ಕಟ್ಟಪ್ಪನ: ಇಡುಕಿಯಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿ ಬಳಿಕ ಆತ್ಮಹತ್ಯೆಗೆ ಶ್ರಮಿಸಿದ್ದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತ ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ. ಆತ್ಮಹತ್ಯೆಗೆ ಶ್ರಮಿಸಿದ್ದ 17ರ ಹರೆಯದ ದಲಿತ ಸಮುದಾಯದ ಬಾಲಕಿಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶೇ.65 ಪ್ರಮಾಣದ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಟ್ಟಪ್ಪನ ಬಳಿಯ ನರಿಯಂಪಾರದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 24 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು. ಬಾಲಕಿಯನ್ನು ಕಟ್ಟಪ್ಪನ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ದು ದಾಖಲಿಸಲಾಗಿತ್ತು.
ಡಿ.ವೈ.ಎಫ್.ಐ ಕಾರ್ಯಕರ್ತ ಮತ್ತು ಆಟೋ ಚಾಲಕ ಮನು (ಮನೋಜ್) ಬಾಲಕಿಯನ್ನು ಕಿರುಕುಳ ನೀಡಿ ಲೈಂಗಿಕವಾಗಿ ಬಳಸಲು ಯತ್ನಿಸಿದ್ದು ಇದರಿಂದ ಮನನೊಂದು ಅ.24ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಬಾಲಕಿಯ ಕುಟುಂಬ ಕಿರುಕುಳದ ಬಗ್ಗೆ ಅ.22 ರಂದು ಕಟ್ಟಪ್ಪನ ಪೆÇಲೀಸರಿಗೆ ದೂರು ನೀಡಿತ್ತು.