ನವದೆಹಲಿ: ಕೊರೋನಾ ಕಾಲದಲ್ಲಿ ಚಿನ್ನದ ಆಮದು ಕುಸಿತ ಕಂಡಿದೆ. ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ.57 ರಷ್ಟು, 6.8 ಬಿಲಿಯನ್ ಡಾಲರ್ (50,658 ಕೋಟಿ ರೂಪಾಯಿ) ಗಳಿಗೆ ಆಮದು ಇಳಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು 15.8 ಬಿಲಿಯನ್ ( 1,10,259 ರೂಪಾಯಿಗಳಷ್ಟಿತ್ತು)
ಇದೇ ವೇಳೆ ಏಪ್ರಿಲ್-ಸೆಪ್ಟೆಂಬರ್ ಅವಧಿಯ ಬೆಳ್ಳಿ ಆಮದು ಸಹ ಶೇ.63.4 ರಷ್ಟು ಅಂದರೆ 733.57 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ( 5,543 ಕೋಟಿ ರೂಪಾಯಿಗಳಿಗೆ) ಇಳಿಕೆಯಾಗಿದೆ. ಚಿನ್ನ ಹಾಗೂ ಬೆಳ್ಳಿಯ ಆಮದು ಅಮೆರಿಕ- ಭಾರತದ ನಡುವೆ ಇದ್ದ ವ್ಯಾಪಾರದ ಕೊರತೆಯನ್ನು ಸರಿತೂಗಿಸಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.