ತಿರುವನಂತಪುರ: ರೋಗಿಯೊಬ್ಬರು ಉಲ್ಬಣಾವಸ್ಥೆಯಲ್ಲಿ ದೇಹದಲ್ಲಿ ಹುಳವಾಗಿ ಭಾರೀ ವಿವಾದವಾದ ಬೆನ್ನಿಗೆ ಸರ್ಕಾರ ನಡೆಸಿದ ಶಿಸ್ತು ಕ್ರಮವನ್ನು ಖಂಡಿಸಿ ಕರ್ತವ್ಯದಿಂದ ಅಮಾನತುಗೊಂಡ ವೈದ್ಯರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸರ್ಕಾರಿ ವೈದ್ಯರು ಮುಷ್ಕರ ತೀವ್ರಗೊಳಿಸುತ್ತಿದ್ದಾರೆ. ಇದರ ಭಾಗವಾಗಿ ಓಪಿ ವಿಭಾಗ ಇಂದು ಎರಡು ಗಂಟೆಗಳ ಕಾಲ ರಾಜ್ಯಾದ್ಯಂತ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಮುಷ್ಕರ ನಡೆಸಲಿದೆ. ಮುಷ್ಕರ ಬೆಳಿಗ್ಗೆ ಎಂಟರಿಂದ ಹತ್ತು ರವರೆಗೆ ನಡೆಯಲಿದೆ.
ಅಮಾನತು ನಿರ್ಧಾರವನ್ನು ಹಿಂತೆಗೆಯದಿದ್ದರೆ ಮುಷ್ಕರ ಅನಿರ್ದಿಷ್ಟಾವಧಿಯವರೆಗೆ ವಿಸ್ತರಿಸಲಾಗುವುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ತರಗತಿಗಳನ್ನು ಸ್ಥಗಿತಗೊಳಿಸಲು ಮತ್ತು ಕೋವಿಡ್ ನೋಡಲ್ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಲು ವೈದ್ಯರು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ವೈದ್ಯರಲ್ಲದೆ, ದಾದಿಯರ ಸಂಘಟನೆಯಾದ ಕೆ.ಜಿ.ಎನ್.ಎ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಿಲೇ ಸತ್ಯಾಗ್ರಹವನ್ನು ಪ್ರಾರಂಭಿಸಿದೆ. ಮುಷ್ಕರವು ಕೋವಿಡ್ ಚಿಕಿತ್ಸೆ, ತುರ್ತು ವಿಭಾಗಗಳು ಮತ್ತು ಶಸ್ತ್ರಚಿಕಿತ್ಸೆಗಳ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ತಿಳಿದುಬಂದಿದೆ.
ಕೋವಿಡ್ ರೋಗಿಯೊಬ್ಬರು ಚಿಕಿತ್ಸೆಯ ವೇಳೆ ಮೈಮೇಲೆ ಹುಳ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿ ಡಾ.ಅರುಣ ಮತ್ತು ಮುಖ್ಯ ದಾದಿಯರಾದ ಲೀನಾ ಮತ್ತು ಕುಂಜನ್ ಅವರನ್ನು ಸರ್ಕಾರ ಕರ್ತವ್ಯ ಲೋಪದ ಅಡಿಯಲ್ಲಿ ಅಮಾನತುಗೊಳಿಸಿತ್ತು. ಈ ವಿದ್ಯಮಾನದ ಬಳಿಕ ಆರೋಗ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವೈದ್ಯಕೀಯ ಶಿಕ್ಷಣ ಅಧಿಕಾರಿಯ ಪ್ರಾಥಮಿಕ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರನೇ ವಾರ್ಡ್‍ನ ಅಧಿಕಾರಿಗಳು ಘಟನೆಯಲ್ಲಿ ಗಂಭೀರ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಗ್ಯ ಶಿಕ್ಷಣ ನಿರ್ದೇಶಕರು ಮತ್ತು ವೈದ್ಯಕೀಯ ಕಾಲೇಜಿನ ಅಧೀಕ್ಷಕರು ಬೊಟ್ಟುಮಾಡಿದ್ದರು.
ರೋಗಿಗಳ ಆರೈಕೆಯಲ್ಲಿ ನೇರವಾಗಿ ಮಧ್ಯಪ್ರವೇಶಿಸದ ಕಾರಣ ಡಾ.ಅರುಣಾ ಅವರನ್ನು ಅಮಾನತುಗೊಳಿಸಿದ್ದರ ಬಗ್ಗೆ ವೈದ್ಯರು ತೀವ್ರ ಅಸಮಧಾನಗೊಂಡಿದ್ದಾರೆ. ಘಟನೆಯಲ್ಲಿ ನಿಜವಾದ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ವೈದ್ಯರು ಮತ್ತು ದಾದಿಯರ ಸಂಘಟನೆಗಳು ಆರೋಪಿಸಿವೆ. ನಿಜವಾದ ಅಪರಾಧಿಯ ವಿರುದ್ಧ ಯಾವ ಕ್ರಮ ಕೈಗೊಂಡರೂ ಸಂಘಟನೆ ಧ್ವನಿಯೆತ್ತದೆಂದು ಹೇಳಲಾಗಿದೆ.
ವಟ್ಟಿಯೂರ್ಕಾವ್ ನ ಅನಿಲ್ ಕುಮಾರ್ ವಿರುದ್ದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಎ.ರಾಮ್ಲಾ ಬೀವಿ ಅವರು ಸಲ್ಲಿಸಿದ ಪ್ರಾಥಮಿಕ ತನಿಖಾ ವರದಿಯ ಆಧಾರದಲ್ಲಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ಅಮಾನತು ನಿರ್ಧಾರ ಪ್ರಕಟಿಸಿತ್ತು.