HEALTH TIPS

ಕಾಸರಗೋಡು ಜಿಲ್ಲೆಯ 5 ಗಡಿ ರಸ್ತೆಗಳಲ್ಲಿ ಆಂಟಿಜೆನ್ ಟೆಸ್ಟ್ ಸೌಲಭ್ಯ ಜಾರಿ

      ಕಾಸರಗೋಡು: ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳಲ್ಲಿ 5 ಗಡಿ ರಸ್ತೆಗಳ ಚೆಕ್ ಪೆÇೀಸ್ಟ್ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್ ನೆಗೆಟಿವ್ ಆಗಿರುವ ಸರ್ಟಿಫೀಕೆಟ್ ಇಲ್ಲದ ಮಂದಿಗೆ ಆಂಟಿಜೆನ್ ಟೆಸ್ಟ್ ನಡೆಸಲು ಸೌಲಭ್ಯ ಸಜ್ಜುಗೊಳಿಸಲಾಗುವುದು. 

        ವೀಡಿಯೋ ಕಾನ್ ಫೆರೆನ್ಸ್ ಮೂಲಕ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. 

      ತಲಪ್ಪಾಡಿ ಚೆಕ್ ಪೆÇೀಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕರಸ್ತೆ(ಎಸ್.ಎಚ್.55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ(ಎಸ್.ಎಚ್.55), ಪಾಣತ್ತೂರು-ಚೆಂಬೇರಿ-ಮಡಿಕೇರಿ(ಎಸ್.ಎಚ್.56), ಮಾಣಿಮೂಲೆ-ಸುಳ್ಯ ಎಂಬ ರಸ್ತೆಗಳಲ್ಲಿ ಚೆಕ್ ಪೆÇೀಸ್ಟ್ ಸಜ್ಜುಗೊಳಿಸಿ, ಆಂಟಿಜೆನ್ ಟೆಸ್ಟ್ ಗೆ ಸೌಲಭ್ಯ ಜಾರಿಗೊಳಿಸಲಾಗುವುದು. ಈ ಚೆಕ್ ಪೆÇೀಸ್ಟ್ ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಇರುವುದು. ಈ  ಚೆಕ್ ಪೆÇೀಸ್ಟ್ ಗಳ ಮೂಲಕ ಸಂಜೆ 6 ಗಂಟೆಯ ನಂತರ ಬೆಳಗ್ಗೆ 6 ಗಂಟೆ ವರೆಗೆ ಇತರ ರಾಜ್ಯಗಳಿಮದ ಆಗಮಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. 

            12 ಪಾಯಿಂಟ್ ಗಳಲ್ಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು:

    ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ =ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು ರಸ್ತೆ, ಸ್ವರ್ಗ-ಆರ್ಲಪದವು ರಸ್ತೆ, ಕೊಟ್ಯಾಡಿ-ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಕೊಟ್ಯಾಡಿ-ಅಡೂರು-ದೇವರಡ್ಕ ರಸ್ತೆ, ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಚೆನ್ನಂಕುಂಡ್-ಚಾಮಕೊಚ್ಚಿ ರಸ್ತೆ ಎಂಬ 12 ಪಾಯಿಂಟ್ ಗಳಲ್ಲಿ ಕರ್ನಾಟಕದಿಂದ ಜಿಲ್ಲೆಗೆ ಪ್ರವೇಶಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. 

     ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ. .ಸಿ.ಯ ಚಟುವಟಿಕೆಗೆ ತೊಡಕಾಗದಂತೆ ಕೋವಿಡ್ ಮಾನದಂಡಗಳನ್ನು ಪಾಲಿಸಿ ಎಂ.ಸಿ.ಎ. ಪರೀಕ್ಷೆ ನಡೆಸಲು ಮಂಜೂರಾತಿ ನೀಡಬಹುದು ಎಂದು ಜಿಲ್ಲಧಿಕಾರಿ ತಿಳಿಸಿದರು. ಸುಳ್ಯಪದವು ಗಡಿ ಮೂಲಕ ನಾಟೆಕಲ್ಲಿಗೆ ಅಕ್ರಮವಾಗಿ ಕರ್ನಾಟಕದ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಆರ್.ಟಿ.ಒ.ಗೆ ಸಭೆ ಆದೇಶ ನೀಡಿದೆ. 

