ಮುಳ್ಳೇರಿಯ: ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸೇವೆಗೈದ ಕಾಂಞಂಗಾಡ್ ಕಾರುಣ್ಯ ಫಾರ್ಮಸಿಯ ಸಿಬ್ಬಂದಿ, ಕೇರಳ ಪ್ರೈವೇಟ್ ಫಾರ್ಮಸಿಸ್ಟ್ ಅಸೋಸಿಯೇಶನ್ ಕಾಂಞಂಗಾಡ್ ಏರಿಯಾ ಕಾರ್ಯದರ್ಶಿಯಾಗಿರುವ ರಮ್ಯಾ ಶಶೀಂದ್ರನ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಟೈಪ್ ವನ್ ಡಯಾಬಿಟಿಕ್ ವೆಲ್ಪೇರ್ ಸೊಸೈಟಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ. ಬಶೀರ್ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನೋವಾ ಪಾಲಿಯೇಟಿವ್ ಚಾರಿಟೇಬಲ್ ಟ್ರಸ್ಟ್ ಚೆಯರ್‍ಮೇನ್ ಟಿ.ಕೆ.ಸಿ.ಅಬ್ದುಲ್ ಖಾದರ್ ಹಾಜಿ, ಟೈಪ್ ವನ್ ಡಯಾಬಿಟಿಕ್ ವೆಲ್ಪೇರ್ ಸೊಸೈಟಿ ಕೋ-ಆರ್ಡಿನೇಟರ್ ಎಂ.ಸಿ.ಅಬ್ದುಲ್ ಜಲೀಲ್ ರೌಫ್, ವಿ.ಕೆ.ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೆ.ವಿ.ಲತಿಕಾ, ಎಂ.ರಸ್ನಾ ಅವರ ಸೇವೆಯನ್ನು ಸ್ಮರಿಸಲಾಯಿತು.