ಕಾಸರಗೋಡು: ಜೊೈಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ (ಜೆಎನ್‍ಎ) ಪರೀಕ್ಷೆಯಲ್ಲಿ ಕೇರಳ ರಾಜ್ಯದಲ್ಲಿ ಪ್ರಥಮ ರ್ಯಾಂಕ್ ಪಡೆದ ಕಾಸರಗೋಡು ಬೆಂಡಿಚ್ಚಾಲ್‍ನ ಇಬ್ರಾಹಿಂ ಸುಫೈಲ್ ಹಾರಿಸ್ ಅವರನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಿ ಗೌರವಿಸಿದರು.
ರಾಷ್ಟ್ರ ಮಟ್ಟದಲ್ಲಿ 210 ರ್ಯಾಂಕ್ ಪಡೆದಿದ್ದಾರೆ. ಈ ಹಿಂದೆ ಕಿಂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದಿದ್ದರು. ಸಿಬಿಎಸ್‍ಇ ಸಿಲೆಬಸ್‍ನಲ್ಲಿ ಪ್ಲಸ್ ಟು ಸಯನ್ಸ್ ವಿಭಾಗದಲ್ಲಿ ಶೇ.98 ಅಂಕ ಪಡೆದಿದ್ದರು.
ಕಾರ್ಯಕ್ರಮದಲ್ಲಿ ಯೂತ್ ಲೀಗ್ ಅಧ್ಯಕ್ಷ ಅಶ್ರಫ್ ಎಡನೀರು, ಪ್ರಧಾನ ಕಾರ್ಯದರ್ಶಿ ಟಿ.ಡಿ.ಕಬೀರ್, ಎಂ.ಎಸ್.ಎಫ್. ಜಿಲ್ಲಾ ಅಧ್ಯಕ್ಷ ಅನಸ್, ಗ್ರಾಮ ಪಂಚಾಯತ್ ಸದಸ್ಯ ಕಲಾಭವನ್ ರಾಜು, ಅಹಮ್ಮದಲಿ ಬೆಂಡಿಚಾಲ್ ಮೊದಲಾದವರಿದ್ದರು.