ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ವಿರುದ್ಧ ಯುಎಪಿಎ ಆರೋಪದ ವಿರುದ್ಧ ನ್ಯಾಯಾಲಯ ಎನ್‍ಐಎಗೆ ಸಾಕ್ಷ್ಯ ಕೇಳಿದೆ. ವಿಮಾನ ನಿಲ್ದಾಣಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಗುಪ್ತಚರ ವರದಿ ಮಾಡಿದೆ ಮತ್ತು ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ವಿಷಯವಾಗಿದೆ ಎಂದು ಎನ್.ಐ.ಎ ನ್ಯಾಯಾಲಯದಲ್ಲಿ ವಾದಿಸಿತು. ಆದರೆ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಭಯೋತ್ಪಾದನೆಯೊಂದಿಗೆ ಹೇಗೆ ಹೋಲಿಸುತ್ತೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್.ಐ.ಎ) ಭಯೋತ್ಪಾದನೆಯನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಪ್ರತಿವಾದಿ ನ್ಯಾಯಾಲಯದಲ್ಲಿ ವಾದಿಸಿದರು. ಯುಎಪಿಎ ವಿರುದ್ಧದ ಆರೋಪವನ್ನು ದೃಢೀಕರಿಸಲು ಯಾವ ಪುರಾವೆಗಳಿವೆ ಎಂದು ನ್ಯಾಯಾಲಯ ತನಿಖಾ ಸಂಸ್ಥೆಯನ್ನು ಕೇಳಿದೆ. "ನೀವು 90 ದಿನಗಳವರೆಗೆ ಸಾಕ್ಷ್ಯಗಳಿಗಾಗಿ ತನಿಖೆ ನಡೆಸಿಯೂ ಏನೂ ಸಿಗಲಿಲ್ಲವೇ?" ಎಮದು ನ್ಯಾಯಾಲಯ ಕೇಳಿತು.
ಕಳ್ಳಸಾಗಣೆ ನಡೆದಿರುವುದು ನಿಜವೇ ಆದರೆ ಅದನ್ನು ಭಯೋತ್ಪಾದನೆ ಮತ್ತು ಯುಎಪಿಎಗೆ ಹೇಗೆ ಜೋಡಿಸಬಹುದು ಎಂದು ನ್ಯಾಯಾಲಯ ಪ್ರಶ್ನಿಸಿದೆ. "ಎಲ್ಲಾ ಕಳ್ಳಸಾಗಣೆ ಪ್ರಕರಣಗಳಿಗೆ ಯುಎಪಿಎ ಪರಿಹಾರವೇ?" ಎಂದು ನ್ಯಾಯಾಲಯ ಕೇಳಿದೆ. ಕಳ್ಳಸಾಗಣೆ ಆರ್ಥಿಕ ಲಾಭಕ್ಕಾಗಿ ಅಲ್ಲ ಎಂಬ ಆರೋಪ ಹೇಗೆ ಸರಿಯಾಗುತ್ತದೆ ಎಂದು ನ್ಯಾಯಾಲಯ ತನಿಖಾ ಸಂಸ್ಥೆಯನ್ನು ಕೇಳಿದೆ. ಪ್ರಕರಣದ ದಿನಚರಿಯನ್ನು ಪರಿಶೀಲಿಸಿದ ಯಾವುದೇ ಪುರಾವೆಗಳು ಇದೆಯೇ ಮತ್ತು ಇದು ಎರಡು ದೇಶಗಳ ಪರಸ್ಪರ ಸ್ನೇಹವನ್ನು ಹಾಳುಮಾಡುವ ರೀತಿಯಲ್ಲಿ ವರ್ತಿಸಿರುವುದು ಹೇಗೆಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಸ್ವಪ್ನಾ ಸುರೇಶ್ ಸೇರಿದಂತೆ ಆರೋಪಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇಂತಹ ಸನ್ನಿವೇಶದಲ್ಲಿ ನ್ಯಾಯಾಲಯ ಕೇಳಿರುವ ಪ್ರಶ್ನೆಗಳು ಎನ್.ಐ.ಎ.ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದು ಹೌದೇ ಎಂಬ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.
ಇದೇ ವೇಳೆ ಚಿನ್ನ ಕಳ್ಳಸಾಗಣೆ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಮತ್ತು ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ ಎಂದು ತಿಳಿದಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿವರಿಸಿದೆ. ವರದಿಗಳ ಪ್ರಕಾರ, ದಾವೂದ್ ಇಬ್ರಾಹಿಂನ ಗ್ಯಾಂಗ್ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹಣವನ್ನು ಕಳ್ಳಸಾಗಣೆ ಮಾಡಿದೆ ಮತ್ತು ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡುವುದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತದೆ ಎಂದು ಎನ್.ಐ.ಎ ಹೇಳಿಕೊಂಡಿದೆ.
ತನಿಖೆಯನ್ನು ಮುಂದುವರಿಸಲು ಎನ್.ಐ.ಎ ವಾದಗಳು ಸಾಕಷ್ಟಿದ್ದರೂ, ಆರೋಪಿಗಳು ಏಕೆ ಬಂಧನದಲ್ಲಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಈ ವೇಳೆ ಡಿಜಿಟಲ್ ಪುರಾವೆಗಳು ಲಭ್ಯವಿದೆ ಎಂದು ಎನ್.ಐ.ಎ ಹೇಳಿದೆ. ತನಿಖೆ ಇನ್ನಷ್ಟು ಮುಂದುವರಿಯುವ ಸಾಧ್ಯತೆ ಇದೀಗ ನಿಚ್ಚಳವಾಗಿದ್ದು, ವಾದ ಪ್ರತಿವಾದಗಳು ಹಲವು ಸಂಶಗಳಿಗೂ ಎಡೆಮಾಡಿದೆ.
ನ್ಯಾಯಾಲಯದ ಇಂದಿನ ಪ್ರಶ್ನಾವಳಿ ಮತ್ತು ಎನ್ ಐ ಎ ವಾದಗಳನ್ನು ಗಮನಿಸಿದರೆ ಈ ಪ್ರಕರಣ ಶೀಘ್ರ ಬಿದ್ದುಹೋಗುವ ಸಾಧ್ಯತೆ ನಿಚ್ಚಳವಾಗಿದ್ದು, ಇದರ ಹಿಂದೆ ಎಂತಹ ಕುಳಗಳಿರಬಹುದು ಎಂಬ ಬಗ್ಗೆ ಜನಸಾಮಾನ್ಯರಿಗೆ ಹಲವು ಸಂಶಯಗಳನ್ನು ಹುಟ್ಟುಹಾಕುತ್ತಿದೆ.