ಕಾಸರಗೋಡು: ಕೋವಿಡ್ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ 'ಮಾಶ್ ಯೋಜನೆ'ಯನ್ವಯ ಕರ್ತವ್ಯ ನಿರ್ವಹಣೆ ಸಂದರ್ಭ ಕೋವಿಡ್‍ಬಾಧಿಸಿ ಮೃತಪಟ್ಟ ಮುಕಾರಿಕಂಡ ನಿವಾಸಿ, ಸೂರಂಬೈಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಂ.ಪದ್ಮನಾಭ(45)ಅವರ ಸಾವಿನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಾಸಕ ಎನ್.ಎ ನೆಲ್ಲಿಕುನ್ನು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮುಂಜಾಗ್ರತೆಯ ಕೊರತೆಯಿಂದ ಶಿಕ್ಷಕರ ಸಾವು ಸಂಭವಿಸಿದೆ. ಕರ್ತವ್ಯದ ಮಧ್ಯೆ ಕೋವಿಡ್ ಬಾಧಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ, ರೋಗಿ ಬಗ್ಗೆ ನಿಗಾವಹಿಸದಿರುವುದರಿಂದ ರೋಗ ಉಲ್ಬಣಿಸಿದೆ. ಉನ್ನತ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಮಾಡಿಕೊಂಡ ಮನವಿಯನ್ನೂ ಕಿವಿಗೆ ಹಚ್ಚಿಕೊಳ್ಳದೆ ರೋಗಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಸಂಬಂಧಪಟ್ಟವರು ಕ್ರೂರತನ ಪ್ರದರ್ಶಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಇವರನ್ನು ಮಂಜೇಶ್ವರ ಗೋವಿಂದಪೈ ಸ್ಮಾರಕ ಕಾಲೇಜಿನಲ್ಲಿ ಕಾರ್ಯಾಚರಿಸುವ ಕೋವಿಡ್ ಸೆಂಟರ್‍ಗೆ ದಾಖಲಿಸಲಾಗಿತ್ತು.