ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 416 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಸಂಪರ್ಕದ ಮೂಲಕ 398 ಮಂದಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 6 ಮಂದಿ ಇತರ ರಾಜ್ಯಗಳಿಂದ ಹಾಗು 12 ಮಂದಿ ವಿದೇಶದಿಂದ ಬಂದವರು. 202 ಮಂದಿ ಗುಣಮುಖರಾಗಿದ್ದಾರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ರೋಗ ಬಾಧಿತರು : ಅಜಾನೂರು-15, ಬದಿಯಡ್ಕ-3, ಬಳಾಲ್-3, ಬೇಡಡ್ಕ-14, ಬೆಳ್ಳೂರು-1, ಚೆಮ್ನಾಡ್-26, ಚೆಂಗಳ-34, ಚೆರ್ವತ್ತೂರು-4, ಎಣ್ಮಕಜೆ-2, ಕಳ್ಳಾರ್-6, ಕಾಂಞಂಗಾಡ್-17, ಕಾರಡ್ಕ-3, ಕಿನಾನೂರು-12, ಕಾಸರಗೋಡು-23, ಕೋಡೋಂ ಬೇಳೂರು-3, ಕುಂಬಳೆ-5, ಕುತ್ತಿಕ್ಕೋಲ್-4, ಮಧೂರು-19, ಮಡಿಕೈ-4, ಮಂಗಲ್ಪಾಡಿ-12, ಮಂಜೇಶ್ವರ-59, ಮೊಗ್ರಾಲ್‍ಪುತ್ತೂರು-7, ಮುಳಿಯಾರು-26, ನೀಲೇಶ್ವರ-3, ಪಡನ್ನ-7, ಪೈವಳಿಕೆ-1, ಪಳ್ಳಿಕೆರೆ-20, ಪನತ್ತಡಿ-3, ಪಿಲಿಕ್ಕೋಡು-1, ಪುಲ್ಲೂರು ಪೆರಿಯ-17, ಪುತ್ತಿಗೆ-4, ಈಸ್ಟ್ ಎಳೇರಿ-1, ತೃಕ್ಕರಿಪುರ-11, ಉದುಮ-40, ವಲಿಯಪರಂಬ-2, ವೆಸ್ಟ್ ಎಳೇರಿ-4 ಎಂಬಂತೆ ರೋಗ ಬಾಧಿಸಿದೆ.
ಕೇರಳದಲ್ಲಿ 7871 ಮಂದಿಗೆ ಸೋಂಕು :
ಕೇರಳದಲ್ಲಿ ಅ.6 ರಂದು 7871 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 25 ಮಂದಿ ಸಾವಿಗೀಡಾಗಿರುವುದಾಗಿ ಖಚಿತಗೊಂಡಿದೆ. ಇದರೊಂದಿಗೆ ಒಟ್ಟು ಸತ್ತವರ ಸಂಖ್ಯೆ 884 ಕ್ಕೇರಿತು. 6910 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 111 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 54 ಮಂದಿ ವಿದೇಶದಿಂದ 146 ಮಂದಿ ಇತರ ರಾಜ್ಯಗಳಿಂದ ಬಂದವರು. 4981 ಮಂದಿ ಗುಣಮುಖ ರಾಗಿದ್ದಾರೆ.
ರೋಗ ಬಾಧಿತರು : ತಿರುವನಂತಪುರ-989, ಮಲಪ್ಪುರಂ-854, ಕೊಲ್ಲಂ-845, ಎರ್ನಾಕುಳಂ-837, ತೃಶ್ಶೂರು-757, ಕಲ್ಲಿಕೋಟೆ-736, ಕಣ್ಣೂರು-545, ಪಾಲ್ಘಾಟ್-520, ಕೋಟ್ಟಯಂ-427, ಆಲಪ್ಪುಳ-424, ಕಾಸರಗೋಡು-416, ಪತ್ತನಂತಿಟ್ಟ-330, ವಯನಾಡು-135, ಇಡುಕ್ಕಿ-56 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-850, ಕೊಲ್ಲಂ-485, ಪತ್ತನಂತಿಟ್ಟ-180, ಆಲಪ್ಪುಳ-302, ಕೋಟ್ಟಯಂ-361, ಇಡುಕ್ಕಿ-86, ಎರ್ನಾಕುಳಂ-337, ತೃಶ್ಶೂರು-380, ಪಾಲ್ಘಾಟ್-276, ಮಲಪ್ಪುರಂ-541, ಕಲ್ಲಿಕೋಟೆ-628, ವಯನಾಡು-102, ಕಣ್ಣೂರು-251, ಕಾಸರಗೋಡು-202 ಎಂಬಂತೆ ಗುಣಮುಖರಾಗಿದ್ದಾರೆ.