ಕುಂಬಳೆ: ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣೆ ಬುಡಮೇಲುಗೊಳಿಸಲು ಮುಸ್ಲಿಂ ಲೀಗ್ ಹಾಗೂ ಎಡರಂಗ ತಂತ್ರ ಹಣೆದಿದ್ದು ಕೆಲವು ಪಂಚಾಯತ್ ಗಳ ಚುನಾವಣಾ ಅಧಿಕಾರಿಗಳು ಹಾಗೂ ತಾತ್ಕಾಲಿಕ ಉದ್ಯೋಗಿಗಳು ಶಾಮೀಲಾಗಿದ್ದರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಗಂಭೀರ ಆರೋಪ ಮಾಡಿದೆ.
ಮತದಾರ ಪಟ್ಟಿಯಲ್ಲಿ ಕೃತ್ರಿಮತೆ ನಡೆಸಿ ಉದ್ದೇಶ ಪೂರ್ವಕವಾಗಿ ಹಿಂದೂ ಮತದಾರರನ್ನು ಕಾನೂನು ಪಾಲಿಸದೆ ಮತದಾರ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿರುವುದು ಬಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕುಂಬಳೆ ಪಂಚಾಯತ್ ನ 4 ವಾರ್ಡ್ ನಲ್ಲಿ ಹಾಗೂ ಬಿಜೆಪಿ ಚುನಾಯಿತ ಸದಸ್ಯರಿರುವ ವಾರ್ಡಗಳಲ್ಲಿ 100 ಕ್ಕೂ ಅಧಿಕ ಹಿಂದೂ ಮತಗಳನ್ನು, ವಾರ್ಡ್ ನಲ್ಲಿ ವಾಸ್ತವ್ಯವಿರುವ ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆಯಲಾಗಿದ್ದು ಇದು ಅಧಿಕಾರಿಗಳು ಆಡಳಿತ ಪಕ್ಷ ಮುಸ್ಲಿಂ ಲೀಗ್ ನೊಂದಿಗೆ ಸೇರಿ ಮಾಡಿರುವ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.
ಕಾನೂನು ಪ್ರಕಾರ ಹೆಸರು ತೆಗೆಯಬೇಕಾದರೆ ಹೆಸರು ಹಿಂಪಡೆಯಬೇಕಾದವರ ಬಗ್ಗೆ ಅಪೇಕ್ಷೆ ಅರ್ಜಿ ಸಲ್ಲಿಸಬೇಕು. ಅಂತವರು ಇದ್ದರೆ ವಾರದ ಮೊದಲು ನೋಟಿಸ್ ಜಾರಿ ಮಾಡಬೇಕು.ನಂತರ ಚುನಾವಣಾ ಅಧಿಕಾರಿಗಳೇ ಅಂತಹ ಮನೆ ಸಂಪರ್ಕ ಮಾಡಿ ನೈಜತೆಯನ್ನು ಪರಿಶೀಲನೆ ಮಾಡಬೇಕು. ಆದರೆ ಇದೀಗ ಯಾವುದೇ ಕಾನೂನುಗಳನ್ನು ಪಾಲಿಸದೆ ಹಿಂದೂ ವೋಟರ್ ಗಳನ್ನು ಡಿಲೀಟ್ ಮಾಡಿ ಅಧಿಕಾರಿಗಳು ವಂಚನೆಗೈಯ್ಯಲು ದೊಡ್ಡಮಟ್ಟದಲ್ಲಿ ಎಲ್ಲ ಪಂಚಾಯತ್ ಗಳಲ್ಲಿ ಪ್ರಯತ್ನ ಮಾಡಿದೆ. ಇಂತಹ ಅನಧಿಕೃತ ಚುನಾವಣಾ ತಂತ್ರದ ವಿರುದ್ಧ ಬಿಜೆಪಿ ಬಹಿರಂಗವಾಗಿ ಹೋರಾಟ ಮಾಡಲಿದೆ. ಅಧಿಕಾರಿಗಳ ವಿರುದ್ದ ದೂರು ದಾಖಲಿಸಿ ಕಾನೂನು ಹೋರಾಟಕ್ಕೆ ಬಿಜೆಪಿ ತೀರ್ಮಾನಿಸಿದೆ ಎಂದು ಪ್ರಕಟಣೆಯಲ್ಲಿ ಸಂಬಂಧಪಟ್ಟವರು ಎಚ್ಚರಿಸಿದ್ದಾರೆ.