಾಲೀಕರಿಗೆ ಪರಿಹಾರ ನೀಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಎಂಎಸ್‌ಎಂಇ ವಲಯಕ್ಕೆ ಇಸಿಎಲ್‌ಜಿಎಸ್ ಮೂಲಕ ಶೇ 9.25 ರಷ್ಟು ರಿಯಾಯಿತಿ ದರದಲ್ಲಿ 3 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಮೇ 20 ರಂದು ಕ್ಯಾಬಿನೆಟ್ ಅನುಮೋದಿಸಿತು.