HEALTH TIPS

ನೀರ್ಚಾಲು ಪೂರ್ತಿ ಕ್ಯಾಮರಾ ಕಣ್ಗಾವಲಲ್ಲಿ- ಅತ್ಯಾಧುನಿಕ ಸಿದ್ದತೆಯ ಸಿಸಿ ಕ್ಯಾಮರಾ ಇಂದು ಉದ್ಘಾಟನೆ

  

      ಬದಿಯಡ್ಕ: ಬದಿಯಡ್ಕ ಗ್ರಾ.ಪಂ.ವ್ಯಾಪ್ತಿಯ ಅತಿ ವೇಗದ ಬೆಳವಣಿಗೆ ಹೊಂದುವ ಪ್ರದೇಶಗಳಲ್ಲಿ ಒಂದಾದ ನೀರ್ಚಾಲು ಪೇಟೆ ಇನ್ನು ಸಂಪೂರ್ಣ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಇರಲಿದೆ. ಕಳೆದ ಕೆಲವು ತಿಂಗಳುಗಳಿಂದ ಕಾರ್ಯವೆಸಗುತ್ತಿರುವ ಸಿಸಿ ಕ್ಯಾಮರಾ ವ್ಯವಸ್ಥೆಯ ಅಧಿಕೃತ ಉದ್ಘಾಟನೆ ಇಂದು(ಅ.1)ಅಪರಾಹ್ನ 3 ಕ್ಕೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಸ್ಕೂಲು ವಠಾರದಲ್ಲಿ ನಡೆಯಲಿದೆ.

      ನೀರ್ಚಾಲು ವಿಷ್ಣುಮೂರ್ತಿ ನಗರ ಪ್ರದೇಶದಿಂದ ಕನ್ನೆಪ್ಪಾಡಿಯ ವರೆಗಿನ ಬಹು ವಿಸ್ತಾರದ ಪ್ರದೇಶಗಳ ದೈನಂದಿನ ವಿದ್ಯಮಾನಗಳ ಸಂಪೂರ್ಣ ಅವಲೋಕನ ಇದೀಗ ಪೂರ್ಣ ಡಿಜಿಟಲೀಕೃತ ಅತ್ಯಾಧುನಿಕ ಸೌಕರ್ಯದ ಸಿಸಿ ಕ್ಯಾಮರಾ ಮೂಲಕ ನಿರೀಕ್ಷಣೆಗೊಳಪಡಲಿದೆ. ಶಾಲೆ, ಕಾಲೇಜು, ಬ್ಯಾಂಕ್ ಗಳು, ಅಕ್ಷಯ ಕೇಂದ್ರ, ಎರಡು ಗ್ರಾಮ ಕಚೇರಿಗಳು, ಅಂಚೆ ಕಚೇರಿ, ಕ್ಯಾಂಪ್ಕೋ ಕೇಂದ್ರ, ಸಹಕಾರಿ ಬ್ಯಾಂಕ್, ಎಟಿಎಂ ಕೇಂದ್ರ ಸಹಿತ ವಿವಿಧ ವ್ಯಾಪಾರ ಮಳಿಗೆಗಳ, ಮಂದಿರ-ಮಸೀದಿಗಳ ಪ್ರದೇಶವಾದ ನೀರ್ಚಾಲಿನ ಶಾಂತಿ ಸುವ್ಯವಸ್ಥೆ, ನಾಗರಿಕ ಸೊತ್ತಿನ ಸಂರಕ್ಷಣೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.


     ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ನೇತೃತ್ವದಲ್ಲಿ ಸಹಕಾರಿ ಬ್ಯಾಂಕ್ ಸಹಿತ ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಸುಮಾರು 4 ಲಕ್ಷ ರೂ.ಗಳಷ್ಟು ವೆಚ್ಚ ಭರಿಸಿದ ಅತ್ಯಾಧುನಿಕ ವ್ಯವಸ್ಥೆಯ ಕಣ್ಗಾವಲು ವ್ಯವಸ್ಥೆ ಸಾಕಾರಗೊಳ್ಳುವ ಮೂಲಕ ಸಮಾಜ ಘಾತುಕ ಕುಕೃತ್ಯಗಳಿಗೆ ಬ್ರೇಕ್ ಬೀಳಲಿದೆ.

     ಬದಿಯಡ್ಕ ಪೋಲೀಸ್ ಠಾಣೆ ಸಹಿತ ಪ್ರಮುಖ ನಿಯಂತ್ರಣ ಕೊಠಡಿಗಳೊಂದಿಗೆ ನಿಸ್ತಂತು ವ್ಯವಸ್ಥೆಯಡಿ ಕಣ್ಗಾವಲು ನಡೆಯಲಿದ್ದು ಸಜ್ಜನರಿಗೆ ನಿಟ್ಟುಸಿರು ಬಿಡುವಲ್ಲಿ ಸಾಫಲ್ಯಗೊಳ್ಳಲಿದೆ. ಕಳೆದ ಕೆಲವು ತಿಂಗಳಿಂದ ಪರೀಕ್ಷಾರ್ಥ ವೀಕ್ಷಣೆಯಲ್ಲಿರಿಸಲಾಗಿದ್ದ ಈ ವ್ಯವಸ್ಥೆ ವಿಜಯಕರವಾದ ಹಿನ್ನೆಲೆಯಲ್ಲಿ ಇಂದು ಉದ್ಘಾಟನೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಲ್ಪ ದಿನಗಳ ತಡವಾಗಿಯಾದರೂ ಅಧಿಕೃತ ಉದ್ಘಾಟನೆ ಈ ಮೂಲಕ ನಡೆಯಲಿದೆ.

    ಇಂದು ಅಪರಾಹ್ನ ನಡೆಯುವ ಸಮಾರಂಭದಲ್ಲಿ ಬದಿಯಡ್ಕ ಠಾಣಾಧಿಕಾರಿಗಳು, ಜನಪ್ರತಿನಿಧಿಗಳು, ವ್ಯಾಪಾರಿ ನೇತಾರರು, ಸ್ಥಳೀಯ ಮುಖಂಡರು ಭಾಗವಹಿಸುವರೆಂದು ವ್ಯಾಪಾರಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸಮರಸ ಸುದ್ದಿಗೆ ಮಾಹಿತಿ ನೀಡಿರುವರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries