ಶಾರ್ಜಾ: ಐಪಿಎಲ್ ನ 46ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್ ಗಳ ಜಯ ಸಾಧಿಸಿದೆ.
ಕೋಲ್ಕತ್ತಾ ನೀಡಿದ್ದ 150 ರನ್ ಗುರಿ ಬೆನ್ನತ್ತಿದ ಪ<ಜಾಬ್ 18.5 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿದೆ.ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ 28, ಮಂದೀಪ್ ಸಿಂಗ್ ಅಜೇಯ 65, ಕ್ರಿಸ್ ಗೇಲ್ 51 ರನ್ ಕಲೆಹಾಕಿದ್ದರು.ಕೊಲ್ಕತ್ತಾ ಪರ ಫಗ್ರ್ಯೂಸನ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಪಂಜಾಬ್ ಈ ಗೆಲುವಿನೊಂದಿಗೆ ಎರಡು ಅಂಕ ಕಲೆ ಹಾಕಿದ್ದು, 12 ಅಂಕ ಸೇರಿಸಿದೆ. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 149 ರನ್ ಕಲೆ ಹಾಕಿತು. ಆರಂಭಿಕ ಶುಭ್ ಮನ್ ಗಿಲ್ (57) ಹಾಗೂ ಇಯಾನ್ ಮಾರ್ಗನ್ (40) ಇವರುಗಳ ಉತ್ತಮ ಆಟ ಪ್ರದರ್ಶಿಸಿ ಕೆಕೆಆರ್ ಉತ್ತಮ ರನ್ ಕಲೆಹಾಕುವಲ್ಲಿ ನೆರವಾದರು.