ತಿರುವನಂತಪುರ: ಕೇರಳದಲ್ಲಿ ಇಂದು ಮತ್ತೆ ಏರುಗತಿಯ ಸೋಂಕು ಲೆಕ್ಕಾಚಾರವನ್ನು ಸರ್ಕಾರ ಬಿಡುಗಡೆಮಾಡಿದೆ. ಇಂದು ರಾಜ್ಯದಲ್ಲಿ 9250 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಇಪ್ಪತ್ತೈದು ಮಂದಿ ಮೃತಪಟ್ಟಿದ್ದಾರೆ. 8048 ಮಂದಿ ಗುಣಮುಖರಾದರು. ಇದು ಈವರೆಗಿನ ಗರಿಷ್ಠ ಗುಣಮುಖ ಅಂಕಿಸಂಖ್ಯೆಯಾಗಿದೆ.
ಪಾಸಿಟಿವ್ ಆದ ಜಿಲ್ಲಾವಾರು ವಿವರ:
ಇಂದು ಸೋಂಕು ದೃಢಪಟ್ಟ 9,250 ಜನರಲ್ಲಿ ಕೋಝಿಕ್ಕೋಡ್ ನಲ್ಲಿ ಅತ್ಯಧಿಕ ಸೋಂಕಿತರಿದ್ದಾರೆ. ಕೋಝಿಕ್ಕೋಡ್ 1205, ಮಲಪ್ಪುರಂ 1174, ತಿರುವನಂತಪುರ 1012, ಎರ್ನಾಕುಳಂ 911, ಆಲಪ್ಪುಳ 793, ತ್ರಿಶೂರ್ 755, ಕೊಲ್ಲಂ 714, ಪಾಲಕ್ಕಾಡ್ 672, ಕಣ್ಣೂರು 556, ಕೊಟ್ಟಾಯಂ 522, ಕಾಸರಗೋಡು 366, ಪತ್ತನಂತಿಟ್ಟು 290, ಇಡುಕ್ಕಿ 153, ವಯನಾಡ್ 127 ಎಂಬಂತೆ ಸೋಂಕು ಬಾಧಿಸಿದೆ.
ಅತ್ಯಧಿಕ ಗುಣಮುಖರಾದ ದಿನ:
ಇಂದು ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾದ ದಿನವಾಗಿ ಗುರುತಿಸಲ್ಪಟ್ಟಿದೆ. 8048 ಸೋಂಕಿತರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರಂ 1074, ಕೊಲ್ಲಂ 1384, ಪತ್ತನಂತಿಟ್ಟು 222, ಆಲಪ್ಪುಳ 348, ಕೊಟ್ಟಾಯಂ 452, ಇಡುಕ್ಕಿ 98, ಎರ್ನಾಕುಳಂ 458, ತ್ರಿಶೂರ್ 860, ಪಾಲಕ್ಕಾಡ್ 315, ಮಲಪ್ಪುರಂ 909, ಕೋಝಿಕ್ಕೋಡ್ 835, ವಯನಾಡ್ 152, ಕಣ್ಣೂರು 492, ಕಾಸರಗೋಡು 449 ಎಂಬಂತೆ ಸೋಂಕು ಮುಕ್ತರಾದರು. ಇದರೊಂದಿಗೆ 91,756 ಜನರಿಗೆ ಸೋಂಕು ನಿಖರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,75,304 ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
25 ಕೋವಿಡ್ ಮೃತ್ಯು:
ಇಂದು ಕೋವಿಡ್ ಕಾರಣದಿಂದ 25 ಸಾವುಗಳು ದೃಢಪಡಿಸಲಾಗಿದೆ. ತಿರುವನಂತಪುರ ನೆಯ್ಯಾಟಿಂಗರದ ಶಶಿಧರನ್ ನಾಯರ್ (75), ಪಾರಶಾಲದ ಚೆಲ್ಲಪ್ಪನ್ (70), ವಾಮನಪುರಂನ ಮಂಜು (29), ನಾಗರೂರಿನ ನುಸೈಫಾ ಬೀವಿ (65), ಕೀಜಾರೂರಿನಿಂದ ಒಮಾನಾ (68), ಆರ್ಯನ್ಡಿನ ವೇಲುಕುಟ್ಟಿ(68) ಕನ್ಯಾಕುಮಾರಿಯ ಗುಣಶೀಲನ್(53), ಕೊಲ್ಲಂ ನೀಲಮೇಲಿನ ನಸೀರಾ ಬೀವಿ (53), ಅಂಚಲ್ ನ ಸುಶೀಲನ್ (45), ಎರಾವಿಪುರಂನ ಥಾಮಸ್ ಫಿಲಿಪೆÇೀಸ್ (68), ಕುಂಡರಾ ದ ತೆಲ್ಮಾ (81), ಏಲಪಿಕುಳಂನ ಅಬ್ದುಲ್ ರಹಮಾನ್ ಕುಂಞÂ (63), ಕಡಕಂಪಳ್ಳಿಯ ಪ್ರಕಾಶನ್ (68). ಕೊಟ್ಟಾಯಂನ ಸಿಜೋ ಥಾಮಸ್ (38), ಎರ್ನಾಕುಳಂ ಮುವಾಟ್ಟುಪುಳದ ಅಮ್ಮಿನಿ ಶ್ರೀಧರನ್ (80), ವೈಪಿನ್ ನ ಶಿವನ್ (84), ಮುವಾಟ್ಟುಪುಳದ ಫಾತಿಮಾ (79), ಪೆರುಂಬಾವೂರಿನಿಂದ ಶಾಜಿ (57), ಕೊಡುಂಗಲ್ಲೂರಿನ ಸುಬೈದಾ (55) ಕೋಝಿಕ್ಕೋಡ್ ವಡಗರದ ರಾಘವನ್(85), ಮಲಪ್ಪುರಂ ಪೆರುಂದಳಮಣ್ಣದ ಅಬ್ದುಲ್ ಖಾದಿರ್(70), ಪೊನ್ನಾನಿಯ ಬಿಪಾತು(60), ಪುರಂಗ್ ನ ಮರಿಯಂ(62), ಅರಕ್ಕುಪರಂಬ್ ನ ಮುಹಮ್ಮದ್(70), ಕಾಸರಗೋಡು ಚೆಮ್ನಾಡಿನ ಅಬ್ದುಲ್ಲ(61) ಎಂಬವರು ಸೋಂಕಿನಿಂದ ಮೃತರಾದವರೆಂದು ಸರ್ಕಾರ ಘೋಶಿಸಿದೆ. ಈವರೆಗೆ ಒಟ್ಟು 955 ಮಂದಿ ಸೋಂಕಿನಿಂದ ಮೃತರಾಗಿರುವರು.