       ಜಿಲ್ಲಾ ವೈದ್ಯಾಧಿಕಾರಿ ಅವರ ವರದಿಯ ಹಿನ್ನೆಲೆಯಲ್ಲಿ ಅಲ್ಲದೆ ಸರ್ಕಾರಿ ಸಿಬ್ಬಂದಿ ಕ್ವಾರೆಂಟೈನ್ ಗೆ ಪ್ರವೇಶಿಸಲು ಕಚೇರಿಯ ಮುಖ್ಯಸ್ಥರು ರಜೆ ಮಂಜೂರು ಮಾಡಕೂಡದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಈ ಆದೇಶ ಉಲ್ಲಂಘಿಸಿ  ಕ್ವಾರೆಂಟೈನ್ ಗೆ ತೆರಳಿದ ಸಿಬ್ಬಂದಿ ವಿರುದ್ಧ ಕಚೇರಿಗೆ ಹಾಜರಾಗದೇ ಇರುವ ಆರೋಪದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಯ ನೇರ ಸಂಪರ್ಕ ಎಂಬುದು ಒಂದೂವರೆ ಮೀಟರ್ ಅಂತರದಲ್ಲಿ 15 ನಿಮಿಷಕ್ಕೂ ಅಧಿಕ ಅವಧಿಯಲ್ಲಿ ಮಾಸ್ಕ್ ಇಲ್ಲದೇ ಸಂಪರ್ಕದಲ್ಲಿದ್ದರೆ ಮಾತ್ರ ಕ್ವಾರೆಂಟೈನ್ ಗೆ ತೆರಳುವ ಅಗತ್ಯ ಬರುತ್ತದೆ. ಜೊತೆಗೆ ಸರ್ಕಾರಿ ಸಿಬ್ಬಂದಿ ಕೋವಿಡ್ ಸಂಹಿತೆ ಪಾಲಿಸದೇ ಇಂಥಾ ಸಂಪದರ್ಭದಲ್ಲಿ ಸಂಪರ್ಕದಲ್ಲಿದ್ದುದು ಪತ್ತೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕ್ವಾರೆಂಟೈನ್ ಗೆ ತೆರಳಬೇಕಾದವರಿಗೆ ಅರ್ಹವಾದ ರಜೆ ಮಾತ್ರ ಮಂಜೂರುಮಾಡಬೇಕು. ವಿಶೇಷ ಕ್ಯಾಷ್ವುಲ್ ಲೀವ್ ಮಂಜೂರು ಮಾಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿರುರು. 

      ಚಿಕಿತ್ಸೆ ಯಾ ತುರ್ತು ಅಗತ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ಮರಳುವ ಮಂದಿಗೆ, ದಿನನಿತ್ಯ ಯಾತ್ರೆ ನಡೆಸುವ ಮಂದಿಗೆ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ. 

    ಕರ್ನಾಟಕದ ಸಮೀಪದ ಗ್ರಾಮ ಪಂಚಾಯತ್ ಗಳಿಗೆ ಮಾತ್ರ ಗಡಿ ದಾಟಿ ಬರುವ ಮಂದಿಗೆ ನೋಂದಣಿಯಿಲ್ಲದೆ ಪ್ರಯಾಣಿಸಲು ಮಂಜೂರಾತಿ ಇರುವುದು. ಅವರು ಈ ಗಡಿ ಮೀರಿ ಸಂಚಾರ ನಡೆಸುವುದಿಲ್ಲ ಎಂಬ ಸಂಬಂಧಿಸಿದ ಗ್ರಾಮ ಪಂಚಾಯತ್ ನ ದೃಡೀಕರಣ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

      ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಸಿ.ಎಫ್.ಎಲ್.ಟಿ.ಸಿ. ಸಜ್ಜುಗೊಳಿಸಿರುವ ನೂತನ ಬ್ಲಾಕ್ ಹೊರತುಪಡಿಸಿ ಇತರ ಎಲ್ಲ ಕಟ್ಟಡಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮಂಜೂರಾತಿ ನೀಡಲು, ಚೆಮ್ನಾಡ್ ಗ್ರಾಮ ಪಂಚಾಯತ್ ನ ಸಿ.ಎಫ್.ಎಲ್.ಟಿ.ಸಿ. ಅಜ್ಜುಗೊಳಿಸಿರುವ ಸದಿಯ್ಯಾ ಕಾಲೇಜನ್ನು ಪರೀಕ್ಷೆ ನಡೆಸಲು ಬಿಟ್ಟುಕೊಡಲು ಸಭೆ ನಿರ್ಧರಿಸಿದೆ. 

      ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries