HEALTH TIPS

ನವಂಬರ್ 5 ರೊಳಗೆ ಸಾಲ ಪಡೆದವರ ಖಾತೆಗೆ ಚಕ್ರ ಬಡ್ಡಿ ಹಣ ವಾಪಸ್: ಸುಪ್ರೀಂ ಗೆ ಕೇಂದ್ರದ ಪ್ರಮಾಣ ಪತ್ರ

        ನವದೆಹಲಿ: ಲೋನ್ ಮೊರಾಟೋರಿಯಂ (ಸಾಲ ಮರುಪಾವತಿ ಅವಧಿ ವಿಸ್ತರಣೆ)ಯಲ್ಲಿ ಅರ್ಹ ಸಾಲಗಾರರ ಖಾತೆಗಳಿಗೆ ಚಕ್ರಬಡ್ಡಿಯನ್ನು ವಾಪಸ್ ನೀಡಲು ಸಾಲ ನೀಡಿರುವ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

      2 ಕೋಟಿ ರೂಪಾಯಿ ಮೊತ್ತದ ಸಾಲಗಳಿಗೆ ವಿಧಿಸಲಾಗಿರುವ, ಆರ್ ಬಿಐ ಸಾಲ ಮರುಪಾವತಿ ಅವಧಿ ವಿಸ್ತರಣೆ ಯೋಜನೆಯಡಿ ಬರುವ ಚಕ್ರ ಬಡ್ಡಿಗಳಿಗೆ ಈ ನಿಯಮ ಅನ್ವಯವಾಗಲಿದೆ.  ಹಣವನ್ನು ಸಾಲ ಪಡೆದಿರುವವರ ಖಾತೆಗೆ ಜಮೆ ಮಾಡಿದ ಬಳಿಕ ಸಾಲ ನೀಡಿರುವ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಆ ಹಣವನ್ನು ಪಡೆಯಬಹುದಾಗಿದೆ ಎಂದೂ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

      ಕೋವಿಡ್-19ರ ಅವಧಿಯಲ್ಲಿ ಘೋಷಿಸಲಾಗಿದ್ದ 6 ತಿಂಗಳ ಮೊರಾಟೋರಿಯಂ ಅವಧಿಗೆ ಮಾತ್ರ ಈ ಚಕ್ರಬಡ್ಡಿ ಹಣ ವಾಪಸ್ ನೀಡಲಾಗುತ್ತದೆ ಎಂದು ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries