ಕುಂಬಳೆಯಲ್ಲಿ ಸಂಘಷಾವಸ್ಥೆ-ಚುನಾವಣಾ ರಿಟನಿರ್ಂಗ್ ಅಧಿಕಾರಿ ಲೀಗಿನೊಂದಿಗೆ ಕೈ ಜೋಡಿಸಿ ಡಬಲ್ ಗೇಮ್ ಆರೋಪ : ಬಿಜೆಪಿ ಸದಸ್ಯರಿಂದ ಪ್ರತಿಭಟನೆ
0samarasasudhiಅಕ್ಟೋಬರ್ 05, 2020
ಕುಂಬಳೆ: ಕುಂಬಳೆ ಗ್ರಾ. ಪಂ. ಚುನಾವಣಾ ರಿಟನಿರ್ಂಗ್ ಅಧಿಕಾರಿ ಲೀಗಿನೊಂದಿಗೆ ಕೈ ಜೋಡಿಸಿ ಮತದಾರ ಪಟ್ಟಿಯಿಂದ ಹಿಂದೂ ಮತಗಳನ್ನು ಅಳಿಸುತ್ತಿರುವುದಾಗಿ ಆರೋಪಿಸಿ ಬಿಜೆಪಿ ಪಂ. ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆ ಘರ್ಷಣೆಗೆ ತಿರುಗಿತು.
ಕುಂಬಳೆ ಪಂ. ವ್ಯಾಪ್ತಿಯಲ್ಲಿರುವ 21 ನೇ ವಾರ್ಡಿನಿಂದ ಸುಮಾರು 230 ಮತದಾರರನ್ನು ಹಾಗೂ ನಾಲ್ಕನೇ ವಾರ್ಡಿನಿಂದ 25 ಮಂದಿ ಮತದಾರರನ್ನು ಮತದಾರ ಪಟ್ಟಿಯಿಂದ ಅಳಿಸಿರುವುದಾಗಿ ಆರೋಪಿಸಲಾಗಿದೆ. ಮುಸ್ಲಿಂ ಲೀಗಿನಿಂದ ಹಣವನ್ನು ಪಡೆದು ಚುನಾವಣಾ ರಿಟನಿರ್ಂಗ್ ಅಧಿಕಾರಿ ಕೃತ್ಯಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸ್ಥಾನದಿಂದ ಉಚ್ಚಾಟಿಸುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಮಾತಿಗೆ ಮಾತು ಬೆಳೆದ ಪ್ರತಿಭಟನೆ ಘರ್ಷಣೆಗೆ ತಿರುಗಿ ಬಳಿಕ ಕುಂಬಳೆ ಪೆÇಲೀಸರು ಆಗಮಿಸಿ ಪ್ರತಿಭಟನಾನಿರತರನ್ನು ಚದುರಿಸಿದ್ದಾರೆ. ಸ್ಥಳೀಯಾಡಳಿತ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಪ್ರಸ್ತುತ ಕುಂಬಳೆ ಗ್ರಾ. ಪಂ. ಮುಸ್ಲಿಂ ಲೀಗ್ 12, ಬಿಜೆಪಿ 7, ಸಿಪಿಎಂ 2 ಕಾಂಗ್ರೆಸ್ 2 ಸ್ಥಾನಗಳನ್ನು ಹೊಂದಿದೆ.