ಕಾಸರಗೋಡು: ಕೋವಿಡ್ ಮಹಾಮಾರಿಯಿಂದ ಲೋಕವ ತತ್ತರಿಸಿದ ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ರೋಗ ಹರಡುವಿಕೆ ತೀವ್ರಗೊಂಡ ಹಿನ್ನೆಲೆ ಟಾಟಾ ಗ್ರೂ ಪ್ ನೆರವಿನಿಂದ ಕೇವಲ 124 ದಿನದಲ್ಲಿ 541 ಹಾಸಿಗೆಯ ಆಸ್ಪತ್ರೆ ಪೂರ್ತಿಗೊಳಿಸಿ ರಾಜ್ಯ ಸರ್ಕಾರ ಕ್ಕೆ ಹಸ್ತಾಂತರಿಸಿ ತಿಂಗಳು ಕಳೆದರೂ ಕೋವಿಡ್ ರೋಗಿಗಳ ಚಿಕಿತ್ಸೆ ಗೆ ತೆರೆಯಲು ಹಿಂದೇಟು ಹಾಕುತ್ತಿದೆ. ಈಗಾಗಲೆ ಜಿಲ್ಲೆಯಲ್ಲಿ ಹಲವು ಜೀವಗಳು ಬಲಿ ಪಡೆದು ಕೊಂಡ ಈ ರೋಗದ ತೀವ್ರತೆಯನ್ನು ಅರಿಯದೆ ಇನ್ನೂ ಜನರ ಜೀವದ ಜೊತೆ ಚೆಲ್ಲಾಟ ಅಡುತಿರುವ ಕೇರಳ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಅನಾವಸ್ಥೆ ಗೆ ಎದುರಾಗಿ ಈಗಾಗಲೇ ತುಂಬು ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳು , ಡಯಾಲಿಸಿಸ್ ಹಾಗೂ ಇನ್ನಿತರ ರೋಗಿಗಳು ಚಿಕಿತ್ಸೆಗೆ ಪರದಾಡುತ್ತಿದ್ದು ಪ್ರತಿಪಕ್ಷದ ಕೆಂಗಣ್ಣಿಗೆ ಕಾರಣವಾಗಿದೆ.