HEALTH TIPS

ಕಿವುಡರಿಗೆ ಸರ್ಕಾರಿ ಉದ್ಯೋಗ ಇಲ್ಲ ಎಂಬುದು ಆಧಾರರಹಿತ ಸುದ್ದಿ-ಸಚಿವೆ ಕೆ.ಕೆ.ಶೈಲಜಾ

 

           ತಿರುವನಂತಪುರ: ಕಿವುಡರಿಗೆ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳಿಲ್ಲ ಎಂಬ ಸುದ್ದಿ ಆಧಾರ ರಹಿತವಾದುದು ಎಂದು ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಸರ್ಕಾರ ಅಂತಹ ನಿರ್ಧಾರ ಕೈಗೊಂಡಿಲ್ಲ ಎಂದವರು ದೃಢಪಡಿಸಿದರು.

         ತಜ್ಞರ ಸಮಿತಿಯ ಶಿಫಾರಸುಗಳ ಪ್ರಕಾರ, ವಿಕಲಚೇತನರಿಗೆ ಮೀಸಲಾಗಿರುವ ಶೇ 4 ರಷ್ಟು ಮೀಸಲಾತಿಯಲ್ಲಿ 49 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಈ 49 ಹುದ್ದೆಗಳಲ್ಲಿ, ಸಂಪೂರ್ಣ ವಿಕಲ ಚೇತನತೆ ಇಲ್ಲದವರಿಗೆ ಇನ್ನೂ ಅನೇಕ ಹುದ್ದೆಗಳಿವೆ. ಈ ಏಕ ಅಧಿಸೂಚನೆಯೊಂದಿಗೆ, ಕಿವುಡರಿಗೆ ಅಂಗವೈಕಲ್ಯ ಮೀಸಲಾತಿ ಇಲ್ಲ ಎಂದು ಹೇಳುವುದು ಆಧಾರ ರಹಿತವಾಗಿದೆ ಎಂದು ಸಚಿವೆ ಸ್ಪಷ್ಟಪಡಿಸಿರುವರು.

       ಅಂಗವೈಕಲ್ಯ ಹಕ್ಕುಗಳ ಹೊಸ ಕಾಯ್ದೆ 2016 ರ ಪ್ರಕಾರ, ಸರ್ಕಾರ ನೇಮಕ ಮಾಡಿದ ತಜ್ಞರ ಸಮಿತಿಯು ಪ್ರತಿ ಹುದ್ದೆಯ ಸೂಕ್ತತೆಯನ್ನು ಪರಿಶೀಲಿಸುತ್ತದೆ. ಪ್ರತಿ ಉದ್ಯೋಗದ ಅವಶ್ಯಕತೆಗಳನ್ನು ಅವಲಂಬಿಸಿ, ಪರಿಣಿತ ವೈದ್ಯರ ತಂಡವು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡುತ್ತದೆ ಮತ್ತು ಅದು ಸೂಕ್ತವಾದುದನ್ನು ನಿರ್ಧರಿಸುತ್ತದೆ ಎಮದು ಸಚಿವೆ ಶೈಲಜಾ ಶನಿವಾರ ಮಾಧ್ಯಮಗಳಿಗೆ ತಿಳಿಸಿರುವರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries