ತಿರುವನಂತಪುರ: ಇಂದು ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳು 9,000 ದಾಟಿದೆ. ಇಂದು, 9,258 ಜನರಿಗೆ ಸೋಂಕು ಪತ್ತೆಯಾಗಿದೆ. ಸೋಂಕು ಕೋಝಿಕ್ಕೋಡ್ , ತಿರುವನಂತಪುರ, ಎರ್ನಾಕುಳಂ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 1,000 ದಾಟಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಂದು 20 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 800 ಕ್ಕೆ ಏರಿದೆ.
ಸೋಂಕು ಬಾಧಿತರು:
ಕಲ್ಲಿಕೋಟೆ-1146, ತಿರುವನಂತಪುರ - 1096, ಎರ್ನಾಕುಳಂ-1042, ಮಲಪ್ಪುರಂ-1016, ಕೊಲ್ಲಂ - 892, ತೃಶ್ಶೂರು-812, ಪಾಲ್ಘಾಟ್-633, ಕಣ್ಣೂರು-625, ಆಲಪ್ಪುಳ-605, ಕಾಸರಗೋಡು-476, ಕೋಟ್ಟಯಂ-432, ಪತ್ತನಂತಿಟ್ಟ-239, ಇಡುಕ್ಕಿ-136, ವಯನಾಡು-108 ಎಂಬಂತೆ ರೋಗ ಬಾಧಿಸಿದೆ.
20 ಕೋವಿಡ್ ಮೃತ್ಯು:
ಇಂದು, ಕೋವಿಡ್ ಕಾರಣದಿಂದ 20 ಸಾವುಗಳು ದೃಢಪಟ್ಟಿದೆ. ತಿರುವನಂತಪುರ ಪೆರೂರ್ಕಾಡದ ತಂಕಪ್ಪನ್ (82), ಪೂವರ್ ನ ಶಶಿಧರನ್ (63), ಚಪಾತ್ ನ ಅಬ್ದುಲ್ ಅಜೀಜ್ (52), ಪೆÇತೆನ್‍ಕೋಡ್ ನಿಂದ ಶಾಹುಲ್ ಹಮೀದ್ (66), ಕೊಲ್ಲಂ ಒಯೂರ್ ನ ಫಜಿಲುದ್ದೀನ್ (76), ತೃಶೂರ್ ನ ಶತ್ರುಘ್ನನ್ ಆಚಾರಿ (86),ಕರುನಾಗಪಳ್ಳಿಯ ರಮೇಶನ್(63), ತಂಗಚ್ಚೇರಿಯ ನೆಲ್ಸನ್(56), ಕರುನಾಗಪಳ್ಳಿಯ ಸುರೇಂದ್ರನ್(66), ಮಯ್ಯನಾಟ್ ನ ಎಂ.ಎಂ. ಶೆಫೀ (68), ಆಲಪುಳದ ರಸೀನ (43), ನೂರನಾಡಿನ ನೀಲಕಂಠನ್ ನಾಯರ್(92), ಕನಾಲ್ ನ ಅಬ್ದುಲ್ ಹಮೀದ್(73), ಕೋಟ್ಟಯಂ ನ ವಿ.ಆರ್ ಶಶಿ(68), ಮರಿಯನ್ನೂರ್ ನಿವಾಸಿ ಸುಗತಮ್ಮ(78), ಮರಿಯಂತುರಂನ ಸರೋಜಿನಿಯಮ್ಮ (81), ಕುಮರಕೋಮ್ ಪೂರ್ವದ ಸುಶಿಲಾ (54), ಮಟ್ಟಂಚೇರಿಯ ನಿರ್ಮಲಾ (74), ಎರ್ನಾಕುಲಂ, ಕರಿಗಕುರತ್ ನ ಪಿ.ವಿ.ವಿಜು(42), ಕೋಝಿಕ್ಕೋಡ್ ದೇವಿ (75) ಎಂಬವರು ಇಂದು ಕೋವಿಡ್ ನಿಂದ ಮೃತರಾದವರಾಗಿದ್ದಾರೆ.
ಒಟ್ಟು ಸಾವಿನ ಸಂಖ್ಯೆ 791 ಕ್ಕೆ ಏರಿಕೆಯಾಗಿದೆ.
ಸಂಪರ್ಕದ ಮೂಲಕ 8,274 ಜನರಿಗೆ ಸೋಂಕು:
ಇಂದು, 47 ಮಂದಿಗೆ ವಿದೇಶಗಳಿಂದ ಮತ್ತು 184 ಪ್ರಕರಣಗಳು ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 8274 ಜನರಿಗೆ ಸೋಂಕು ತಗುಲಿತು. 657 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 1109, ತಿರುವನಂತಪುರಂ 956, ಎರ್ನಾಕುಲಂ 851, ಮಲಪ್ಪುರಂ 929, ಕೊಲ್ಲಂ 881, ತ್ರಿಶೂರ್ 807, ಪಾಲಕ್ಕಾಡ್ 441, ಕಣ್ಣೂರು 475, ಆಲಪ್ಪುಳ 590, ಕಾಸರಗೋಡು 451, ಕೊಟ್ಟಾಯಂ 421, ಪತ್ತನಂತಿಟ್ಟು 161, ಇಡುಕ್ಕಿ 99, ವಯನಾಡ್ 103 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ,
93 ಆರೋಗ್ಯ ಕಾರ್ಯಕರ್ತರಿಗೆ ಸಂಪರ್ಕದ ಮೂಲಕ ಕೋವಿಡ್:
ರಾಜ್ಯದ ಇಂದಿನ ಒಟ್ಟು ಸೋಂಕಿತರಲ್ಲಿ 93 ಆರೋಗ್ಯ ಕಾರ್ಯಕರ್ತರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು. ತಿರುವನಂತಪುರ 27, ಕಣ್ಣೂರು 23, ಎರ್ನಾಕುಲಂ 11, ಕಾಸರಗೋಡು 6, ಪತ್ತನಂತಿಟ್ಟು , ಕೋಝಿಕ್ಕೋಡ್ ತಲಾ 5, ಕೊಟ್ಟಾಯಂ, ವಯನಾಡ್ ತಲಾ 4, ಆಲಪ್ಪುಳ 3, ಕೊಲ್ಲಂ, ತ್ರಿಶೂರ್ 2 ಮತ್ತು ಮಲಪ್ಪುರಂ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾದರು. ಎರ್ನಾಕುಲಂ ಜಿಲ್ಲೆಯ ಎಲ್ಲಾ 3 ಐಎನ್‍ಹೆಚ್ ಎಸ್ ನೌಕರರಿಗೂ ಸೋಂಕು ದೃಢಪಟ್ಟಿದೆ.
4092 ಮಂದಿ ಗುಣಮುಖ : ತಿರುವನಂತಪುರ-357, ಕೊಲ್ಲಂ-295, ಪತ್ತನಂತಿಟ್ಟ-218, ಆಲಪ್ಪುಳ-342. ಕೋಟ್ಟಯಂ-174, ಇಡುಕ್ಕಿ-93, ಎರ್ನಾಕುಳಂ-212, ತೃಶ್ಶೂರು-270, ಪಾಲ್ಘಾಟ್-221, ಮಲಪ್ಪುರಂ-951, ಕಲ್ಲಿಕೋಟೆ-423, ವಯನಾಡು-75, ಕಣ್ಣೂರು-303, ಕಾಸರಗೋಡು-158 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 77,482 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ 1,35,144 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು ವಿವರ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,46,631 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,15,778 ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 30,853 ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 3599 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.