HEALTH TIPS

ಕೋವಿಡ್ ಮರಣ- ಪುರುಷರಲ್ಲಿ ಮರಣ ಪ್ರಮಾಣ ಹೆಚ್ಚು; ಹೆಚ್ಚಿನ ಸಾವುಗಳು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ನಿಂದ-ಆರೋಗ್ಯ ಇಲಾಖೆ

     

           ತಿರುವನಂತಪುರ: ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಕೋವಿಡ್ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನು ಅನುಸರಿಸಿ, ಡಯಾಲಿಸಿಸ್ ಕೇಂದ್ರಗಳು ಮತ್ತು ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಸೋಂಕು ನಿಯಂತ್ರಣವನ್ನು ಬಲಪಡಿಸಲು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ. ಆಗಸ್ಟ್‍ನ ಕೋವಿಡ್ ಸಾವಿನ ಪರಿಶೀಲನಾ ವರದಿಯಲ್ಲಿ ಈ ಶಿಫಾರಸುಗಳನ್ನು ಸ್ಪಷ್ಟಪಡಿಸಲಾಗಿದೆ.

       ಕಳೆದ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ 225 ಸಾವುಗಳಲ್ಲಿ 223 ಸಾವುಗಳು ಕೋವಿಡ್ ಕಾರಣದಿಂದ ಎನ್ನುವುದನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಸಾವನ್ನಪ್ಪಿದವರಲ್ಲಿ 120 ಜನರಿಗೆ ತೀವ್ರ ಮಧುಮೇಹವಿದೆ (47.6). ಅಧಿಕ ರಕ್ತದೊತ್ತಡ ಹೊಂದಿರುವ ಎಲ್ಲಾ 116 ಜನರು ಸಾವನ್ನಪ್ಪಿದರು. ಹೃದಯ ಸಮಸ್ಯೆಯಿಂದ ಐವತ್ನಾಲ್ಕು ಜನರು ಮತ್ತು ಮೂತ್ರಪಿಂಡ ಕಾಯಿಲೆ ಇರುವ 36 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ ನಲ್ಲಿ ನಿಧನರಾದ 15 ರಷ್ಟು ಸೋಂಕಿತರು ಕ್ಯಾನ್ಸರ್ ರೋಗಿಗಳಾಗಿದ್ದರೆಂದು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

        ಈ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರದೇಶಗಳು ಸೋಂಕು ಮುಕ್ತವಾಗಿರಬೇಕು ಎಂಬ ಶಿಫಾರಸ್ಸನ್ನು ಇಲಾಖೆ ಸರ್ಕಾರದ ಮುಂದಿಟ್ಟಿದೆ. ರಿವರ್ಸ್ ಕ್ಯಾರೆಂಟೈನ್ ಕುಸಿತವು 61 ಸಾವುಗಳಿಗೆ ಕಾರಣವಾಯಿತು. ಕೊವಿಡ್ ನಿಂದ ಮರಣ ಹೊಂದಿದ  13 ಜನರಲ್ಲಿ ಸೋಂಕು ಮರಣದ ನಂತರವಷ್ಟೇ ಖಾತ್ರಿಪಡಿಸಲಾಗಿದೆ. ಕೋವಿಡ್ ಬಾಧಿಸಿದವರನ್ನು ಆಸ್ಪತ್ರೆಗೆ ದಾಖಲಿಸಿದರೆ ಇನ್ನು ಕಟ್ಟುನಿಟ್ಟಾಗಿ ಇತರ ಆರೋಗ್ಯ ಸಮಸ್ಯೆಗಳ ಬಗೆಗೂ ಪರೀಕ್ಷಿಸಬೇಕು ಎಂದು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.

       ಆಗಸ್ಟ್ ನಲ್ಲಿ ಕೋವಿಡ್ ಸಾವಿನ ಪರಾಮರ್ಶೆಯ ಪ್ರಕಾರ, ಕೋವಿಡ್ ಮೃತರಲ್ಲಿ ಪುರುಷರ ಪ್ರಮಾಣ ಹೆಚ್ಚಿದೆ. 223 ರಲ್ಲಿ 157 ಪುರುಷರು ಮತ್ತು 66 ಮಹಿಳೆಯರು ಆಗಿದ್ದಾರೆ. ತಿರುವನಂತಪುರ (34) ಮತ್ತು ಕೊಲ್ಲಂ (31) ಜಿಲ್ಲೆಗಳಲ್ಲಿ ಕೇರಳದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸಿದ ಪ್ರದೇಶಗಳಾಗಿವೆ ಎಂದು ವರದಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries