ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 242 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 505 ಮಂದಿ ಗುಣಮುಖರಾಗಿದ್ದಾರೆ. 233 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ವಿದೇಶದಿಂದ ಬಂದ 9 ಮಂದಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಇಬ್ಬರ ಸಾವು : 45 ವರ್ಷದ ಪುತ್ತಿಗೆ ನಿವಾಸಿ ಅಧ್ಯಾಪಕರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಮುಳ್ಳೇರಿಯಾದ 36 ವರ್ಷದ ಮಹಿಳೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ನಿಂದ ಸಾವಿಗೀಡಾದರು. ಅವರನ್ನು ಅ.8 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಜನ್ಮ ನೀಡಿದ ಬಳಿಕ ಅವರು ಸಾವಿಗೀಡಾದರು. ಮಗುವನ್ನು ವೆಂಟಿಲೇಟರ್ ನಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರೋಗ ಬಾಧಿತರು : ಅಜಾನೂರು-7, ಬದಿಯಡ್ಕ-12, ಬಳಾಲ್-4, ಬೇಡಡ್ಕ-1, ಚೆಮ್ನಾಡ್-14, ಚೆಂಗಳ-10, ಚೆರ್ವತ್ತೂರು-2, ಈಸ್ಟ್ ಎಳೇರಿ-1, ಕಳ್ಳಾರ್-3, ಕಾಂಞಂಗಾಡ್-37, ಕಾಸರಗೋಡು-3, ಕಿನಾನೂರು-5, ಕೋಡೋಂ ಬೇಳೂರು-1, ಕುಂಬ್ಡಾಜೆ-2, ಕುಂಬಳೆ-11, ಮಧೂರು-12, ಮಡಿಕೈ-7, ಮಂಗಲ್ಪಾಡಿ-5, ಮಂಜೇಶ್ವರ-4, ಮೀಂಜ-1, ಮೊಗ್ರಾಲ್ ಪುತ್ತೂರು-4, ಮುಳಿಯಾರು-5, ನೀಲೇಶ್ವರ-14, ಪಡನ್ನ-3, ಪಳ್ಳಿಕೆರೆ-8, ಪನತ್ತಡಿ-1, ಪಿಲಿಕೋಡು-10, ಪುಲ್ಲೂರು-5, ಪುತ್ತಿಗೆ-5, ತೃಕ್ಕರಿಪುರ-8, ಉದುಮ-28, ವಲಿಯಪರಂಬ-5, ವೆಸ್ಟ್ ಎಳೇರಿ-1 ಎಂಬಂತೆ
ರೋಗ ಬಾಧಿಸಿದೆ.
ಕೇರಳದಲ್ಲಿ 9347 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಭಾನುವಾರ 9347 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 25 ಮಂದಿ ಸಾವು ದೃಢೀಕರಿಸಲಾಗಿದ್ದು, ಒಟ್ಟು ಸತ್ತವರ ಸಂಖ್ಯೆ 1003 ಕ್ಕೇರಿತು. ರೋಗ ಬಾಧಿತರಲ್ಲಿ 46 ಮಂದಿ ವಿದೇಶದಿಂದ ಹಾಗು 155 ಮಂದಿ ಇತರ ರಾಜ್ಯದಿಂದ ಬಂದವರು. 8216 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 821 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 105 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಹಾಗು 4 ಮಂದಿ ಐಎನ್‍ಎಚ್‍ಎಸ್ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ. 8924 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರು : ಮಲಪ್ಪುರಂ-1451, ಎರ್ನಾಕುಳಂ-1228, ಕಲ್ಲಿಕೋಟೆ-1219, ತೃಶ್ಶೂರು-960, ತಿರುವನಂತಪುರ-797, ಕೊಲ್ಲಂ-712, ಪಾಲ್ಘಾಟ್-640, ಆಲಪ್ಪುಳ-619, ಕೋಟ್ಟಯಂ-417, ಕಣ್ಣೂರು-413, ಪತ್ತನಂತಿಟ್ಟ-378, ಕಾಸರಗೋಡು-242, ವಯನಾಡು-148, ಇಡುಕ್ಕಿ-123 ಎಂಬಂತೆ ರೋಗ ಬಾಧಿಸಿದೆ.
ಗುಣಮುಖ : ತಿರುವನಂತಪುರ-1200, ಕೊಲ್ಲಂ-1421, ಪತ್ತನಂತಿಟ್ಟ-240, ಆಲಪ್ಪುಳ-729, ಕೋಟ್ಟಯಂ-161, ಇಡುಕ್ಕಿ-50, ಎರ್ನಾಕುಳಂ-1036, ತೃಶ್ಶೂರು-580, ಪಾಲ್ಘಾಟ್-546, ಮಲಪ್ಪುರಂ-1059, ಕಲ್ಲಿಕೋಟೆ-954, ವಯನಾಡು-96, ಕಣ್ಣೂರು-347, ಕಾಸರಗೋಡು-505 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 96,316 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,91,798 ಮಂದಿ ಗುಣಮುಖರಾಗಿದ್ದಾರೆ.