ತಿರುವನಂತಪುರ: ಕೇರಳದಲ್ಲಿ ಇಂದು 7,020 ಜನರಿಗೆ ಕೋವಿಡ್ ಸೋಂಕು ಹೊಸತಾಗಿ ಪತ್ತೆಯಾಗಿದೆ. ಸಂಪರ್ಕದ ಮೂಲಕ ಒಟ್ಟು 6,037 ಜನರಿಗೆ ಸೋಂಕು ಬಾಧಿಸಿದೆ. 54,339 ಜನರ ಮಾದರಿಗಳನ್ನು ಪರೀಕ್ಷಿಸಲಾಯಿತು. ಇಂದು ಮಾತ್ರ, ಕೋವಿಡ್‌ನಿಂದಾಗಿ 26 ಸಾವುಗಳು ದೃಢ ಪಟ್ಟಿದೆ. 8,474 ಜನರನ್ನು ಗುಣಪಡಿಸಲಾಗಿದೆ. 637 ಮಂದಿ ಸೋಂಕಿತರ ಮೂಲ ಸ್ಪಷ್ಟವಾಗಿಲ್ಲ. 81 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ. ರಾಜ್ಯಾದ್ಯಂತ 91,784 ಜನರು ಚಿಕಿತ್ಸೆಯಲ್ಲಿದ್ದಾರೆ.
26 ಕೋವಿಡ್ ಸಾವು
ಇಂದು, ಕೋವಿಡ್ ಕಾರಣದಿಂದಾಗಿ 26 ಸಾವುಗಳು ದೃಢ ಪಟ್ಟಿದೆ. ತಿರುವನಂತಪುರಂನ ವಂಚಿಯೂರ್‌ನ ಪದ್ಮಾವತಿ ಅಮ್ಮ (89), ಶ್ರೀವರಾಹಂನ ರಾಧಾಕೃಷ್ಣನ್ ಪಿಳ್ಳೈ (64), ಪಳೆವಂಗಾಡಿಯ ಗೀತಾ (60), ಕರಿಕಾಕಂನ ಮಿರಿನಾ ಎಲಿಜಬೆತ್ (54), ಕಳಕೂಟಂನ ಜಯಚಂದ್ರನ್ (67), ಕಾಂಞರಪಾರದ ಬಾಬು (63) ,ತ್ರಿಶೂರ್‌ನ ಪುನ್ನಯೂರಿನ ಜುಲೇಖಾ ಅಬೂಬಕರ್ (58), ಪರವ್‌ನ ಪ್ರಸೀದ್ (42), ಪೂಕೋಟೂರ್‌ನ ಹಮ್ಸಾ (53), ಮಲಪ್ಪುರಂ, ಬಿಪಿ ಅಂಗಾಡಿಯ ಯಾಹೂ (68), ವಾಲಂಚೇರಿಯ ನಫಿಸಾ (66),ಪೊನ್ಮಾಲಾದ ಅಹ್ಮದ್ ಕುಟ್ಟಿ (69), ತಳಿಪರಂಬಾದ ಇಬ್ರಾಹಿಂ (75), ಕಣ್ಣೂರು, ಚಿತ್ತಾರಿಪಾರಂಬುವಿನ ಕಾಸಿಮ್ (64), ಅಳಿಕೋಡ್‌ನ ಕುಮಾರನ್ (67), ಎಚೂರ್‌ನ ಮುಹಮ್ಮದ್ ಅಲಿ (72),ಕಲ್ಪೆಟ್ಟಾದ ಶಾರದ (38) ಎಂಬವರೆಲ್ಲ ಕೋವಿಡ್ ಸೋಂಕಿನಿಂದ ಮ್ರತರಾಗಿರುವರು. ರಾಜ್ಯಾದ್ಯಂತ ಈವರೆಗೆ ಒಟ್ಟು ಸಾವಿನ ಸಂಖ್ಯೆಯನ್ನು 1429 ಕ್ಕೆ ಏರಿಸಿದೆ.
ಇಂದು ಪಾಸಿಟಿವ್ ಆದವರ ಜಿಲ್ಲಾವಾರು ಮಾಹಿತಿ:
ತ್ರಿಶೂರ್ 983, ಎರ್ನಾಕುಳಂ 802, ತಿರುವನಂತಪುರ 789, ಆಲಪ್ಪುಳ 788, ಕೋಝಿಕ್ಕೋಡ್ 692, ಮಲಪ್ಪುರಂ 589, ಕೊಲ್ಲಂ 482, ಕಣ್ಣೂರು 419, ಕೊಟ್ಟಾಯಂ 389, ಪಾಲಕ್ಕಾಡ್ 369, ಪತ್ತನಂತಿಟ್ಟು 270, ಕಾಸರಗೋಡು 187, ಇಡುಕ್ಕಿ 188,ವಯನಾಡ್ 93 ಎಂಬಂತೆ ಸೋಂಕು ದ್ರಢಪಟ್ಟಿದೆ.