ಕಾಸರಗೋಡು: ಕಾಸರಗೊಡು ಜಿಲ್ಲೆಯ ಗಡಿ ಚೆಕ್ ಪೆÇೀಸ್ಟ್ ಗಳಲ್ಲಿ ಕೋವಿಡ್ ತಪಾಸಣೆ ಪುನರಾರಂಭಿಸಲು ನಿರ್ಧರಿಸಿರುವ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯ ತೀರ್ಮಾನ ಪ್ರಸ್ತುತ ಚಾಲ್ತಿಗೆ ಬಂದಿಲ್ಲ ಎಮದು ತಿಳಿದುಬಂದಿದೆ.
ಗುರುವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿ ನಡೆಸಿದ್ದ ಚರ್ಚೆಯಲ್ಲಿ ಇಂತಹದೊಂದು ಗೊಂದಲಕರ ಆದೇಶ ಹೊರಬಿದ್ದಿತ್ತು.
ರಾಜ್ಯ ಹೈಕೋರ್ಟ್ ತೀರ್ಪಿನ ಪ್ರಕಾರ ಕೋವಿಡ್ ನಿರ್ಮೂಲನ ಉದ್ದೇಶದ ತಪಾಸಣೆ ಈ ವೇಳೆ ನಡೆಯಲಿದೆ ಎನ್ನಲಾಗಿತ್ತು. ಆದರೆ ಗಡಿ ಪ್ರದೇಶದಲ್ಲಿ ಯಾರಿಗೂ ತಡೆಮಾಡ ಕೂಡದು ಎಂದು ಪ್ರತ್ಯೇಕವಾಗಿ ಮುಖ್ಯಮಂತ್ರಿಗಳೇ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಬ್ಯಾರಿಕ್ಯಾಡ್ ಸ್ಥಾಪಿಸಿ ಸಂಚಾರವನ್ನೂ ಮೊಟಕುಗೊಳಿಸುವುದಿಲ್ಲ. ಈ ಸಂಬಂಧ ಪ್ರತ್ಯೇಕ ಪಾಸ್ ವ್ಯವಸ್ಥೆಯನ್ನೂ ಏರ್ಪಡಿಸುವುದಿಲ್ಲ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಆಗಮಿಸುವವರು ಕೋವಿಡ್ 19 ಜಾಗ್ರತಾ ವೆಬ್ ಪೆÇರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ನಡೆಸಬೇಕು ಎಂದು ಸೂಚಿಸಲಾಗಿತ್ತು.
ಆದರೆ ಈ ಬಳಿಕ ಅನೇಕರು ಪೋರ್ಟರ್ ಮೂಲಕ ನೋಂದಣಿಗೆ ಪ್ರಯತ್ನಿಸಿದ್ದು ಪೋರ್ಟರ್ ತೆರೆದುಕೊಳ್ಳದ್ದರಿಂದ ಗೊಂದಲಗೊಳಗಾದರು. ಈ ಬಗ್ಗೆ ತಪಾಸಣಾ ಕೇಂದ್ರಗಳಲ್ಲಿ ವಿಚಾರಿಸಿದಾಗ ಈವರೆಗೆ ಅಂತಹದೊಂದು ಆದೇಶ ಬಂದಿಲ್ಲ ಎಂದು ಶುಕ್ರವಾರ ಸಂಜೆ ತಿಳಿಸಿದ್ದಾರೆ.
ಗಾಬರಿಬೇಡ:
ಕರ್ನಾಟಕದಿಂದ ಆಗಮಿಸುವ ಪ್ರಯಾಣಿಕರು ಗಡಿಯ ಮೂಲಕ ಕಾಸರಗೋಡಿಗೆ ಬರುವ ತಪಾಸಣಾ ಕೇಂದ್ರದಲ್ಲಿ ಈ ಬಗ್ಗೆ ವಿಚಾರಿಸಿ ಆಗಮಿಸಿದರ ಸಾಕಾಗುತ್ತದೆ. ಹೊದ ಆದೇಶ ಜಾರಿಗೊಳ್ಳಲು ಕೆಲವು ದಿನ ಬೇಕಾಗಬಹುದೆಂದು ಅಂದಾಜಿಸಲಾಗಿದ್ದು ಪ್ರಸ್ತುತ ಆಗಮಿಸುವ ಜನರು ಯಾವುದೇ ಗೊಂದಲಗಳಿಲ್ಲದೆ ಬರಬಹುದೆಂದು ತಿಳಿಸಲಾಗಿದೆ.