ಕುಂಬಳೆ: ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ಕಿರಿ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಕರಾಟೆಗೆ ಆದ್ಯತೆ ನೀಡಿದ ಆದ್ಯಾ ಎ.ಜಿ. ಬ್ಲಾಕ್ ಬೆಲ್ಟ್ ಪದವಿ ಗಳಿಸಿಕೊಳ್ಳುವ ಮೂಲಕ ತನ್ನ ಬಾಲ್ಯ ಕಾಲ ಸಾಧನೆಗೆ ಸಾಕ್ಷಿಯಾಗಿದ್ದಾಳೆ.
ಕುಂಬಳೆ ಸಮೀಪದ ಶಾಂತಿಪಳ್ಳದ ಗೋಪಾಲಕೃಷ್ಣ- ಅನಿತಾ ದಂಪತಿಗಳ ಪುತ್ರಿಯಾದ ಆದ್ಯಾ ಎ.ಜಿ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ. ಸೆನ್ಸಾಯಿ ವಿ.ಬಿ.ಸದಾನಂದ ಎಂಬವರ ಬಳಿ ಕರಾಟೆಯನ್ನು ಕರಗತ ಮಾಡಿಕೊಳ್ಳುತ್ತಿರುವ ಆದ್ಯಾ ಈ ಹಿಂದೆ ಕಾಸರಗೋಡಿನಲ್ಲಿ ಜರಗಿದ ಜಿಲ್ಲಾ ಮಟ್ಟ, ಎರ್ನಾಕುಳಂನಲ್ಲಿ ಜರಗಿದ ರಾಜ್ಯ ಮಟ್ಟದ ಕರಾಟೆ ಪಂದ್ಯಗಳನ್ನು ಹಾಗೂ ದ.ಕ.ಜಿಲ್ಲೆಯ ಮಂಗಳೂರಿನ ಕದ್ರಿಯಲ್ಲಿ ಜರಗಿದ ಕರಾಟೆ ಸ್ಪರ್ಧೆ,ಕುಂಬಳೆಯ ಅನಂತಪುರದಲ್ಲಿ ಜರಗಿದ ನೇಶನಲ್ ಓಪನ್ ಕರಾಟೆ ಪಂದ್ಯವನ್ನು ಪ್ರತಿನಿಧಿಕರಿಸಿ ಬಹುಮಾನ ಪಡೆದಿದ್ದಾಳೆ.