ತಿರುವನಂತಪುರ: ರಾಜ್ಯದಲ್ಲಿ ಇಂದು 8553 ಜನರಿಗೆ ಕೋವಿಡ್ ಸೋಂಕು ಖಚಿತಪಡಿಸಲಾಗಿದೆ. ಮುಖ್ಯಮಂತ್ರಿ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಇಂದಿನ ಕೋವಿಡ್ ವಿವರಗಳನ್ನು ಸ್ಪಷ್ಟಪಡಿಸಿದ್ದಾರೆ.ಇಂದು ಕೋಝಿಕ್ಕೋಡ್ 1164, ತಿರುವನಂತಪುರ 1119, ಎರ್ನಾಕುಳಂ 952, ಕೊಲ್ಲಂ 866, ತ್ರಿಶೂರ್ 793, ಮಲಪ್ಪುರಂ 792, ಕಣ್ಣೂರು 555, ಆಲಪ್ಪುಳ 544, ಪಾಲಕ್ಕಾಡ್ 496, ಕೊಟ್ಟಾಯಂ 474, ಪತ್ತನಂತಿಟ್ಟು 315, ಕಾಸರಗೋಡು 278, ವಯನಾಡ್ 109, ಇಡುಕ್ಕಿ 96 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4851 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 880, ಕೊಲ್ಲಂ 400, ಪತ್ತನಂತಿಟ್ಟು 167, ಆಲಪ್ಪುಳ 608, ಕೊಟ್ಟಾಯಂ 318, ಇಡಕ್ಕಿ 80, ಎರ್ನಾಕುಳಂ 405, ತ್ರಿಶೂರ್ 260, ಪಾಲಕ್ಕಾಡ್ 217, ಮಲಪ್ಪುರಂ 715, ಕೊಝಿಕ್ಕೋಡ್ 402, ವಯನಾಡ್ 97, ಕಣ್ಣೂರ್ 109, ಕಾಸರಗೋಡು 193, ಎಂಬಂತೆ ಜಿಲ್ಲಾವಾರು ಮಟ್ಟದಲ್ಲಿ ಪರಿಶೋಧನಾ ಫಲಿತಾಂಶಗಳು ನೆಗೆಟಿವ್ ಆಗಿದೆ. ಇದರೊಂದಿಗೆ 84,497 ಜನರಿಗೆ ಸೋಂಕು ನಿಖರಗೊಂಡು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 1,44,471 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಕೋವಿಡ್ ಸಾವು:
ಇಂದು, ಕೋವಿಡ್ ಕಾರಣದಿಂದಾಗಿ 23 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಪೆರುಕಾವು ಮೂಲದ ಕೃಷ್ಣನ್ ನಾಯರ್ (83), ಅನಯಾರ್ ನಿವಾಸಿ ಅಶೋಕನ್ (75), ವೇಳಿ ನಿವಾಸಿ ಜೋಸೆಫ್ ಫ್ರಾಂಕ್ಲಿನ್ (72), ಪಾರಶಾಲಾ ನಿವಾಸಿ ರಾಜಯ್ಯನ್ (80), ಮಂಜವಿಳಕ್ ನ ರಾಬರ್ಟ್ (53), ಪಾಲೋಡ್ ನ ಜಯಂತಿ (50), ನೆಡುಮಾಂಗಾಡ್ ನ ಅಣ್ಣಾಚಿ ಪೆರುಮಾಲ್ ಆಚಾರಿ 90), ಮಂಜವಿಳಕ್ ನ ದೇವರಾಜ್ (55), ಕೊಲ್ಲಂ ಪತ್ತನಾಪುರಂದ ದೇವರಾಜನ್ (63), ಆಲಪ್ಪುಳ ಆರಟ್ಟುಪುಳದ ಅಬ್ದುಲ್ ಸಮದ್ (62), ಕರಿಯಲಕುಳಂಗರದ ಸಫಿಯಾ ಬೀವಿ (67), ಕಟ್ಟನಂ ನಿವಾಸಿ ಮರಿಯಕುಟ್ಟಿ (68), ಪುಳಿಕ್ಕುನ್ನು ನಿವಾಸಿ ರೋಸಮ್ಮ(59), ಎರ್ನಾಕುಳಂ ನಾಯರಂಬಳದ ನಕುಲನ್ (62), ಎಡವಳ್ಳಿ ನಿವಾಸಿ ರೋಸಿ ಜೋಸೆಫ್ (89), ಪಾಲಕ್ಕಾಡ್ ಕವ್ವೂರ್ ನ ಚಮ್ಮಣಿ(63), ಮಲಪ್ಪುರ ತಿರೂರ್ ನ ಹಸ್ಬುಲ್ಲಾ(68), ಕ್ಲಾರಿ ನಿವಾಸಿ ಮುಹಮ್ಮದ್ (58), ತಚಿಂಗನಾಡಂನ ಕುಂಞÂ ಮೊಯ್ದೀನ್ ಹಾಜಿ (87), ವೆನ್ನಿಯೂರ್ ನ ಬಿರಿಯಕುಟ್ಟಿ (77).ಇರಿಯಂಗೂರಿನ ಫಾತಿಮ(83), ಅರಕ್ಕುಪರಂಬ್ ನ ಕುಂಞÂ ಅಹಮ್ಮದ್ ಅಲಿ(50), ಕಣ್ಣೂರು ಕೊಯೋಟ್ಟ್ ನ ಮೊಹಮ್ಮದ್ ಕುಂಞÂ (68) ಎಂಬವರು ಕೋವಿಡ್ ಬಾಧಿಸಿ ಮೃತಪಟ್ಟವರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 836 ಕ್ಕೆ ಏರಿಕೆಯಾಗಿದೆ.
ಲಸಿಕೆ:
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ಕೋವಿಡ್ ಲಸಿಕೆಗಳು 2021ರ ಜುಲೈ ವೇಳೆಗೆ ದೇಶದ 20, 25 ಕೋಟಿ ಜನರಿಗೆ ಲಭ್ಯವಾಗುವಂತೆ ಯೋಜಿಸಲಾಗಿದೆ ಎಂದಿರುವರು. ಸರ್ಕಾರಕ್ಕೆ 40, 50 ಕೋಟಿ ಲಸಿಕೆ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆದ್ಯತೆಯ ಜನಸಂಖ್ಯೆಯ ಗುಂಪುಗಳ ವಿವರಗಳನ್ನು ಕಳುಹಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ಬಾಧಿತರು:
ದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 65 ಲಕ್ಷ ದಾಟಿದೆ. ಪ್ರಸ್ತುತ, ದೇಶದಲ್ಲಿ 65,49,374 ಜನರಿಗೆ ಕೋವಿಡ್ ಸೋಂಕು ಬಾಧಿಸಿದೆ. ದೇಶದಲ್ಲಿ 9,37,625 ಸಕ್ರಿಯ ಪ್ರಕರಣಗಳಿವೆ. ಈವರೆಗೆ 55,09,967 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 75,829 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದಿಂದಾಗಿ ದೇಶದಲ್ಲಿ ಈವರೆಗೆ 1,01,782 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶವು ವಿಶ್ವದಲ್ಲೇ ಅತಿ ಹೆಚ್ಚು ದೈನಂದಿನ ಸಂಖ್ಯೆಯನ್ನು ಹೊಂದಿದೆ.