ಕಾಸರಗೋಡು: ಭಾನುವಾರ ನಿಧನರಾದ ಕರ್ನಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಅನಂತಕೃಷ್ಣ ಅವರ ನಿಧನಕ್ಕೆ ಶ್ರೀಮದೆಡನೀರು ಮಠದಿಂದ ತೀವ್ರಸಂತಾಪ ವ್ಯಕ್ತಪಡಿಸಲಾಗಿದೆ.
ಎಡನೀರು ಮಠದೊಂದಿಗೆ ಅತ್ಯಂತ ನಿಕಟವರ್ತಿಗಳಾಗಿದ್ದ ಅನಂತಕೃಷ್ಣ ಅವರು ಬ್ರಹ್ಮೈಕ್ಯರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರೀತಿಪಾತ್ರರಾದ ವ್ಯಕ್ತಿಯಾಗಿದ್ದರು. ಸದಾ ಮಠದೊಂದಿಗೆ ಸಂಪರ್ಕದಲ್ಲಿರುತ್ತಿದ್ದ ಅವರು ಮಠದ ಶ್ರೇಯೋಭಿವೃದ್ದಿಗೆ ಬೆನ್ನೆಲುಬಾಗಿದ್ದರು. ಸರಳ ವ್ಯಕ್ತಿತ್ವದ ಅನಂತಕೃಷ್ಣರ ನಿಧನ ಕರಾವಳಿಕೆ ತುಂಬಲಾರದ ನಷ್ಟ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.