ತಿರುವನಂತಪುರ: ರಾಜ್ಯದ ರೈತರ ಕಲ್ಯಾಣಕ್ಕಾಗಿ ಕೇರಳ ರೈತ ಕಲ್ಯಾಣ ನಿಧಿ ಮಂಡಳಿ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಮಂಡಳಿಯ ಅಧ್ಯಕ್ಷರಾಗಿ ಡಾ. ಪ. ರಾಜೇಂದ್ರ ಅವರನ್ನು ನೇಮಕ ಮಾಡಲಾಗುವುದು. ಈ ಮಂಡಳಿಯನ್ನು ಕೇರಳ ಕರ್ಷಕ ಕ್ಷೇಮನಿಧಿ ಬೋರ್ಡ್ ಎಂದು ಕರೆಯಲಾಗುತ್ತದೆ. ರೈತರ ಕಲ್ಯಾಣ ಮತ್ತು ಉನ್ನತಿಗಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಂಡಳಿ ರಚಿಸಲಾಗಿದೆ.
ಕಾಯಿದೆಯ ಪ್ರಕಾರ, ಒಬ್ಬ ಕೃಷಿಕನೆಂದರೆ ಮಾಲೀಕನೋ, ಪರವಾನಗಿ ಪಡೆದ ಮಾಲಿಕನೋ, ಏಕಮಾತ್ರ ಮಾಲೀಕನೋ, ಮೌಖಿಕ ಹಿಡುವಳಿದಾರ, ಸರ್ಕಾರಿ ಭೂ ಗುತ್ತಿಗೆದಾರ, ಇವರು 5 ಸೆಂಟ್‍ಗಳಿಗಿಂತ ಕಡಿಮೆಯಿಲ್ಲದಂತೆ 5 ಸೆಂಟ್ ನಿಂದ 5 ಎಕರೆಗಿಂತ ಕಡಿಮೆಯಾಗದಂತೆ ಭೂಮಿ ಇರುವವ, ವಾರ್ಷಿಕ ಆದಾಯ ರೂ5 ಲಕ್ಷಕ್ಕಿಂತ ಕಡಿಮೆಯಿರುವವರು, ಕೃಷಿಯಲ್ಲಿ ತೋಟಗಾರಿಕೆ, ಔಷಧೀಯ ಸಸ್ಯ ಕೃಷಿ, ನರ್ಸರಿ ನಿರ್ವಹಣೆ, ಮೀನು, ಅಲಂಕಾರಿಕ ಮೀನು, ಜೇನು ಕೃಷಿ, ರೇಷ್ಮೆ ಹುಳುಗಳ ಕೃಷಿ, ಕೋಳಿ, ಬಾತುಕೋಳಿಗಳು, ಮೇಕೆಗಳು, ಮೊಲಗಳು, ಜಾನುವಾರುಗಳು ಸೇರಿವೆ. ಮುಖ್ಯವಾಗಿ ಕೃಷಿ ಉದ್ದೇಶಗಳಿಗಾಗಿ ಭೂಮಿಯನ್ನು ನಿರ್ವಹಿಸುವುದು ಮತ್ತು ಬಳಸುವುದು ಅಗತ್ಯವಾಗಿರುತ್ತದೆ.
ಮಂಡಳಿಯ ಕಲ್ಯಾಣ ನಿಧಿ ಯೋಜನೆಯಲ್ಲಿ ಸದಸ್ಯರಾಗಲು ರೈತರು 100 ರೂ.ಗಳ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತು ಕನಿಷ್ಠ ಮಾಸಿಕ ರೂ .100 ವನ್ನು ರೈತರು ಆರು ತಿಂಗಳ ಅಥವಾ ಒಂದು ವರ್ಷದವರೆಗೆ ಲಾಭಾಂಶವನ್ನು ಒಟ್ಟಿಗೆ ಪಾವತಿಸಬಹುದು. ಕಲ್ಯಾಣ ನಿಧಿಯ ಸದಸ್ಯರಿಗೆ ಸರ್ಕಾರವು ರಞಙೂ.250 ರೂ.ಗಳ ಸಮಾನ ಪಾಲನ್ನು ನೀಡುತ್ತದೆ.
ಕಲ್ಯಾಣ ನಿಧಿ ಸದಸ್ಯರಿಗೆ ವೈಯಕ್ತಿಕ ಪಿಂಚಣಿ, ಕುಟುಂಬ ಪಿಂಚಣಿ, ಅನಾರೋಗ್ಯದ ನೆರವು, ಅಂಗವೈಕಲ್ಯದ ನೆರವು, ವೈದ್ಯಕೀಯ ನೆರವು, ಮದುವೆ ಮತ್ತು ಹೆರಿಗೆ ಭತ್ಯೆ, ಶಿಕ್ಷಣ ನೆರವು ಮತ್ತು ಮರಣೋತ್ತರ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ.
1. ಐದು ವರ್ಷಗಳಿಗಿಂತ ಕಡಿಮೆ ಅವಧಿಗೆ ತಮ್ಮ ಕೊಡುಗೆಯನ್ನು ಪಾವತಿಸಿದ, ಬಾಕಿ ಇಲ್ಲದೆ ಕಲ್ಯಾಣ ನಿಧಿಯಲ್ಲಿ ಸದಸ್ಯರಾಗಿ ಉಳಿದಿರುವ ಮತ್ತು 60 ವರ್ಷ ದಾಟಿದ ರೈತರು ಪಾವತಿಸಿದ ಕೊಡುಗೆಯೊಂದಿಗೆ ಪಿಂಚಣಿಗೆ ಅರ್ಹರಾಗಿರುತ್ತಾರೆ.
2. ರೈತರ ಪಿಂಚಣಿ ಪಡೆಯುತ್ತಿರುವವರಿಗೆ ನಂತರ ಕಲ್ಯಾಣ ನಿಧಿಯಿಂದ ಪಿಂಚಣಿ ಸಿಗುತ್ತದೆ.
3. ಕುಟುಂಬ ಪಿಂಚಣಿ: ಬಾಕಿ ಇಲ್ಲದೆ ಕನಿಷ್ಠ 5 ವರ್ಷಗಳ ಲಾಭಾಂಶವನ್ನು ಪಾವತಿಸಿ ಮೃತ ಹೊಂದಿದೆ ಕುಟುಂಬಗಳಿಗೆ ಈ ಪಿಂಚಣಿ ಲಭ್ಯವಿದೆ.
4. ಅನಾರೋಗ್ಯದ ಲಾಭ: ಪಿಂಚಣಿ ದಿನಾಂಕಕ್ಕಿಂತ ಮೊದಲು ಅನಾರೋಗ್ಯದಿಂದಾಗಿ ಬೇಸಾಯವನ್ನು ಮುಂದುವರಿಸಲು ಸಾಧ್ಯವಾಗದವರಿಗೆ 60 ವರ್ಷ ವಯಸ್ಸಿನವರೆಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ.
5. ಅಂಗವೈಕಲ್ಯ ಲಾಭ: ಅನಾರೋಗ್ಯ ಅಥವಾ ಅಪಘಾತದಿಂದಾಗಿ ದೈಹಿಕವಾಗಿ ಅಂಗವಿಕಲರಾದವರಿಗೆ ಈ ಪ್ರಯೋಜನವನ್ನು ನೀಡಲಾಗುತ್ತದೆ.
6. ವೈದ್ಯಕೀಯ ನೆರವು: ಮಂಡಳಿಯು ನಿರ್ಧರಿಸಿದಂತೆ ಸದಸ್ಯರು ಜೀವ ವಿಮೆ ಮತ್ತು ವೈದ್ಯಕೀಯ ವಿಮಾ ರಕ್ಷಣೆಗೆ ಸಿದ್ದರಿರಬೇಕು. ಅಂತಹ ಸದಸ್ಯರು ಮಂಡಳಿಯು ನಿಗದಿಪಡಿಸಿದ ವಿಮಾ ಯೋಜನೆಯಡಿ ವೈದ್ಯಕೀಯ ಸಹಾಯಕ್ಕೆ ಅರ್ಹರಲ್ಲದಿದ್ದರೆ ಅವರಿಗೆ ವಿಶೇಷ ನೆರವು ನೀಡಲಾಗುವುದು.
6. ಮದುವೆ ಮತ್ತು ಹೆರಿಗೆ ಲಾಭ: ಕಲ್ಯಾಣ ನಿಧಿಯ ಸದಸ್ಯರಾಗಿರುವ ಮಹಿಳೆಯರು ಮತ್ತು ಸದಸ್ಯರ ಹೆಣ್ಣುಮಕ್ಕಳ ಮದುವೆಗೆ ಸಹ ಲಾಭ ನೀಡಲಾಗುವುದು. ಮಹಿಳಾ ಸದಸ್ಯರಿಗೆ ಹೆರಿಗೆಯ ಲಾಭ ಎರಡು ಪಟ್ಟು ನೀಡಲಾಗುತ್ತದೆ.
8. ಶೈಕ್ಷಣಿಕ ಅನುದಾನ: ಕಲ್ಯಾಣ ನಿಧಿ ಸದಸ್ಯರ ಮಕ್ಕಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ನೆರವು ನೀಡಲಾಗುವುದು.