HEALTH TIPS

ರಾಜ್ಯ ಮತ್ತೆ ಪ್ರವಾಸಿಗರ ಸ್ವರ್ಗವಾಗಲಿದೆ: ಮುಖ್ಯಮಂತ್ರಿ-ಬೇಕಲದಲ್ಲಿ ಉದ್ಘಾಟನೆಗೊಂಡ ಸ್ವಾಗತ ಕಮಾನು

 

         ಕಾಸರಗೋಡು: ಕೋವಿಡ್ ಮುಗ್ಗಟ್ಟು ಪರಿಣಾಮ ಸಂದಿಗ್ಧತೆಯಲ್ಲಿದ್ದ ಪ್ರವಾಸೋಸ್ಯಮ ವಲಯ ಮತ್ತೆ ಚಿಗುರಿಕೊಂಡಿದ್ದು, ರಾಜ್ಯ ಮತ್ತೆ ಪ್ರವಾಸಿಗರ ಸ್ವರ್ಗವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟರು. 

          ರಾಜ್ಯದ 14 ಜಿಲ್ಲೆಗಳಲ್ಲಿ ಪೂರ್ಣಗೊಂಡಿರುವ ಪ್ರವಾಸೋದ್ಯಮ ವಲಯದ 26 ಯೋಜನೆಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 

      ನಮ್ಮ ಪ್ರವಾಸೋದ್ಯಮ ವಲಯ ಬೃಹತ್ ಸಾಧನೆ ನಡೆಸುತ್ತಿರುವ ಸಂದರ್ಭದಲ್ಲೇ ಕೋವಿಡ್ ಸೋಂಕಿನ ಹಾವಳಿ ತಲೆದೋರಿತ್ತು. 25 ಸಾವಿರ ಕೋಟಿ ರೂ.ನ ನಷ್ಟ ಸಂಭವಿಸಿದೆ. ಜೊತೆಗೆ ದೊಡ್ಡ ಪ್ರಮಾಣದ ಉದ್ಯೋಗ ನಷ್ಟವೂ ನಡೆದಿದೆ. ಆದರೂ ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಪ್ರವಾಸಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರಕಾರ ಸಿದ್ಧವಾಗಿದೆ. ಕೋವಿಡ್ ಅವಧಿಯಿಂದ ಪುನಶ್ಚೇತನ ಕಂಡುಕೊಂಡು, ಪ್ರವಾಸೋದ್ಯಮ ವಲಯದಲ್ಲಿ ಬೃಹತ್ ಸಾಧನೆ ನಡೆಸುವುದು ನಿಸ್ಸಂದೇಹ. ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮಗಳಲ್ಲಿ ಅಳವಡಿಸಿ 26 ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಎಂದವರು ನುಡಿದರು. 

       ಬೇಕಲ ಕೋಟೆಯ ಪ್ರವೇಶ ಗೋಪುರ ಮತ್ತು ಕಾಲ್ನಡಿಗೆ ಹಾದಿಯ ಸೌಂದರ್ಯೀಕರಣ ಕಾರ್ಯಕ್ರಮ ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧಗೊಳ್ಳುತ್ತಿದೆ. ಬೇಕಲಕ್ಕೆ ಆಗಮಿಸುವ ಪ್ರವಾಸಿಗರು ಮತ್ತು ಇತಿಹಾಸ ಸಮಶೋಧಕರಿಗೆ ಸ್ವಾಗತ ನೀಡುವ ಕಮಾನಗಳು ಕೋಟೆಯ ಸೌಂದರ್ಯವನ್ನು  ದ್ವಿಗುಣಿಗೊಳಿಸಲಿವೆ. ದೇವರ ಸ್ವಂತ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯಕ್ಕೆ ಹೆಚ್ಚುವರಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಪೂರಕವಾಗಲುವೆ. ವಾಯು, ಜಲ, ಮಣ್ಣು, ನೀರು , ಜೀವರಾಶಿಗಳು ಇವೆಲ್ಲವೂ ಒಂದು ನಾಡಿನ ಸಾರ್ವಜನಿಕ ಸೊತ್ತಾಗಿವೆ. ರಾಜ್ಯದ ಸಾರ್ವಜನಿಕ ಸೊತ್ತುಗಳನ್ನು ಪ್ರವಾಸೋದ್ಯಮ ವಲಯದ ಆಕರ್ಷಣೆಯ ಕೇಂದ್ರಗಳಾಗಿಸಿ ಬದಲಿಸಲಾಗಿದೆ. ಪ್ರಕೃತಿಗೆ ಧಕ್ಕೆಯಾಗದಂತೆ , ಅವನ್ನು ಯಥಾವತ್ತಾಗಿ ಪ್ರವಾಸಿಗರಿಗಾಗಿ ಒದಗಿಸಲು ರಾಜ್ಯಸರಕಾರ ಯತ್ನಿಸಿದೆ ಎಂದವರು ನುಡಿದರು. 

       ಪ್ರವಾಸಿಗರನ್ನು ಸ್ವಾಗತಿಸಲು ತೆರೆದುಕೊಂಡ ಬೇಕಲ ಕೋಟೆಯ ಸ್ವಾಗತ ಕಮಾನ: 

    ಬೇಕಲ ಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಸ್ವಾಗತ ಕಮಾನ ಮತ್ತು ತತ್ಸಮಾನ ಸೌಲಭ್ಯಗಳ ಉದ್ಘಾಟನೆ ಗುರುವಾರ ಜರುಗಿತು. 


    ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಂರಾಯಿ ವಿಜಯನ್ ಅವರು ಉದ್ಘಾಟಿಸಿದರು. ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಇಲಾಖೆ ಕಾರ್ಯುದರ್ಶಿ ರಾಣಿ ಜಾರ್ಜ್ ಪ್ರಧಾನ ಭಾಷಣ ಮಾಡಿದರು. ನಿರ್ದೇಶಕ ಪಿ.ಬಾಲಕಿರಣ್ ವರದಿ ವಾಚಿಸಿದರು.  

       ನಿರ್ಮಾಣ ಫಲಕವನ್ನು ಶಾಸಕ ಕೆ.ಕುಂಞÂ ರಾಮನ್ ಅನಾವರಣಗೊಳಿಸಿದರು. ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ, ಡಿ.ಟಿ.ಪಿ.ಸಿ. ಕಾರ್ಯಕಾರಿ ಸಮಿತಿ ಸದಸಯ ಕೆ.ವಿ.ಕುಂಞÂ ರಾಮನ್, ವಾರ್ಡ್ ಸದಸ್ಯೆ ಎಂ.ಜಿ. ಆಯಿಷಾ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಸ್.ಬೇಬಿ ಷೀಜಾ ಮೊದಲಾದವರು ಉಪಸ್ಥಿತರಿದ್ದರು. ಉದುಮಾ ಶಾಸಕ ಕೆ.ಕುಂಞÂ ರಾಮನ್ ಸ್ವಾಗತಿಸಿ, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries