ಕಾಸರಗೋಡು: ಕಿಫ್ ಬಿಯ ನಿಧಿ ಬಳಸಿ ನಿರ್ಮಿಸಿರುವ 2 ಶಾಲೆಗಳ ಕಟ್ಟಡಗಳ ಉದ್ಘಾಟನೆ ಮತ್ತು ಮೂರು ಶಾಲೆಗಳ ಕಟ್ಟಡ ನಿರ್ಮಾಣಗಳ ಶಿಲಾನ್ಯಾಸ ಶನಿವಾರ ಜರಗಿತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಈ ಕಾರ್ಯಗಳನ್ನು ನೆರವೇರಿಸಿದರು. ರಾಜ್ಯದ 144 ಸಾರ್ವಜನಿಕ ಶಿಕ್ಷಣಾಲಯಗಳು ಉನ್ನತಿ ಸಾಧಿಸಲಿದ್ದು, ಈ ಮೂಲಕ ಕಾಸರಗೋಡು ಜಿಲ್ಲೆಯ 5 ಶಾಲೆಗಳೂ ಅಭಿವೃದ್ಧಿ ಕಾಣುತ್ತಿವೆ.
ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಕ್ ಪ್ರದಾನ ಭಾಷಣ ಮಾಡಿದರು.
ಕಿಫ್ ಬಿಯ 3 ಕೋಟಿ ರೂ. ಆರ್ಥಿಕ ಸಹಾಯದೊಂದಿಗೆ ನಿರ್ಮಸಿಲಾದ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ , ಯೋಜನೆ ನಿಧಿ ಬಳಸಿ ನಿರ್ಮಿಸಿರುವ ಸರಕಾರಿ ಅಂಧ ವಿದ್ಯಾಲಯ ಆವರಣದ ವಿಶೇಷ ಶಿಕ್ಷಕರ ತರಬೇತಿ ಕೇಂದ್ರ ಕಟ್ಟಡಗಳ ಉದ್ಘಾಟನೆ ಮತ್ತು ಕಿಫ್ ಬಿಯ 3 ಕೊಟಿ ರೂ. ಆರ್ಥಿಕ ಸಹಾಯ ಬಳಸಿ ನಿರ್ಮಿಸುವ ಕುಂಬಳೆ ಬುನಾದಿ ಶಾಲೆ, ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಸರಕಾರಿ ವೊಕೇಶನ್ ಹೈಯರ್ ಸೆಕೆಂಡರಿ ಶಾಲೆ ಗಳ ನೂತನ ಕಟ್ಟಡಗಳಿಗೆ ಶಿಲಾನ್ಯಾಸ ಈ ವೇಳೆ ನಡೆಯಿತು.
ಕೇರಳ ದ್ವಿತೀಯ ಶಿಕ್ಷಣ ಕ್ರಾಂತಿಗೆ ಸಿದ್ಧವಾಗುತ್ತಿದೆ: ಸ್ಪೀಕರ್
ಕೇರಳ ರಾಜ್ಯ ದ್ವಿತೀಯ ಶಿಕ್ಷಣ ಕ್ರಾಂತಿಗೆ ಸಿದ್ಧವಾಗುತ್ತಿದೆ ಎಂದು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಯಜ್ಞ ಅಂಗವಾಗಿ ರಾಜ್ಯದ ಸಾರ್ವಜನಿಕ ಶಿಕ್ಷಣಾಲಯಗಳ ಅಭಿವೃದ್ಧಿ ಚಟುವಟಿಕೆಗಳ ಚಾಲನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಎಲ್ಲ ಕಾಲಗಳಲ್ಲೂ ಕೇರಳದ ಶಿಕ್ಷಣ ವಲಯ ಜಗತ್ತಿನ ಮುಂದೆ ತಲೆಎತ್ತಿ ನಿಂತಿದೆ. ಜನಪರ ಚಟುವಟಿಕೆಗಳ ಮೂಲಕ ಕಳೆದ 4 ವರ್ಷಗಳ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಒದಗಿಸುವ ಭರವಸೆ ಈಗ ಈಡೇರುತ್ತಿರುವುದು ಸುಲಭದ ಮಾತಲ್ಲ. ಇದಕ್ಕಾಗಿ ಸತತ ಯತ್ನ ನಡೆದುಬರುತ್ತಿದೆ. ಡಿಜಿಟಲ್ ಯುಗದಲ್ಲಿ ಅಗಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಅನಿವಾರ್ಯ. ಡಿಜಿಟಲ್ ಡಿವೈಡ್ ಇಂದಿನ ಪ್ರದಾನ ಸಮಸ್ಯೆಯಾಗಿದೆ. ಇದನ್ನೂ ಮೀರಿ ಡಿಜಿಟಲ್ ಲೋಕದಲ್ಲಿ ನಮ್ಮ ಮಕ್ಕಳು ಪ್ರಾಪ್ತರಾಗಬೇಕು. ಡಿಜಿಟಲ್ ಸಿಟಿಝನ್ ಶಿಪ್ ಎಂಬ ಪರಿಸ್ಥಿತಿಯನ್ನು ಅರಗಿಸಿಕೊಳ್ಳುವ ಸ್ಥಿತಿ ಒದಗಬೇಕು ಎಂದರು.