ತಿರುವನಂತಪುರ: ರಾಜ್ಯದಲ್ಲಿ ಇಂದು 7983 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 1114, ತ್ರಿಶೂರ್ 1112, ಕೋಝಿಕ್ಕೋಡ್ 834, ತಿರುವನಂತಪುರ 790, ಮಲಪ್ಪುರಂ 769, ಕೊಲ್ಲಂ 741, ಆಲಪ್ಪುಳ 645, ಕೊಟ್ಟಾಯಂ 584, ಪಾಲಕ್ಕಾಡ್ 496, ಕಣ್ಣೂರು 337, ಪತ್ತನಂತಿಟ್ಟು 203, ಕಾಸರಗೋಡು 156, ವಯನಾಡ್ 145, ಇಡುಕ್ಕಿ 57 ಎಂಬಂತೆ ಸೋಂಕು ಬಾಧಿಸಿದೆ.
ಇಂದು 27 ಕೋವಿಡ್ ಸಾವುಗಳು:
ಇಂದು ರಾಜ್ಯಾದ್ಯಂತ 27 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊಲ್ಲಂನ ಅಂಚಲ್ ಮೂಲದ ಸೋಮಶೇಖರನ್ ಪಿಳ್ಳೈ (68), ಪತ್ತನಂತಿಟ್ಟು ತಿರುವಲ್ಲಾದ ಥಾಮಸ್ ಜೋಸೆಫ್ (43), ಆಲಪ್ಪುಳದ ಪೆರಿಂಗಿಲಿಪೂರಂನ ಸೋಮನ್ (56), ಎರ್ನಾಕುಳಂ ಉದ್ಯೋಗಮಂಡಲದ ಟಿ.ಟಿ.ವರ್ಗೀಸ್(84), ಆಲಂಗಾಡ್ ವಿ.ಕೆ.ಜೋಸ್(75), ಪಳ್ಳಿಕ್ಕವಲ್ ನ ಅಬ್ದುಲ್ ರಹ್ಮಾನ್(82), ಪಾರಪ್ಪಳ್ಳಿಯ ಸಿ.ವಿ.ಬಾಬು(61), ಕೊಚ್ಚಿಯ ಕೆ.ಆರ್.ಪುರುಷೋತ್ತಮನ್(74), ಕಾಕ್ಕನಾಡಿನ ಔಸಪ್(80), ಈಸ್ಟ್ ಒಕ್ಕೂಲ್ ನ ಥೋಮಸ್ (67), ತೃಶೂರ್ ಎರುಮಪೆಟ್ಟಿಯ ಮೋಹನ್(57), ಚೆಂಗಲ್ಲೂರ್(ಚಾಕೋ(73),ವಾಳ್ತಿಯ ರೋಯ್ ವಿ ಸೇವಿಯರ್(72), ಚಾಮಕ್ಕಾಲ್ ಚಂದ್ರನ್(73), ಆನಂದಪುರದ ಗೋವಿಂದನ್(74), ಪೆರುಮಂಗಲದ ಪೌಳಿ ಜೋಸೆಫ್ (57), ಪಾಲಕ್ಕಾಡ್ ಕೋಟ್ಟುಪ್ಪಾಯೂರ್ ನ ಕೃಷ್ಣನ್(49), ಕೊಪ್ಪಂನ ವಿ.ವಿಜಯನ್(59), ಮಲಪ್ಪುರಂ ವೆಳಿಯಕ್ಕೋಡ್ ನ ಆಯಿಷಮ್ಮ(85), ಕುಳತ್ತೂರ್ ನ ಇಬ್ರಾಹಿಂ(63), ಕೋಝಿಕ್ಕೋಡ್ ಕೊಕ್ಕಾಡಿಯ ಪ್ರಭಾವತಿ(47), ಚಂಗರತ್ವ ನ ಬಾಲಕೃಷ್ಣನ್ (83), ತಾಮರಶ್ಚೇರಿಯ ಸುಬೈದಾ(57), ವಯನಾಡ್ ಮೇಪ್ಪಾಟಿಯ ಕೋಝಿ(82) ಎಂಬವರು ಸೋಂಕಿನಿಂದ ಮೃತಪಟ್ಟವರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ನಿಂದ ಮೃತರಾದವರ ಸಂಖ್ಯೆ 1484ಕ್ಕೆ ಏರಿಕೆಯಾಗಿದೆ.
ಸಂಪರ್ಕದ ಮೂಲಕ 7049 ಜನರಿಗೆ ಸೋಂಕು:
ಇಂದು ಸೋಂಕು ಪತ್ತೆಯಾದವರಲ್ಲಿ 86 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 7049 ಜನರಿಗೆ ಸೋಂಕು ತಗುಲಿತು. 786 ಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಲಂ 826, ತ್ರಿಶೂರ್ 1104, ಕೋಝಿಕ್ಕೋಡ್ 797, ತಿರುವನಂತಪುರ 643, ಮಲಪ್ಪುರಂ 719, ಕೊಲ್ಲಂ 735, ಆಲಪ್ಪುಳ 635, ಕೊಟ್ಟಾಯಂ 580, ಪಾಲಕ್ಕಾಡ್ 287, ಕಣ್ಣೂರು 248, ಪತ್ತನಂತಿಟ್ಟು 152, ಕಾಸರಗೋಡು 143, ವಯನಾಡ್ 139, ಇಡುಕ್ಕಿ 41 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
ನಕಾರಾತ್ಮಕ ಪ್ರಕರಣಗಳ ವಿವರಗಳು
ಸೋಂಕು ನಿರ್ಣಯ ಮತ್ತು ಚಿಕಿತ್ಸೆ ಪಡೆದ 7330 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರಂ 562, ಕೊಲ್ಲಂ 510, ಪತ್ತನಂತಿಟ್ಟು 259, ಆಲಪ್ಪುಳ 571, ಕೊಟ್ಟಾಯಂ 743, ಇಡುಕ್ಕಿ 279, ಎರ್ನಾಕುಲಂ 853, ತ್ರಿಶೂರ್ 582, ಪಾಲಕ್ಕಾಡ್ 458, ಮಲಪ್ಪುರಂ 994, ಕೋಝಿಕ್ಕೋಡ್ 789, ವಯನಾಡ್ 88, ಕಣ್ಣೂರು 480, ಕಾಸರಗೋಡು 162 ಮಂದಿಗಳಿಗೆ ನೆಗೆಟಿವ್ ಆಗಿದೆ. ಇದರೊಂದಿಗೆ 91,190 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 3,40,324 ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ಈ ಜಿಲ್ಲೆಗಳಲ್ಲಿ ನಿಷೇಧ ಮುಂದುವರಿಯಲಿದೆ:
ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಸಿಆರ್‍ಪಿಸಿ 144 ರ ಅಡಿಯಲ್ಲಿ ಅಕ್ಟೋಬರ್ 31 ರವರೆಗೆ ರಾಜ್ಯ ವಿಧಿಸಿದ್ದ ನಿಷೇಧವು ಇಂದು ಮುಕ್ತಾಯಗೊಳ್ಳುತ್ತಿದ್ದರೆ, ಕೆಲವು ಜಿಲ್ಲೆಗಳು ನಿಷೇಧವನ್ನು ವಿಸ್ತರಿಸಿದೆ. ಈ ನಿಷೇಧವನ್ನು ಮಲಪ್ಪುರಂ, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ , ಪತ್ತನಂತಿಟ್ಟು , ಕೊಟ್ಟಾಯಂ, ಕಣ್ಣೂರು, ಕೊಲ್ಲಂ ಮತ್ತು ಇಡುಕಿ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ತಿರುವನಂತಪುರಂನಲ್ಲಿ ಉನ್ನತ ಮಟ್ಟದ ಕೋವಿಡ್ ಪ್ರಕರಣಗಳ ನಿಷೇಧವನ್ನು ವಿಸ್ತರಿಸುವ ಕುರಿತು ಇಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಲೆಕ್ಟರ್ ಹೇಳಿದ್ದಾರೆ.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ. ಸಮರಸ ಸುದ್ದಿ ಬಳಗ