HEALTH TIPS

ಆತಂಕ ಮುಂದುವರಿಕೆ- ರಾಜ್ಯದಲ್ಲಿ ಇಂದು 7834 ಮಂದಿಗೆ ಕೋವಿಡ್- 4476 ಗುಣಮುಖ-

  

      ತಿರುವನಂತಪುರ: ಕೇರಳದಲ್ಲಿ ಇಂದು 7834 ಜನರಿಗೆ ಕೋವಿಡ್ ಖಚಿತವಾಗಿದೆ. ತಿರುವನಂತಪುರ 1049, ಮಲಪ್ಪುರಂ 973, ಕೋಝಿಕ್ಕೋಡ್  941, ಎರ್ನಾಕುಳಂ 925, ತ್ರಿಶೂರ್ 778, ಆಲಪ್ಪುಳ 633, ಕೊಲ್ಲಂ 534, ಪಾಲಕ್ಕಾಡ್ 496, ಕಣ್ಣೂರು 423, ಕೊಟ್ಟಾಯಂ 342, ಪತ್ತನಂತಿಟ್ಟು 296, ಕಾಸರಗೋಡು 257,ಇಡುಕ್ಕಿ 106, ವಯನಾಡು 81 ಎಂಬಂತೆ ಸೋಂಕು ಬಾಧಿಸಿದೆ. 

          ಸಂಪರ್ಕದ ಮೂಲಕ ಸೋಂಕಿತರ ಸಂಖ್ಯೆ ಅಧಿಕ!: 

      ಇಂದು ಸೋಂಕು ಬಾಧಿತರಲ್ಲಿ 49 ಮಂದಿ ವಿದೇಶಗಳಿಂದ ಮತ್ತು 187 ಮಂದಿ ಇತರ ರಾಜ್ಯಗಳಿಂದ ಬಂದವರು. 6850 ಜನರಿಗೆ ಸಂಪರ್ಕದ ಮೂಲಕ ಸೋಂಕು ತಗಲಿತು. 648 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 836, ಮಲಪ್ಪುರಂ 903, ಕೋಝಿಕ್ಕೋಡ್ 900, ಎರ್ನಾಕುಳಂ 759, ತ್ರಿಶೂರ್ 771, ಆಲಪ್ಪುಳ 607, ಕೊಲ್ಲಂ 531, ಪಾಲಕ್ಕಾಡ್ 342, ಕಣ್ಣೂರು 325, ಕೊಟ್ಟಾಯಂ 333, ಪತ್ತನಂತಿಟ್ಟು 178, ಕಾಸರಗೋಡು  236, ಇಡುಕ್ಕಿ 63, ವಯನಾಡು 66 ಮಂದಿಗೆ ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. 

              ಕೋವಿಡ್ ಕಾರಣ  800 ಕ್ಕಿಂತಲೂ ಹೆಚ್ಚು ಮಂದಿ ಮೃತ್ಯು!: 

     ಇಂದು ಸೋಂಕು ಬಾಧಿಸಿ 22 ಮಂದಿ ಸಾವನ್ನಪ್ಪಿದ್ದಾರೆ. ತಿರುವನಂತಪುರದ ನೆಡುಮಾಂಗಾಡ್‍ನ ರಾಜನ್ (47), ಕಿಲಿಮಾನೂರಿನ ಮೂಸಾ ಕುಂಞÂ (72), ಮಲಪ್ಪುರಂ ನ ವತ್ಸಲ (64),,  ವಾಮನಪುರಂನ ರಘುನಂದನ್ (60), ನೆಲ್ಲುವಿಳದ ದೇವರಾಜನ್ (56), ಅಂಬಲತ್ತಿರಕ್ಕರದ ವಸಂತಕುಮಾರಿ(73) ), ಪಳ್ಳಕ್ಕಡವಿನ ಬೋಣಿಫಸ್ ಅಲ್ಬರ್ಟ್ (68), ಅಂಚುತೆಂಗುವಿನ ಮೋಸೆಸ್ (58), ಇಡಕ್ಕಿಯ ಕಟ್ಟಪ್ಪನದ ಕೆ.ಸಿ.ಜೋರ್ಜ್(75),  ತ್ರಿಶೂರ್‍ನ ವೆಂಬಲೂರಿನ ಅಬ್ದು(64), ಕೋಝಿಕ್ಕೋಡ್ ನ ಕೊಯಾಕುಟ್ಟಿ (73), ಕೋಝಿಕ್ಕೋಡ್ ನ ಜಯಪ್ರಕಾಶಿನಿ (70), ಚಾಲಿಯಂನಿಂದ ಅಶ್ರಫ್ (49), ಅರಕಿನಾರ್ ನ ಅಹ್ಮದ್ ಕೋಯಾ (74),  ಪಯ್ಯೋಳಿಯ ಗಂಗಾಧರನ್(78), ಕಣ್ಣೂರು ತಳಿಪರಂಬದ ವಿ.ಸಿ.ಜೋಸ್(56), ರಮಂತಳಿಯ ವಿ.ಸುಧಾಕರನ್(65), ಆಯಿಕ್ಕರದ  ಅಜೇಶ್ ಕುಮಾರ್(40), ಅಲವಿಲ್ ನ ಸುಮತಿ(67), ಚಂದನಕ್ಕವರದ ವಿ.ವಿ.ಚಂದ್ರನ್(68), ಎಡಯನ್ನೂರ್ ನ ಭಾಸ್ಕರನ್(75), ಕಾಸರಗೋಡು ಮುಟ್ಟತ್ತೋಡಿಯ ಮರಿಯಮ್ಮ(67) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. 

         95 ಮಂದಿ ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು:

     ರಾಜ್ಯದಲ್ಲಿಂದು  ಸಂಪರ್ಕದ ಮೂಲಕ 95 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಉಂಟಾಗಿದೆ. ತಿರುವನಂತಪುರ 24, ಕಣ್ಣೂರು 23, ಪತ್ತನಂತಿಟ್ಟು 11, ಕೋಝಿಕ್ಕೋಡ್ 9, ಎರ್ನಾಕುಳಂ 8, ಕಾಸರಗೋಡು 5, ಪಾಲಕ್ಕಾಡ್, ಮಲಪ್ಪುರಂ ತಲಾ 4, ಕೋಟ್ಟಯಂ 3, ತೃಶೂರ್, ವಯನಾಡ್ 2 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಇಸದೆ.

           ರಾಜ್ಯದಲ್ಲಿ ನಿಬಂಧನೆ ಬಿಗು: 

ಹೆಚ್ಚುತ್ತಿರುವ ಸಂಪರ್ಕ ಮೂಲಕದ ಸೋಂಕು ಮತ್ತು ಸಾವಿನ ಪ್ರಕರಣಗಳ ಮಧ್ಯೆ ರಾಜ್ಯ ಸರ್ಕಾರ ಭಾರೀ ನಿಯಂತ್ರಣಗಳನ್ನು ಮತ್ತೆ ಹೇರಿದೆ.  ಅಕ್ಟೋಬರ್ 31 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧ  ಹೇರಲಾಗಿದೆ. ಆಯಾ ಜಿಲ್ಲಾಧಿಕಾರಿಗಳು ನಿಯಂತ್ರಣ ಜವಾಬ್ದಾರಿ ಹೊತ್ತಿದ್ದಾರೆ.  ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲದಿದ್ದರೂ, ಕಿಕ್ಕಿರಿದ ಜನ ನಿಬಿಡತೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತಿದೆ. ಕಂಟೋನ್ಮೆಂಟ್ ವಲಯಗಳಲ್ಲಿ ತೀವ್ರ ನಿಯಂತ್ರಣ ಹೇರಲಾಗಿದೆ.

                        ನಿಷೇಧ ನಿರ್ಬಂಧಗಳ ವಿವರ: 

         ರಾಜ್ಯದ 13 ಜಿಲ್ಲೆಗಳಲ್ಲಿ ಈ ನಿಷೇಧ ಜಾರಿಯಲ್ಲಿದೆ. ತಿರುವನಂತಪುರಂ, ಎರ್ನಾಕುಲಂ, ಕೊಲ್ಲಂ, ಕೊಟ್ಟಾಯಂ, ಕೋಝಿಕ್ಕೋಡ್ , ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ತ್ರಿಶೂರ್, ಆಲಪ್ಪುಳ, ಪತ್ತನಂತಿಟ್ಟು, , ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ. ಅದೇ ಸಮಯದಲ್ಲಿ ಅಗತ್ಯವಿರುವ ಸೇವೆಗಳಿಗೆ ಯಾವುದೇ ನಿಯಂತ್ರಣಗಳಿರುವುದಿಲ್ಲ. ಕಂಟೋನ್ಮೆಂಟ್ ವಲಯಗಳಲ್ಲಿ ದಿನಸಿ, ಔಷಧಿ, ಹಾಲು, ತರಕಾರಿಗಳು, ಮಾಂಸ ಮತ್ತು ಮೀನುಗಳು ಲಭ್ಯವಿರುತ್ತವೆ. ನಿಯಂತ್ರಿತ ವಲಯಗಳಲ್ಲಿ  ಆದಾಯ, ಆರೋಗ್ಯ, ಪೆÇಲೀಸ್, ಸ್ಥಳೀಯ ಸರ್ಕಾರ, ವಿದ್ಯುತ್, ನೈರ್ಮಲ್ಯ ಮತ್ತು ನೀರು ಸರಬರಾಜಿನಂತಹ ಅಗತ್ಯಗಳಿಗಾಗಿ ಹೊರಗೆ ಹೋಗಬಹುದು. ಪೆÇಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲಿದ್ದಾರೆ.


                   ದೇಶದಲ್ಲಿ 64 ಲಕ್ಷ ಕೋವಿಡ್ ಪ್ರಕರಣಗಳಿವೆ

        ಕೋವಿಡ್ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 79,476 ಪ್ರಕರಣಗಳನ್ನು ದೃಢಪಡಿಸಲಾಗಿದೆ.  ಇದರೊಂದಿಗೆ ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 64,73,545 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ  ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ ಒಂದು ಲಕ್ಷ ದಾಟಿದ್ದು ಪರಿಸ್ಥಿತಿ ಹದಗೆಡುತ್ತಿದೆ. ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರ ಮಾತ್ರ ದೇಶದಲ್ಲಿ 1,00,0842 ಕ್ಕೆ ಏರಿದ್ದು, 1,069 ಜನರು ಈ ಸೋಕಿನಿಂದ ಸಾವನ್ನಪ್ಪಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries