ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನ ತಪ್ಪಿಸಲು ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಜಾಮೀನು ಕೋರಿದ್ದಾರೆ. ಇಡಿ ಬಂಧಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಶಿವಶಂಕರ್ ಹೈಕೋರ್ಟ್ ಸಂಪರ್ಕಿಸಿದ್ದರು ಎಂದು ವರದಿಯಾಗಿದೆ. ಎಂ.ಶಿವಶಂಕರ್ ವಿರುದ್ಧ ಮಂಗಳವಾರ ಇಡಿ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಇಡಿ ಉದ್ದೇಶಪೂರ್ವಕವಾಗಿ ತನ್ನನ್ನು ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಎಂ.ಶಿವಶಂಕರ್ ಆರೋಪಿಸಿದ್ದಾರೆ. ಎಂ.ಶಿವಶಂಕರ್ ಅವರ ವಾಟ್ಸಾಪ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅವರೊಂದಿಗಿನ ಸಂಭಾಷಣೆಯನ್ನು ಸಾಕ್ಷಿಯಾಗಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆದರೆ ಚಿನ್ನ ಕಳ್ಳಸಾಗಣೆಗೆ ಆ ಸಾಕ್ಷಿಗಳಿಂದ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಎಂ.ಶಿವಶಂಕರ್ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಯುಎಇ ಕಾನ್ಸುಲೇಟ್ ಜೊತೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಅವರು ಸ್ವಪ್ನಾ ಸುರೇಶ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಿರುವರು. ಬಳಿಕ ಸ್ವಪ್ನಾ ಸುರೇಶ್ ಅವರೊಂದಿಗೆ ಆಪ್ತರಾದರು ಮತ್ತು ಪರಸ್ಪರ ಉಡುಗೊರೆಗಳನ್ನು ನೀಡಿದರು ಎಂದು ಶಿವಶಂಕರ್ ಹೇಳಿದರು.
ಯುಎಇ ಅಧಿಕಾರಿಗಳು ಹಣವನ್ನು ಸ್ವಪ್ನಾಗೆ ಹಸ್ತಾಂತರಿಸಲು ಇಟ್ಟಿದ್ದ ಹಣವನ್ನು ಲಾಕರ್ ನಲ್ಲಿ ಇರಿಸಲು ಸಹಾಯವನ್ನು ಕೋರಿದ್ದರು. ಆದರೆ ಈ ಘಟನೆಯನ್ನು ಚಿನ್ನದ ಕಳ್ಳಸಾಗಣೆಗೆ ಜೋಡಿಸಲು ಇಡಿ ಪ್ರಯತ್ನಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನನ್ನು 30 ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಶ್ನಿಸಿದೆ ಎಂದು ಶಿವಶಂಕರ್ ಹೇಳಿದ್ದಾರೆ.
ಆದರೆ, ಎಂ.ಶಿವಶಂಕರ್ ಅವರು ಕೊಚ್ಚಿಯ ಇಡಿ ಕಚೇರಿಗೆ ಹಾಜರಾಗಲು ಸೂಚನೆ ನಿಡಿದ್ದರೂ ಈವರೆಗೆ ಆಗಮಿಸಿಲ್ಲ ಎಂದು ವರದಿಯಾಗಿದೆ.