ಕಾಸರಗೋಡು: ಅಂಗಡಿಗಳಲ್ಲಿ ಸಂಪರ್ಕ ಮೂಲಕ ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಆದೇಶ ಪ್ರಕಟಗೊಳ್ಳುವ ವರೆಗೆ ಹಾದಿಬದಿ ಗೂಡಂಗಡಿಗಳಲ್ಲಿ ಇನ್ನು ಮುಂದೆ ಪಾರ್ಸೆಲ್ ವಿತರಣೆ ಮಾತ್ರ ಇರುವುದು. ಜ್ಯೂಸ್, ಕಾಫಿ, ಚಹಾ ಇತ್ಯಾದಿ ಬೇಕರಿಗಳ ಜತೆ ವಿತರಿಸುವ ಸಂಸ್ಥೆಗಳು ಸಂಜೆ 6 ಕ್ಕೆ ಮುಚ್ಚುಗಡೆ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಗುರುವಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವ್ಯಾಪಾರಿ ವ್ಯವಸಾಯಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾಸ್ಕ್, ಗ್ಲೌಸ್ ಧರಿಸಿ, ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪಾರ್ಸೆಲ್ ವಿತರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿಗಳ ತೆರವು ಸಹಿತ ಕ್ರಮಗಳನ್ನು ಕಂದಾಯ-ಪೆÇಲೀಸ್ ಸಿಬ್ಬಂದಿ ಕೈಗೊಳ್ಳಲು ಆದೇಶ ನೀಡಲಾಗಿದೆ.
ಜ್ಯೂಸ್, ಕಾಫಿ, ಚಹಾ ಇತ್ಯಾದಿಗಳನ್ನು ಬೇಕರಿಗಳ ಜತೆ ಚಟುವಟಿಕೆ ನಡೆಸಿ, ವಿತರಣೆ ಮಾಡುವ ಸಂಸ್ಥೆಗಳು ಸಂಜೆ 6 ಗಂಟೆಗೆ ಮುಚ್ಚುಗಡೆ ನಡೆಸಬೇಕು. ಈ ಅಂಗಡಿಗಳಲ್ಲಿ ಡಿಸ್ಪಾಸಿಬಲ್ ಲೋಟಗಳಲ್ಲಿ ಮಾತ್ರ ಪಾನೀಯಗಳ ವಿತರಣೆ ನಡೆಸಬೇಕು. ಸ್ಟೀಲ್ ಲೋಟ್, ಮರುಬವಳಕೆಯ ತಟ್ಟೆ ಇತ್ಯಾದಿಗಳನ್ನು ಬಳಸಕೂಡದು. ಅಂಗಡಿಗಳಲ್ಲಿ ಜನ ಗುಂಪು ಸೇರಕೂಡದು.
ಇತರ ಅಂಗಡಿಗಳು ರಾತ್ರಿ 9 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು. ವ್ಯಾಪಾರಿ-ವ್ಯವಸಾಯಿ ಸಂಘಟನೆಗಳ ಪ್ರತಿನಿಧಿಗಳಿಂದ ಆಯ್ದ ತಲಾ 10 ಮಂದಿ ಸ್ವಯಂಸೇವಕರ ತಂಡ ಅಂಗಡಿಗಳಲ್ಲಿ ಕೋವಿಡ್ ಸಂಹಿತೆಗಳ ಪಾಲನೆ ಕಡ್ಡಾಯವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ಖಚಿತತೆ ನಡೆಸಲು ಪೆÇಲೀಸರಿಗೆ ಸಹಾಯ ಒದಗಿಸುವರು. ಈ ಸಂಬಂದ ಅವರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಸಭೆ ತಿಳಿಸಿದೆ.
ಕಿರು ಉದ್ದಿಮೆ ಕೇಂದ್ರಗಳಲ್ಲಿ ದುಡಿಯಲು ಆಗಮಿಸಿದ ಇತರ ರಾಜ್ಯಗಳ ಕಾರ್ಮಿಕರಿಗಾಗಿ ಜಿಲ್ಲಾಡಳಿತೆ ನಿಗದಿ ಪಡಿಸಿದ ಶಾಲೆಗಳಲ್ಲಿ ಏರ್ಪಡಿಸಿರುವ ಕ್ವಾರೆಂಟೈನ್ ವ್ಯವಸ್ಥೆ ಗಳನ್ನು ಬಳಸಲಾಗುವುದು. ಇಲ್ಲಿ ಅಗತ್ಯಬರುವ ಕುಡಿಯುವ ನೀರು, ಆಹಾರ ಸಹಿತ ವ್ಯವಸ್ಥೆಗಳ ವೆಚ್ಚವನ್ನು ಆಯಾ ಉದ್ದಿಮೆ ಸಂಸ್ಥೆಗಳ ಮಾಲೀಕರು ವಹಿಸಬೇಕು ಎಂದು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ವ್ಯಾಪಾರಿ-ವ್ಯವಸಾಯಿ ಸಂಘಟನೆಗಳ ಪ್ರತಿನಿಧಿಗಳಾದ ರಾಘವನ್ ವೆಳುತ್ತೋಳಿ, ಅಹಮ್ಮದ್ ಶರೀಫ್, ಗೋಕುಲ್ ದಾಸ್ ಕಾಮತ್, ನಾರಾಯಣ ಪೂಜಾರಿ, ಕೆ.ರವೀಂದ್ರನ್, ಕೆ.ರವೀಂದ್ರನ್, ಸಿ.ಬಿಂದು ಮೊದಲಾದವರು ಉಪಸ್ಥಿತರಿದ್ದರು.