HEALTH TIPS

ತೀವ್ರ ಕಳವಳದತ್ತ ಕೇರಳ; ಅಕ್ಟೋಬರ್ ಅಂತ್ಯದ ವೇಳೆಗೆ ತೀವ್ರ ಏರುಗತಿಯ ಸೂಚನೆ-ಆರೋಗ್ಯ ಇಲಾಖೆ ಎಚ್ಚರಿಕೆ


      ತಿರುವನಂತಪುರ: ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರ ನಿಯಂತ್ರಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ ಎಂದು ತಿಳಿದುಬಂದಿದೆ. ಶನಿವಾರ ಮಾತ್ರ ರಾಜ್ಯದಲ್ಲಿ 7,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಕಳೆದ ಕೆಲವು ದಿನಗಳಲ್ಲಿ ರಾಜ್ಯದಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಏತನ್ಮಧ್ಯೆ, ಕೇರಳ ರೋಗ ಹರಡುವ ಹಾದಿಯಲ್ಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ನಿಷೇಧದ ಅನುಷ್ಠಾನದೊಂದಿಗೆ ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ಕಡಿಮೆ ಮಾಡಬಹುದು ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯ ವ್ಯಕ್ತಪಡಿಸಿದೆ.

           ಆರೋಗ್ಯ ಇಲಾಖೆ ನಿಷೇಧದ ನಿರೀಕ್ಷೆಯಲ್ಲಿ:

     ಅಕ್ಟೋಬರ್ 3 ರಿಂದ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಐದು ಜನರಿಗಿಂತ ಹೆಚ್ಚು ಜನರು ಸೇರಬಾರದು ಎಂದು ಷರತ್ತು ವಿಧಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ರೋಗ ಹರಡುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ಇಲಾಖೆ ಆಶಿಸಿದೆ. ಆದರೆ, ರಾಜ್ಯದಲ್ಲಿ ರೋಗ ಹರಡುವಿಕೆ ಹೆಚ್ಚುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

           ಅಕ್ಟೋಬರ್ ಅಂತ್ಯದ ವೇಳೆಗೆ ಕೋವಿಡ್ ಮತ್ತೆ ಏರಿಕೆ:

   ಅಕ್ಟೋಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣವು ಒಂದೂವರೆ ಶೇಕಡಾಕ್ಕಿಂತ ಕಡಿಮೆಯಿದ್ದರೆ, ಈಗ ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ಪರೀಕ್ಷಾ ಸಕಾರಾತ್ಮಕತೆ ದರ 14.35 ಶೇ. ಆಗಿದೆ. ಸಂಪರ್ಕದ ಮೂಲಕ ರೋಗ ಹರಡುವುದು ಮತ್ತು ಮೂಲವು ತಿಳಿದಿಲ್ಲದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವರದಿಗಳು ಸಂಕಷ್ಟಕ್ಕೀಡುಮಾಡುತ್ತಿದೆ. 

          ನಿಷೇಧ ಉಲ್ಲಂಘನೆ-11 ಜನರ ಬಂಧನ: 

    ನಿಯಂತ್ರಣ ಕಾಯ್ದೆಯನ್ವಯ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ರಾಜ್ಯದಲ್ಲಿ ಶನಿವಾರ 11 ಜನರನ್ನು ಬಂಧಿಸಲಾಗಿದೆ. 25 ಪ್ರಕರಣಗಳು ದಾಖಲಾಗಿವೆ. ಭಾನುವಾರ ಸಾರ್ವಜನಿಕ ರಜಾದಿನವಾಗಿದ್ದರಿಂದ ಬೀದಿಗಳಲ್ಲಿ ಜನಸಂದಣಿ ಮಂದವಾಗಿತ್ತು. ಆದರೆ, ಕಚೇರಿಗಳು ಮತ್ತು ಸಂಸ್ಥೆಗಳು ಸೋಮವಾರ ತೆರೆದು ಕಾರ್ಯಾಚರಿಸುವುದರಿಂದ ದಟ್ಟಣೆ ಹೆಚ್ಚಾಗುತ್ತದೆ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೊಳಿಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.

           ನಿಯಮಗಳನ್ನು ಪಾಲಿಸದಿದ್ದರೆ ಪರಿಸ್ಥಿತಿ ಭೀಕರ:

   ರಾಜ್ಯದಲ್ಲಿ ನಿಷೇಧ ಹೇರಿದಾಗಿನಿಂದ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಐದು ಕ್ಕೂ ಹೆಚ್ಚು ಜನರ ಗುಂಪನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಈ ತಡೆಗಟ್ಟುವ ಕ್ರಮಗಳನ್ನು ಸಮನ್ವಯಗೊಳಿಸದಿದ್ದರೆ ಕೇರಳದ ಪರಿಸ್ಥಿತಿ ಹದಗೆಡುವುದೆಂದು ವಿಶ್ಲೇಶಿಸಲಾಶಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries