ನವದೆಹಲಿ: ಬಾಲಿವುಡ್ ನಟಿ ಕಂಗಾನ ರನೌಟ್ ಅವರ ಪ್ರತಿಕ್ರಿಯೆಗಾಗಿ ವಿಮಾನದೊಳಗೆ ಪ್ರವೇಶಿಸಿದ್ದ 9 ಜನ ಮಾಧ್ಯಮ ಪ್ರತಿನಿಧಿಗಳಿಗೆ ಇಂಡಿಗೊ ವಿಮಾನಯಾನ ಸಂಸ್ಥೆ 2 ವಾರ ನಿಷೇಧ ಹೇರಿದೆ.
ಕಳೆದ ಸೆಪ್ಟೆಂಬರ್ 9ರಂದು ನಟಿ ಕಂಗಾನ ಚಂಡೀಗಢದಿಂದ ಮುಂಬೈಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೆಲ ಪತ್ರಕರ್ತರು ಕ್ಯಾಮೆರಾಮೆನ್‌ಗಳ ಜೊತೆ ವಿಮಾನದಲ್ಲಿ ಅವರ ಪ್ರತಿಕ್ರಿಯೆಗಾಗಿ ದುಂಬಾಲು ಬಿದಿದ್ದರು. ಈ ಘಟನೆ ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದು ಡಿಜಿಸಿಎ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಇಂಡಿಗೊ ವಿಮಾನಯಾನ ಸಂಸ್ಥೆಗೆ ನೋಟಿಸ್ ನೀಡಿತ್ತು.
ವಿಮಾನದೊಳಗೆ ಚಿತ್ರ ಮತ್ತು ವಿಡಿಯೊ ಮಾಡುವುದು ಕಾನೂನು ಬಾಹಿರವಾಗಿದೆ. ಹಾಗೇ ಪತ್ರಕರ್ತರು ಅನುಮತಿ ಇಲ್ಲದೆ ವಿಮಾನದೊಳಗೆ ಪ್ರವೇಶ ಪಡೆದಿದ್ದು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಂಡಿಗೊ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಸೂಚನೆ ನೀಡಿತ್ತು.
ಡಿಜಿಸಿಎ ನಿರ್ದೇಶನದ ಅನ್ವಯ 9 ಜನ ಪತ್ರಕರ್ತರಿಗೆ ವಿಮಾನ ಪ್ರಯಾಣದಿಂದ 2 ವಾರ ನಿಷೇಧ ಹೇರಲಾಗಿದೆ ಎಂದು ಇಂಡಿಗೊ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.