ಕಾಸರಗೋಡು: ಗಂಭೀರ ಸ್ಥಿತಿಯ ಕೋವಿಡ್ ರೋಗಿಗಳಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೋವಿಡ್ ರೋಗ ಬಾಧೆಗೊಳಗಾಗಿ, ನಂತರ ರೋಗದಿಂದ ಗುಣಮುಖರಾಗಿದ್ದು, 28 ದಿನಗಳು ಕಳೆದವರು, ಮೂರು ತಿಂಗಳ ಕಳೆಯದೇ ಇದ್ದವರೂ ಆಗಿರುವ ಮಂದಿಯಿಂದ ರಕ್ತ ಸಂಗ್ರಹಿಸಿ ಪ್ಲಾಸಸ್ಮಾ ಚಿಕತ್ಸೆಗೆ ಬೇಕಾದ ಪ್ಲಾಸ್ಮಾ ವಿಂಗಡಿಸಲಾಗುವುದು. ಸಾಧಾರಣ ಗತಿಯ ರಕ್ತದಾನದ ಕ್ರಮದಲ್ಲೇ ರಕ್ತ ವಿಂಗಡಿಸಲಾಗುವುದು. 18ರಿಂದ 55 ವರ್ಷದ ಮಧ್ಯದ ವಯೋಮಾನದ ಮಂದಿಯಿಂದ ಮಾತ್ರ ರಕ್ತ ಸಂಗ್ರಹಿಸಲಾಗುವುದು. ಈ ರೀತಿ ರಕ್ತದಾನ ನಡೆಸಲು ಸಿದ್ಧರಿರುವ ಕೋವಿಡ್ ರೋಗಮುಕ್ತರು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕನ್ನು ಸಂಪರ್ಕಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಮಾಹಿತಿಗೆ ದೂರವಾಣಿ ಸಂಖ್ಯೆ: 0467 2204333.