ಕಾಸರಗೊಡು: ರಾಜ್ಯ ವಸತಿ ನಿರ್ಮಾಣ ಮಂಡಳಿಯು ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸುವ ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ನ ನಿರ್ಮಾಣ ಚಟುವಟಿಕೆಯ ಉದ್ಘಾಟನೆ ಸೋಮವಾರ ಜರುಗಿತು.
ಈ ಸಂದರ್ಭ ಮಾತನಾಡಿದ ಸಚಿವ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಂದ ವರ್ಗಾವಣೆಗೊಂಡು ಕಾಸರಗೋಡು ಜಿಲ್ಲೆಗೆ ಆಗಮಿಸುವ ಮಹಿಳಾ ಸಿಬ್ಬಂದಿ ಅನುಭವಿಸುತ್ತಿರುವ ವಸತಿ ಸೌಲಭ್ಯದ ಸಮಸ್ಯೆಗೆ ಈ ಯೋಜನೆ ಜಾರಿ ಮೂಲಕ ಶಾಶ್ವತ ಪರಿಹಾರವಾಗಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೊದಲಾದವರು ಸೇರಿರುವ ಸಮಿತಿ ಹಾಸ್ಟೆಲ್ ಚಟುವಟಿಕೆಗಳಿಗೆ ನೇತೃತ್ವ ವಹಿಸಬೇಕಿದೆ ಎಂದವರು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತೀ ಸುರೇಶ್, ವಸತಿ ನಿರ್ಮಾಣ ಮಂಡಳಿ ಅಧ್ಯಕ್ಷ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ಮಂಡಳಿ ಪ್ರಧಾನ ಇಂಜಿನಿಯರ್ ಕೆ.ಪಿ.ಕೃಷ್ಣ ಕುಮಾರ್, ಜಿಲ್ಲಾ ಮಹಿಳಾ ಶಿಶು ಕಲ್ಯಾಣ ಅಧಿಕಾರಿ ಕವಿತಾ ರಾಣಿ ರಂಜಿತ್, ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಎಮುಹಮ್ಮದ್ ಹನೀಫ, ಕೆ.ಕುಂuಟಿಜeಜಿiಟಿeಜರಾಮನ್, ಕೈಪ್ರತ್ ಕೃಷ್ಣನ್ ನಂಬ್ಯಾರ್, ಎಬ್ರಾಹಂ ತೋಣಕ್ಕರ, ಸಜಿ ಸೆಬಾಸ್ಟಿನ್, ಪಿ.ಪಿ.ರಾಜು ಉಪಸ್ಥಿತರಿದ್ದರು. ಹೌಸಿಂಗ್ ಮಂಡಳಿ ಅಧ್ಯಕ್ಷ ಪಿ.ಪ್ರಸಾದ್ ಸ್ವಾಗತಿಸಿದರು. ಕಮೀಷನರ್ ಪಿ.ಎ.ಶ್ರೀವಿದ್ಯಾ ವರದಿ ವಾಚಿಸಿದರು. ವಲಯ ಇಂಜಿನಿಯರ್ ಎಸ್. ಗೋಪಕುಮಾರ್ ವಂದಿಸಿದರು.
ಮಧೂರು ಗ್ರಾಮ ಪಂಚಾಯತ್ ನಲ್ಲಿ 1757.59 ಚದರ ಅಡಿ ವಿಸ್ತೀರ್ಣದದಲ್ಲಿ ಕೇಂದ್ರ-ರಾಜ್ಯ ಸರಕಾರಗಳ, ವಸತಿ ನಿರ್ಮಾಣ ಮಂಡಳಿ ಜಂಟಿಯಾಗಿ ಈ ಹಾಸ್ಟೆಲ್ ನಿರ್ಮಿಸಲಿವೆ.