ಕಾಸರಗೋಡು: ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ವಿಶ್ವ ದೃಷ್ಟಿ ದಿನಾಚರಣೆ ನಡೆಸಲಾಗುತ್ತದೆ. ಈ ವರ್ಷ ಅ.8ರಂದು ವಿಶ್ವ ದೃಷ್ಟಿ ದಿನಾಚರಣೆ ಜರಗಲಿದೆ.
ರಾಷ್ಟ್ರೀಯ ಮಟ್ಟದ ಕುರುಡುತನ-ದೃಷ್ಟಿ ವಿಶೇಷ ಚೇತನತೆ ನಿಯಂತ್ರಣ ಸಮಿತಿ ಈ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸುತ್ತದೆ. "ನೋಟದಲ್ಲಿದೆ ನಿರೀಕ್ಷೆ" ಎಂಬುದು ಈ ವರ್ಷದ ದಿನಾಚರಣೆಯ ಸಂದೇಶವಾಗಿದೆ. ದೃಷ್ಟಿ ಸಂಬಂಧ ಕಾಯಿಲೆಗಳ, ನೋಟಸಂಬಂಧ ಸಮಸ್ಯೆಗಳ ಚಿಕಿತ್ಸೆ ಮತ್ತು ನಿಯಂತ್ರಣ, ಈ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ನೇತೃತತ್ವದಲ್ಲಿ ದೃಷ್ಟಿ ದಿನಾಚರಣೆ ನಡೆದುಬರುತ್ತಿದೆ.
ಮಕ್ಕಳ ಕಂಗಳ ಬಗ್ಗೆ ಇರಲಿ ಜಾಗ್ರತೆ:
ಮಕ್ಕಳಲ್ಲಿ ದೃಷ್ಟಿದೋಷಕ್ಕೆ ಪ್ರಧಾನ ಕಾರಣ ಕಣ್ಣುಗಳಿಗೆ ಸೋಂಕು, ವಿಟಮಿನ್ ಎ ಯ ಕೊರತೆ, ಪೆÇೀಷಕಾಹಾರದ ಕೊರತೆ, ಕಣ್ಣುಗಳಿಗೆ ತಗುಲಿದ ಏಟು, ಜನನದಿಂದಲೇ ಬಾಧಿಸಿದ ದೃಷ್ಟಿಹೀನತೆ, ತಿಂಗಳು ಪೂರ್ತಿಯಾಗದೇ ಜನಿಸಿದ ಕೆಲವು ಮಕ್ಕಳಲ್ಲಿ ತಲೆದೋರುವ ರೆಟಿನಾಪತಿ ಆಫ್ ಪ್ರೀಮೆಚ್ಯೂರಿಟಿ ಇತ್ಯಾದಿಗಳಾಗಿವೆ. ಮಕ್ಕಳಿಗೆ ಕಾಯಿಲೆ ತಗುಲುವ ಸಾಧ್ಯತೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಮತ್ತು ಅವರಿಗೆ ಸುದೀರ್ಘ ಬದುಕು ಬಾಕಿಯಿರುವ ಕಾರಣ ಅವರ ಕಂಗಳ ರಕ್ಷಣೆ ಪ್ರಧಾನವಾಗುತ್ತದೆ. ಶೇ 75-ಶೇ 80 ಪ್ರಮಾಣದ ದೃಷ್ಟಿದೋಷವನ್ನು ಸೂಕ್ತ ಅವಧಿಯಲ್ಲಿ, ನಿಖರವಾದ ಚಿಕಿತ್ಸೆಯ ಮೂಲಕ ತಡೆಗಟ್ಟಬಹುದಾಗಿದೆ.