ಉಪ್ಪಳ: ಅಸ್ವಸ್ಥ ಸ್ಥಿತಿಯಲ್ಲಿ ಉಪ್ಪಳ ಬಸ್ ನಿಲ್ದಾಣದಲ್ಲಿ ಕಂಡು ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಶಾಂತಿಗುರಿ ಬಳಿಯ ಪುಳಿಕುತ್ತಿ ಮುನೀರ ಮಂಜಿಲ್‍ನ ಮೊಹಮ್ಮದ್ ಶರೀಫ್(48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಉಪ್ಪಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವಲ್ಲಿ ತೀವ್ರ ಅಸ್ವಸ್ಥ ರೀತಿಯಲ್ಲಿ ಕಂಡು ಬಂದಿದ್ದು, ಸ್ಥಳಿಯರು ಉಪ್ಪಳ ಕಂಟ್ರೋಲ್ ರೂಮ್ ಪೆÇೀಲೀಸರಿಗೆ ತಿಳಿಸಿದ್ದರು. ಬಳಿಕ ಮಂಜೇಶ್ವರ ಪೆÇಲೀಸರು ನೀಡಿದ ಮಾಹಿತಿಯಂತೆ ಮಂಗಲ್ಪಾಡಿ ಸೇವಾ ಭಾರತಿ ಆಂಬ್ಯುಲೆನ್ಸ್ ನಲ್ಲಿ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನಹೊಂದಿದರು.