HEALTH TIPS

ಅಧೀನ ಕಾರ್ಯದರ್ಶಿ, ಅದಕ್ಕಿಂತ ಉನ್ನತ ಮಟ್ಟದ ಅಧಿಕಾರಿಗಳು ಕೆಲಸದ ದಿನಗಳಲ್ಲಿ ಕಚೇರಿಗೆ ಬರಬೇಕು: ಕೇಂದ್ರ ಸರ್ಕಾರ

        ನವದೆಹಲಿ: ಅಧೀನ ಕಾರ್ಯದರ್ಶಿಗಳು ಮತ್ತು ಅದಕ್ಕಿಂತ ಮೇಲಿನ ರ್ಯಾಂಕಿನ ಅಧಿಕಾರಿಗಳು ಎಲ್ಲಾ ಕೆಲಸದ ದಿನಗಳಲ್ಲಿ ಕಚೇರಿಗೆ ಹಾಜರಾಗಬೇಕು ಎಂದು ಕೇಂದ್ರ ಸರ್ಕಾರಿ ನೌಕರರಿಗೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಿಬ್ಬಂದಿ ಸಚಿವಾಲಯ ಹೇಳಿದೆ.

       ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಹೇರಿಕೆಯಾಗಿ ನಂತರ ನಿಧಾನವಾಗಿ ಲಾಕ್ ಡೌನ್ ಸಡಿಲಿಕೆಯಾದ ನಂತರ ಕೇಂದ್ರ ಸರ್ಕಾರಿ ನೌಕರರು ನಿಧಾನವಾಗಿ ಕಚೇರಿಗಳಿಗೆ ಬರಲು ಆರಂಭಿಸಿದರು. ಉಪ ಕಾರ್ಯದರ್ಶಿ ಮತ್ತು ಅವರಿಗಿಂತ ಮೇಲಿನ ಮಟ್ಟದ ಅಧಿಕಾರಿಗಳಿಗೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

      ಅಧೀನ ಕಾರ್ಯದರ್ಶಿಗಳಿಗಿಂತ ಕೆಳಗಿನ ಮಟ್ಟದ ಸರ್ಕಾರಿ ನೌಕರರಿಗೆ ಶೇಕಡಾ 50ರಷ್ಟು ಹಾಜರಾತಿ ಕಡ್ಡಾಯ ಇರಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ವಿಭಾಗದ ಮುಖ್ಯಸ್ಥರಿಗೆ ಶೇಕಡಾ 50ಕ್ಕಿಂತ ಹೆಚ್ಚು ಹಾಜರಾತಿ ಇರಬೇಕು, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರಿ ನೌಕರರು ಕಚೇರಿಗಳಿಗೆ ಕೆಲಸಕ್ಕೆ ಬರಬೇಕೆಂದು ಸೂಚಿಸಲಾಗಿದೆ ಎಂದು ಮಾರ್ಗಸೂಚಿ ಹೇಳುತ್ತದೆ.

       ಅಧೀನ ಕಾರ್ಯದರ್ಶಿಗಳು ಮತ್ತು ಅದಕ್ಕಿಂತ ಮೇಲಿನ ಮಟ್ಟದ ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಎಲ್ಲಾ ಕೆಲಸದ ದಿನಗಳಲ್ಲಿ ಕಚೇರಿಗಳಿಗೆ ಹಾಜರಾಗಬೇಕಾಗಿದ್ದು ಇದು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

     ಕೋವಿಡ್-19 ಕಂಟೈನ್ ಮೆಂಟ್ ವಲಯಗಳನ್ನು ಕೋವಿಡೇತರ ಪ್ರದೇಶ ಎಂದು ಘೋಷಿಸುವವರೆಗೆ ಆ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಚೇರಿಗಳಿಗೆ ಬರಲು ವಿನಾಯ್ತಿ ನೀಡಲಾಗಿದೆ. ಅಶಕ್ತತೆ ಹೊಂದಿರುವ ನೌಕರರು ಮತ್ತು ಗರ್ಭಿಣಿಯರು ಮುಂದಿನ ಆದೇಶಗಳು ಹೊರಬರುವವರೆಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

      ಕಚೇರಿಗೆ ಬಾರದಿರುವ ನೌಕರರು ಮನೆಯಿಂದಲೇ ಕೆಲಸ ಮಾಡುವಾಗ ದೂರವಾಣಿಯಲ್ಲಿ ಮತ್ತು ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಸಂಪರ್ಕಕ್ಕೆ ಸಿಗಬೇಕು. ಜನದಟ್ಟಣೆ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ತಪ್ಪಿಸಲು ಸರ್ಕಾರಿ ನೌಕರರು ಕೆಲಸದ ಅವಧಿ ಬೆಳಗ್ಗೆ 9ರಿಂದ ಸಾಯಂಕಾಲ 5.30 ಮತ್ತು ಬೆಳಗ್ಗೆ 10ರಿಂದ ಸಾಯಂಕಾಲ 6.30ರ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.

      ಬಯೊಮೆಟ್ರಿಕ್ ಹಾಜರಾತಿ ರದ್ದತಿಯನ್ನು ಇನ್ನು ಕೆಲವು ಸಮಯಗಳವರೆಗೆ ರದ್ದುಮಾಡಿ ಮುಂದಿನ ಆದೇಶ ಬರುವವರೆಗೆ ಮುಖತಃ ಹಾಜರಾತಿ ನಿರ್ವಹಿಸುವಂತೆ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries