ಕಣ್ಣೂರು: ಸರ್ಕಾರಿ ನಿಯಂತ್ರಿತ ವೈದ್ಯಕೀಯ ಸೇವೆಗಳ ನಿಗಮವು ಆರೋಗ್ಯ ಕಾರ್ಯಕರ್ತರಿಗೆ ವಿತರಿಸುವ ಪಿಪಿಇ ಕಿಟ್‍ನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕರ್ತವ್ಯದಲ್ಲಿದ್ದ ದಾದಿಯರು ಪಿಪಿಇ ಕಿಟ್‍ನಲ್ಲಿ ರಕ್ತದ ಕಲೆ ಕಂಡುಬಂದ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವರು. ಶನಿವಾರ ವಿತರಿಸಲಾದ ಕಿಟ್ ಗಳಲ್ಲಿ ಇಂತಹ ರಕ್ತದ ಕಲೆಗಳು ಪತ್ತೆಯಾಗಿದ್ದು ಬಳಿಕ ಕಿಟ್‍ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಹೆಚ್ಚಿನವು ರಕ್ತದ ಕಲೆಗಳನ್ನು ಹೊಂದಿರುವುದು ಕಂಡುಬಂದಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಕಿಟ್‍ಗಳನ್ನು ಬದಲಾಯಿಸಲಾಯಿತು.