ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ತೀವ್ರ ಸ್ಥಿತಿ ಮುಂದುವರಿದಿದ್ದು ಇಂದು 7283 ಜನರಿಗೆ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 51,836 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿದೆ. ಇದು ಚಿಕಿತ್ಸೆಯಲ್ಲಿರುವ ಒಟ್ಟು ರೋಗಿಗಳ ಸಂಖ್ಯೆಯನ್ನು 95,008 ಕ್ಕೆ ಏರಿಸಿದೆ. ಈವರೆಗೆ 2,28,998 ಮಂದಿ ಗುಣಮುಖರಾಗಿರುವರು.
ಇಂದಿನ ಜಿಲ್ಲಾವಾರು ಕೋವಿಡ್ ಅಂಕಿಅಂಶಗಳು:
ಮಲಪ್ಪುರಂ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿ 1,025 ಮಂದಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕೋಝಿಕ್ಕೋಡ್ 970, ತ್ರಿಶೂರ್ 809, ಪಾಲಕ್ಕಾಡ್ 648, ಎರ್ನಾಕುಳಂ 606, ತಿರುವನಂತಪುರ 595, ಆಲಪ್ಪುಳ 563, ಕೊಟ್ಟಾಯಂ 432, ಕೊಲ್ಲಂ 418, ಕಣ್ಣೂರು 405, ಪತ್ತನಂತಿಟ್ಟು 296, ಕಾಸರಗೋಡು 234, ವಯನಾಡ್ 158, ಇಡುಕ್ಕಿ 124 ಎಂಬಂತೆ ಸೋಂಕು ಬಾಧಿಸಿದೆ.
ಸೋಂಕುಮುಕ್ತರಾದವರ ಜಿಲ್ಲಾವಾರು ಅಂಕಿಅಂಶಗಳು:
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 6767 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 780, ಕೊಲ್ಲಂ 767, ಪತ್ತನಂತಿಟ್ಟು 257, ಆಲಪ್ಪುಳ 181, ಕೊಟ್ಟಾಯಂ 246, ಇಡಕ್ಕಿ 53, ಎರ್ನಾಕುಳಂ 843, ತ್ರಿಶೂರ್ 831, ಪಾಲಕ್ಕಾಡ್ 322, ಮಲಪ್ಪುರಂ 432, ಕೋಝಿಕ್ಕೋಡ್ 1154, ವಯನಾಡ್ 155, ಕಣ್ಣೂರು 440, ಕಾಸರಗೋಡು 306 ಎಂಬಂತೆ ಸೋಂಕು ಮುಕ್ತರಾದರು. ಇದರೊಂದಿಗೆ 95,008 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 2,28,998 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಕೋವಿಡ್ ಮೃತ್ಯು:
ಇಂದು, ಕೋವಿಡ್ ಕಾರಣದಿಂದಾಗಿ 24 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಕಾಂಜಿರಂಪಾರದ ಮೇರಿಕುಟ್ಟಿ (56), ಮನಕ್ಕಾಡ್‍ನ ಸುಮತಿ (48), ಜಗತಿ ನಿವಾಸಿ ಶಾಂತಮ್ಮ (80), ವಲ್ಲಕ್ಕಡವದ ತಂಗಮ್ಮ (84), ಮಣಕ್ಕಾಡ್ ನ ಚೆಲ್ಲಪ್ಪನ್ (71), ಪತ್ತನಂತಿಟ್ಟು ಕೊಳಂಬೇರಿಯ ರಂಗನ್ (70), ಇಡುಕ್ಕಿಯ ಉಡಂಬತ್ತೂರ್ ನ ಥೋಮಸ್(73), ತೃಶೂರ್ ನೆಡುಪುಳದ ಆಂಥೋನಿ (70), ಪೆರಮಂಗಲಂನ ಸವಿತಾ (30), ಕೊಟ್ಟುವಳ್ಳಿ ವಿಲ್ಲಾದ ರವೀಂದ್ರನ್ (80), ಕಟ್ಟಕಂಪಾಲದ ಪ್ರೇಮರಾಜನ್ (54), ಚೆಮ್ಮಂತಿಟ್ಟಾದ ಕಾಮು (80),ಕೋಝಿಕ್ಕೋಡ್ ಪಯ್ಯೋಳಿಯ ಅಸೈನಾರ್ (92) ಚೇವಯೂರ್ ನ ಪದ್ಮಾವತಿ(82), ಬಾಲಶ್ಚೇರಿಯ ಬಾಲನ್(65), ಕಣ್ಣೂರು ನೆಟ್ಟೂರಿನ ಸಫಿಯಾ (60), ಕಾಯಚಿರಾದ ವಿ.ಪಿ. ಅಹಮದ್ (59), ತಲಶೇರಿಯ ನಬೀಸು (72), ವಡಪ್ಪನಂಗಾಡ್ ನ ಕೆ.ಪಿ. ಆಯಿಷಾ(85), ಚೆರುಪರಂಬಾದ ನಾಣಿ (60), ಚಾವಶೇರಿಯ ಅಬ್ದುಲ್ಲಾ (73), ಉದಯಗಿರಿಯ ಹಾಜಿರಾ ಬೀವಿ (90), ಪರಿಯಾರಂನ ನಾರಾಯಣನ್ ನಂಬಿಯಾರ್ (90) , ಕುರಾರದ ಪದ್ಮನಾಭನ್ (55) ಎಂಬವರು ಕೋವಿಡ್ ನಿಂದ ಮೃತಪಟ್ಟವರಾಗಿದ್ದಾರೆ. ಇದು ಒಟ್ಟು ಸಾವಿನ ಸಂಖ್ಯೆ ಇದೀಗ 1113 ಕ್ಕೆ ಏರಿಕೆಯಾಗಿದೆ.
250 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ಸುಮಾರು 250 ಆರೋಗ್ಯ ಕಾರ್ಯಕರ್ತರು ವೈರಸ್ ಸೋಂಕಿಗೆ ಒಳಗಾಗಿದ್ದರು. ಎರ್ನಾಕುಳಂ 76, ಮಲಪ್ಪುರಂ 65, ಕೊಟ್ಟಾಯಂ 24, ಆಲಪ್ಪುಳ 18, ಪಾಲಕ್ಕಾಡ್ 17, ತಿರುವನಂತಪುರ 11, ಕಾಸರಗೋಡು 10, ಕೋಝಿಕ್ಕೋಡ್ 8, ಕಣ್ಣೂರು 5, ಪತ್ತನಂತಿಟ್ಟು, ತ್ರಿಶೂರ್ ತಲಾ 4, ಕೊಲ್ಲಂ, ಇಡಕ್ಕಿ ತಲಾ 3, ವಯನಾಡ್ 2 ಮಂದಿ ಸೋಂಕು ಉಂಟಾಗಿದೆ.