HEALTH TIPS

ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಮುಕ್ತರಾದವರಲ್ಲಿ ಭಾರತ ಪ್ರಥಮ-ಆರೋಗ್ಯ ಸಚಿವಾಲಯ

   

       ನವದೆಹಲಿ: ಕೋವಿಡ್ ಮುಕ್ತರಾದವರಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಾಪ್ತಾಹಿಕ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಸಾಪ್ತಾಹಿಕ ಸಕಾರಾತ್ಮಕತೆ 6.82ಶೇ. ತಲುಪಿದೆ. ಈ ಮೊದಲು ಅದು 7.87 ಆಗಿತ್ತು. ಕಳೆದ ಎರಡು ವಾರಗಳಲ್ಲಿ, ರೋಗ ಬಾಧಿತರಲ್ಲಿ ಸುಧಾರಣೆ ಕಂಡುಬಂದಿದೆ.  ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಎರಡು ವಾರಗಳಿಂದ ರೋಗಿಗಳ ಸಂಖ್ಯೆ ಒಂದು ದಶಲಕ್ಷಕ್ಕಿಂತ ಕಡಿಮೆಯಾಗಿದೆ ಎಮದು ಸಚಿವಾಲಯ ಬೊಟ್ಟುಮಾಡಿದೆ.

       ಪ್ರಸ್ತುತ ರೋಗಿಗಳಲ್ಲಿ ಎಪ್ಪತ್ತೇಳು ಪ್ರತಿಶತ 10 ರಾಜ್ಯಗಳಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಲ್ಲಿ ಅತಿ ಹೆಚ್ಚು ರೋಗಿಗಳಿದ್ದಾರೆ. ಸೋಂಕು ಬಾಧಿತರಲ್ಲಿ ಸುಮಾರು 50 ಪ್ರತಿಶತ ಜನರು ಇಲ್ಲಿದ್ದಾರೆ. ಮಹಾರಾಷ್ಟ್ರ - ಶೇ 27.50, ಕರ್ನಾಟಕ ಶೇ 12.57 ಮತ್ತು ಕೇರಳ ಶೇ 9.24.ರಷ್ಟಿದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,  ಗರಿಷ್ಠ ಹೆಚ್ಚಳ ಕೇರಳದಲ್ಲಿ ಕಂಡುಬರುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries