ವಾಷಿಂಗ್ಟನ್: ಇಡೀ ವಿಶ್ವಕ್ಕೆ ಕೊರೋನಾ ಹರಡಿದ ಚೀನಾ ರಾಷ್ಟ್ರ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೇ ಸಂದೇಶವೊಂದನ್ನು ಹಂಚಿಕೊಂಡಿರುವ ಟ್ರಂಪ್ ಅವರು ಕೊರೋನಾ ಸಾಂಕ್ರಾಮಿಕ ವಿಚಾರದಲ್ಲಿ ಚೀನಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸಲು ನಾನು ಹೊರಟಿದ್ದೇನೆ. ಅದಕ್ಕಾಗಿ ನೀವು ಬೆಲೆ ತೆರಬೇಕಿಲ್ಲ. ಕೊರೋನಾ ಸೋಂಕಿಗೊಳಗಾಗಿರುವುದು ನಿಮ್ಮ ತಪ್ಪಲ್ಲ. ಇದು ಚೀನಾ ಮಾಡಿದ ತಪ್ಪು. ಇಡೀ ವಿಶ್ವಕ್ಕೆ ಕೊರೋನಾ ಹರಡಿದ ಆ ರಾಷ್ಟ್ರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮಗೆ ಕೊರೋನಾ ವೈರಸ್ ಸೋಂಕು ತಗಲಿದ್ದು, ದೇವರ ಆಶೀರ್ವಾದ ಎಂದಿರುವ ಅವರು, ರೋಗಕ್ಕೆ ನೀಡುವ ಸಂಭಾವ್ಯ ಔಷಧ, ಚಿಕಿತ್ಸೆಯ ಬಗ್ಗೆ ತಮಗೆ ಈ ಮೂಲಕ ಅರಿವು ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 3 ರಂದು ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ನಂತರ ಜನತೆಯನ್ನು ಹಿಂಡಿ, ಹಿಪ್ಪೆ ಮಾಡುತ್ತಿರುವ ಜಾಡ್ಯ ಕೊರೋನ ನಿಗ್ರಹಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಟ್ರಂಪ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಮುಂಚಿತವಾಗಿಯೇ ದೇಶ ಲಸಿಕೆ ಹೊಂದಿರಬೇಕು ಎಂಬುದು ಜನತೆಯ ಆಡಳಿತದ ಆಶಯವಾಗಿದೆ. ಚುನಾವಣೆಯ ಸಮಯದಲ್ಲಿ ಎಲ್ಲರೂ ರಾಜಕಿಯ ಆಟ ಆಡಲು ಬಯಸುತ್ತಾರೆ ಆದರೂ ಚುನಾವಣೆಯ ನಂತರ ಎಲ್ಲವೂ ಸರಿಯಾಗಲಿದೆ ಎಂಬ ಅದಮ್ಯ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಕರೋನ ದಿಂದ ಅಮೆರಿಕದಲ್ಲಿ ಈವರೆಗೆ 2 ಲಕ್ಷ ಜನರು ಮೃತಪಟ್ಟಿದ್ದಾರೆ ಜಾಗತಿಕವಾಗಿ ಹೆಚ್ಚು ಬಾದಿತ ರಾಷ್ಟ್ರವಾಗಿದೆ.