ಕಾಸರಗೋಡು: ಮಂಜೇಶ್ವರ ಬ್ಲೋಕ್ ಪಂಚಾಯತ್ ಆಶ್ರಯದಲ್ಲಿ ಮಂಗಲ್ಪಾಡಿ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾದ ಶವಾಗಾರ ಶನಿವಾರ ಲೋಕಾರ್ಪಣೆಗೊಂಡಿದೆ.
ಬ್ಲೋಕ್ ಪಂಚಾಯತ್ 35 ಲಕ್ಷ ರೂ. ವೆಚ್ಚದಲ್ಲಿ 2017-18 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಈ ಶವಾಗಾರ ನಿರ್ಮಿಸಿದೆ. ಮೃತದೇಹಗಳು ಹಾಳಾಗದಂತೆ ಇರಿಸುವ ನಿಟ್ಟಿನಲ್ಲಿ ಮೂರು ಫ್ರೀಝರ್ ಗಳ ಸೌಲಭ್ಯಗಳೂ ಇಲ್ಲಿವೆ.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಶವಾಗಾರ ಉದ್ಘಾಟಿಸಿದರು. ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಸದಸ್ಯೆಯರಾದ ಸಾಯಿರಾ ಬಾನು, ಮಿಸ್ಬಾನಾ ಬಂದ್ಯೋಡು, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ.ಮುಸ್ತಫಾ, ಡಾ.ಹರಿಕೃಷ್ಣ, ಆಸ್ಪತ್ರೆ ಆಡಳಿತೆ ಸಮಿತಿ ಸದಸ್ಯರಾದ ರಾಘವ ಚೇರಾಲ್, ಝೆಡ್.ಎ.ಕಯ್ಯಾರ್, ಮಹಮೂದ್ ಕೈಕಂಬ, ಕೋಸ್ಮೋಸ್ ಹಮೀದ್, ಕೆ.ಪಿ.ಮುನೀರ್, ಕಿಡ್ನಿ ಫೌಂಡೇಷನ್ ಅಧ್ಯಕ್ಷ ಅಬು ತಮಾಂ, ಕಾರ್ಯದರ್ಶಿ ರೈಷಾದ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.