ತಿರುವನಂತಪುರ: ಏಷ್ಯಾನೆಟ್ ನ್ಯೂಸ್ ಚರ್ಚೆಗಳಿಂದ ದೂರವಿರಲು ನಿರ್ಧರಿಸಿದ್ದ ಸಿಪಿಎಂ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಪಕ್ಷದ ರಾಜ್ಯ ಕಾರ್ಯದರ್ಶಿ ಮಟ್ಟದ ಸಭೆಯ ಬಳಿಕ ನಿನ್ನೆ ಈ ವಿಷಯವನ್ನು ಸ್ಪಷ್ಟಪಡಿಸಿದರು.
ಏಷ್ಯಾನೆಟ್ ನ್ಯೂಸ್ ಮಾತುಕತೆಯಲ್ಲಿ ಮುಂದೆ ಸಿಪಿಎಂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪಕ್ಷ ಮಾಧ್ಯಮಗಳಿಗೆ ವಿರೋಧಿಯಲ್ಲ ಮತ್ತು ಮುಕ್ತ ಚರ್ಚೆಗೆ ಸಿದ್ಧ ಎಂದು ಹೇಳಿದರು.
ಚಾನೆಲ್ ಬಹಿಷ್ಕಾರವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಚಾನೆಲ್ ಪ್ರತಿನಿಧಿಯೊಬ್ಬರು ಎಕೆಜಿ ಕೇಂದ್ರಕ್ಕೆ ತೆರಳಿ ಸಿಪಿಎಂ ರಾಜ್ಯ ಕಾರ್ಯದರ್ಶಿಯನ್ನು ಭೇಟಿಯಾದರು ಎಂದು ಊಹಾಪೋಪಗಳಿದ್ದು ಚರ್ಚೆಗಳಲ್ಲಿ ಮಾತನಾಡಲು ಸಾಕಷ್ಟು ಸಮಯವನ್ನು ನೀಡಬೇಕೆಂದು ಬೇಡಿಕೆ ಇರಿಸಿರುವುದಾಗಿ ತಿಳಿದುಬಂದಿದೆ. ಏಕಪಕ್ಷೀಯ ಮಾತುಕತೆ ನಡೆಸಬಾರದು ಎಂಬ ಭರವಸೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಿಪಿಎಂ ಪ್ರತಿನಿಧಿಗಳಿಗೆ ಮಾತನಾಡಲು ಸಾಕಷ್ಟು ಸಮಯ ನೀಡುತ್ತಿಲ್ಲ ಎಂದು ಆರೋಪಿಸಿ ಏಷ್ಯಾನೆಟ್ ನ್ನು ಬಹಿಷ್ಕರಿಸಲು ಸಿಪಿಎಂ ಈ ಹಿಂದೆ ನಿರ್ಧರಿಸಿತ್ತು .